Home Blog Page 62
ಕರ್ನಾಟಕ: ಅಕ್ಟೋಬರ್ 14: ಮುಂದಿನ 24 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ , ಕೊಡಗು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ಜಿಲ್ಲೆಗಳ...
ಬೆಂಗಳೂರು, ಅಕ್ಟೋಬರ್ 14- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ರಾಜ್ಯ ಸರ್ಕಾರದ “ಪುಣ್ಯಕೋಟಿ ದತ್ತು ಯೋಜನೆ”ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಿತರ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವ ಕುರಿತು ಸಮ್ಮತಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ಮುಖ್ಯಮಂತ್ರಿಯವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದು, ಗ್ರೂಪ್...
ಇತ್ತಿಚೀನ ದಿನಗಳಲ್ಲಿ ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ   ಚರ್ಮಗಂಟು ರೋಗ ತಡೆಗಟ್ಟಲು ರೋಗ ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ನಿಷೇಧ ಹೇರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚರ್ಮಗಂಟು ರೋಗ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜಾನುವಾರು ಜಾತ್ರೆ, ಜಾನುವಾರು ಸಂತೆ ‌ಮತ್ತು ಸಾಗಾಣಿಕೆಯನ್ನು ನಿಷೇಧಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚರ್ಮಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ವೈರಾಣು ಮುಖ್ಯ ಕಾರಣ. ಈ ವೈರಾಣುವಿನ...
*ಕಬ್ಬು ಅರೆಯಲು ಕಾರ್ಖಾನೆಗಳನ್ನು ಸೂಕ್ತ ಸಮಯದಲ್ಲಿ ಪ್ರಾರಂಭ ಮಾಡದೇ ವಿಳಂಬ ಮಾಡಿ ಕಬ್ಬು ಅರೆಯಲು ಪ್ರಾರಂಭ ಮಾಡುವುದು. *ಕಬ್ಬು ಕಟ್ಟಾವು ಮಾಡುವಲ್ಲಿ ವಿಳಂಬ ಧೋರಣೆ. *ಕಟ್ಟಾವು ವಿಳಂಬದಿಂದ ಕಬ್ಬಿನ ಇಳುವರಿ ಕುಂಠಿತವಾಗುತ್ತಿರುವುದು. *ನೋಂದಾಯಿತ ರೈತರ ಕಬ್ಬನ್ನು ಜೇಷ್ಠತೆ ಆಧಾರದಲ್ಲಿ ಕಟ್ಟಾವು ಮಾಡದೇ ಇರುವುದು. *ಕಾರ್ಖಾನೆ ಸಾಮರ್ಥ್ಯಕ್ಕೆ ತಕ್ಕಂತೆ ಕಬ್ಬು ಅರೆಯದೆ ಕುಂಟು ನೆಪ ಹೇಳುವುದು. *ಕಟ್ಟಾವು ಮಾಡಲು ವಿಪರೀತ ಕೂಲಿ ವಸೂಲಿ ಮಾಡುತ್ತಿರುವುದು. *ದುಬಾರಿ ಸಾಗಾಟದ ವೆಚ್ಚ. *ತೂಕ ಮತ್ತು ಇಳುವರಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು. *ಹಣ ಪಾವತಿಯಲ್ಲಿ ಆಗುತ್ತಿರುವ ವ್ಯತ್ಯಾಸ ಮತ್ತು ವಿಳಂಬ....
ಕರ್ನಾಟಕ: ಅಕ್ಟೋಬರ್ 13: ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. 15ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳು: ಒಳನಾಡಿನಲ್ಲಿ ವ್ಯಾಪಕವಾಗಿ ಮತ್ತು ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು...
ಬೆಂಗಳೂರು: ಕೃಷಿಕರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಅವರಿಗೆ ಆರೋಗ್ಯ ವಿಮೆ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವ ಯಶಸ್ವಿನಿ ಯೋಜನೆ ಮರು ಅನುಸ್ಠಾನಗೊಂಡಿದೆ. ಈ ಸಂಬಂಧ  ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ  ಸೂಚನೆಯಂತೆ ಸಹಕಾರ ಇಲಾಖೆಯ ಸಚಿವಾಲಯ ಇಂದು ಅಂದರೆ ಅಕ್ಟೋಬರ್ 12, 2022ರಂದು  ಆದೇಶ ಹೊರಡಿಸಿದೆ. ಇದರಿಂದ ಅಪಾರ ಸಂಖ್ಯೆಯ ಕೃಷಿಕರಿಗೆ ನೆರವಾಗಲಿದೆ. ಈ ಆದೇಶದಂತೆ ಯಶಶ್ವಿನಿ ಯೋಜನೆ ನವೆಂಬರ್ 01, 2022ರಿಂದ ಅನುಷ್ಠಾನಗೊಳ್ಳಲಿದೆ.  2022 – 2023ನೇ ಸಾಲಿನ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು....
14ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ಒಳನಾಡಿನಲ್ಲಿ ವ್ಯಾಪಾಕವಾಗಿ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು:  ಒಳನಾಡಿನಲ್ಲಿ ವ್ಯಾಪಾಕವಾಗಿ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ. ಗುಡುಗು ಮುನ್ಸೂಚನೆ:   ಮುಂದಿನ 24 ಘಂಟೆಗಳು  ರಾಜದಾದ್ಯಂತ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು...
ದೇಶದಲ್ಲಿ 314.5 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ದಾಸ್ತಾನು ಇದೆ. ಇದು ಬೃಹತ್ ಸಾಧನೆ. ದೇಶದಲ್ಲಿರುವ ಎಲ್ಲರಿಗೂ ಆಹರ ನೀಡುವಷ್ಟು ಮಟ್ಟದಲ್ಲಿ ಆಹಾರ ಧಾನ್ಯ ಸಂಗ್ರಹಣೆ ಇದೆ. 125 ಮಿಲಿಯನ್ ಪ್ರಮಾಣದ ಬಫರ್ ದಾಸ್ತಾನು ಇದೆ. ಯಾವುದೇ ವಿಪತ್ತು ಬಂದರೂ ನಾವು ಅದನ್ನು ನಿಭಾಯಿಸಬಹುದು. ಇವತ್ತು ನಾವು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ 57ನೇ ಸಂಸ್ಥಾಪನಾ ದಿನ ಆಚರಣೆ ಮಾಡುತ್ತಿದ್ದೇವೆ. ವಿಶ್ವವಿದ್ಯಾಲು ನಿರ್ಮಾಣ ರೂಪಿಸುತ್ತಿರುವ ಸಾವಿರಾರು ಮಂದಿ ವಿದ್ಯಾರ್ಥಿಗಳು, ಇಲ್ಲಿರುವ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಅಥವಾ ಇವರೆಲ್ಲರ ನಾಯಕರಿರಬಹುದು. ಆಹಾರ ಭದ್ರತೆ ವಿಚಾರದಲ್ಲಿ ಇಂಥವರೆಲ್ಲರ...
ಬೆಂಗಳೂರು: ಅಕ್ಟೋಬರ್ 11:  ಹಸಿರು ಕ್ರಾಂತಿ ಸಂದರ್ಭದಲ್ಲಿ ಸ್ಥಾಪನೆಯಾದ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ ಸಫಲಗೊಂಡಿದೆ ಎಂದು ಹೈದ್ರಾಬಾದ್ ಮ್ಯಾನೇಜ್ ಸಂಸ್ಥೆಯ ಮಹಾನಿರ್ದೇಶಕ ಡಾ. ಚಂದ್ರಶೇಖರ್ ಪ್ರತಿಪಾದಿಸಿದರು. ಅವರಿಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ 57ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹಸಿರು ಕ್ರಾಂತಿ ಯೋಜನೆ ಸಂದರ್ಭದಲ್ಲಿ  ಕೃಷಿ ಬೆಳವಣಿಗೆಗಾಗಿ ಹಲವಾರು ¸ ಸಂಸ್ಥೆಗಳು ಪ್ರಾರಂಭಗೊAಡವು, ಅದರ ಪರಿಣಾಮವಾಗಿ 1964ರಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಸ್ಥಾಪಿತವಾಯಿತು. ಕೃಷಿ ವಿಶ್ವವಿದ್ಯಾನಿಲಯಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ...
ಭತ್ತ: ಕೆ.ಎಂ.ಪಿ-225: ಈ ತಳಿಯು ಅಲ್ಪಾವಧಿ ತಳಿಯಾಗಿಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿದೆ. ಈ ತಳಿಯ ಅಕ್ಕಿಯು ಬಿಳಿ ಬಣ್ಣದಾಗಿದ್ದು, ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಐಆರ್-64 ಭತ್ತದ ಕಾಳುಗಳ ಹಾಗೆ ಹೆಚ್ಚಾಗಿ ಹೋಲುತ್ತವೆ. ಐಆರ್-64 ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-225 ತಳಿಯು ಎಲೆ ಹಾಗೂ ಕುತ್ತಿಗೆ ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆಯನ್ನು ಹೊಂದಿರುತ್ತದೆೆ. ಆದ ಕಾರಣ ಬೆಂಕಿರೋಗಕ್ಕೆ...

Recent Posts