ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶ ಸಫಲ

0

ಬೆಂಗಳೂರು: ಅಕ್ಟೋಬರ್ 11:  ಹಸಿರು ಕ್ರಾಂತಿ ಸಂದರ್ಭದಲ್ಲಿ ಸ್ಥಾಪನೆಯಾದ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ ಸಫಲಗೊಂಡಿದೆ ಎಂದು ಹೈದ್ರಾಬಾದ್ ಮ್ಯಾನೇಜ್ ಸಂಸ್ಥೆಯ ಮಹಾನಿರ್ದೇಶಕ ಡಾ. ಚಂದ್ರಶೇಖರ್ ಪ್ರತಿಪಾದಿಸಿದರು.

ಅವರಿಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ 57ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿ ಯೋಜನೆ ಸಂದರ್ಭದಲ್ಲಿ  ಕೃಷಿ ಬೆಳವಣಿಗೆಗಾಗಿ ಹಲವಾರು ¸ ಸಂಸ್ಥೆಗಳು ಪ್ರಾರಂಭಗೊAಡವು, ಅದರ ಪರಿಣಾಮವಾಗಿ 1964ರಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಸ್ಥಾಪಿತವಾಯಿತು. ಕೃಷಿ ವಿಶ್ವವಿದ್ಯಾನಿಲಯಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ  ಪರಿಣಾಮವಾಗಿ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಳವಾಗಲು ಕಾರಣವಾಯಿತು ಎಂದರು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಕುಲಪತಿ ಡಾ. ಕೆ.ಸಿ.ನಾರಾಯಣಸ್ವಾಮಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥಾಪನಾ ದಿನಾಚರಣೆಯು ಬಹಳ ಮಹತ್ತರವಾಗಿದ್ದು ಮುಂದಿನ ಸವಾಲುಗಳನ್ನು ನಿರ್ವಹಿಸಲು ವೇದಿಕೆಯನ್ನು ಒದಗಿಸುತ್ತದೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.

 ಹೊರದೇಶಗಳ ಕೃಷಿವಿಶ್ವವಿದ್ಯಾಲಯಗಳ ಜೊತೆ  ಬೋಧನೆ, ವಿಸ್ತರಣೆ ಮತ್ತು ಸಂಶೋಧನೆ ಕೈಗೊಳ್ಳಲು ಒಂಡಬಡಿಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಆರ್‌ಎಫ್ ಪರಿಕ್ಷೇಯಲ್ಲಿ ಪ್ರಥಮ ಸ್ಥಾನಪಡೆದಿದ್ದಾರೆ ಎಂದರು

ಒಂದು ಉತ್ಪನ್ನ ಒಂದು ಜಿಲ್ಲೆ ಯೋಜನೆಯಡಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮುಂಚೂಣಿಯಲ್ಲಿದ್ದು ಇದರ ಪ್ರಯೋಜನವನ್ನು ಕೃಷಿ ಮಹಾವಿದ್ಯಾಲಯ, ಚಾಮರಾಜನಗರ, ಕೃಷಿ ಮಹಾವಿದ್ಯಾಲಯ, ಮಂಡ್ಯ, ಕೃಷಿ ಮಹಾವಿದ್ಯಾಲಯ, ಹಾಸನ ಮತ್ತು ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಕ್ಕಬಳ್ಳಾಪುರ ಪಡೆಯಲಿವೆ ಎಂದು ತಿಳಿಸಿದರು.

ಅತ್ಯುತ್ತಮ  ಸೇವೆ ನೀಡಿದ ಶಿಕ್ಷಕರು, ವಿಜ್ಞಾನಿಗಳು, ಪದವಿ ಪಡೆದು ನಿರ್ಗಮಿಸುತ್ತಿರುವ ಸಾಧಕ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಮತ್ತು ಸಿಬ್ಬಂದಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ  ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here