ಡಾ.ಬಸವೇಗೌಡ ಕುಲಸಚಿವರು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು

ಕೃಷಿ ಭಾರತದ ಒಂದು ಪ್ರಮುಖ ಉದ್ಯಮ ಸುಮಾರು ೬೦% ಜನಸಂಖ್ಯೆಯು ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದಲ್ಲಿ ತೊಡಗಿರುತ್ತಾರೆ. ಕೃಷಿಯು ಗ್ರಾಮೀಣ ಭಾಗದಒಂದು ಪ್ರಮುಖ ಆದಾಯ ತರುವ ಚಟುವಟಿಕೆ. ಕೃಷಿಯಿಂದ ದೇಶದ ಆದಾಯಕ್ಕೆ(ಜಿಟಿಪಿ) ಸುಮಾರು ೧೫%ರಿಂದ ೧೬% ರಷ್ಟುಕೊಡುಗೆ ನೀಡುತ್ತದೆ.

ಇತ್ತೀಚಿನ ಕೋವಿಡ್-೧೯ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳು ಕುಂಟಿತವಾದರೂ ಕೃಷಿ ಚಟುವಟಿಕೆಗಳಿಗೆ ಹೆಚ್ಚು ತೊಂದರೆಯಾಗಿರುವುದಿಲ್ಲ ಮತ್ತು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಹಲವಾರು ಯುವಕ ಯುವತಿಯರು ಗ್ರಾಮೀಣ ಪ್ರದೇಶಕ್ಕೆ ವಲಸೆ ಬಂದು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರ ಕೃಷಿ ಆದಾಯವನ್ನು ದುಪ್ಪಟ್ಟು ಮಾಡಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ. ಅದರಂತೆ ಕೃಷಿ ಆದಾಯವನ್ನು ದುಪ್ಪಟ್ಟು ಮಾಡಬೇಕಾದರೆ ರೈತರು ಸಮಗ್ರ ಬೇಸಾಯ ಪದ್ದತಿ, ಹೊಸ ತಂತಜ್ಞಾನಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ರಾಜ್ಯ, ಅಂತರರಾಜ್ಯ ಮತ್ತು ಅಂತರರಾಷ್ಟೀಯ ಮಟ್ಟದ ಮಾರುಕಟ್ಟೆ ಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಕೃಷಿಯಲ್ಲಿ ಆಗಿರುವ ಹೊಸ ತಂತ್ರಜ್ಞಾನಗಳು ಮತ್ತುಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಗ್ರಾಮೀಣ ಯುವಕರಿಗೆ ಕೃಷಿಗೆ ಸಂಬಂಧಿಸಿದ ವಿದ್ಯಾಭ್ಯಾಸದ ಅವಶ್ಯಕತೆ ಇರುತ್ತದೆ, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು ೩ ಕೃಷಿ ವಿಶ್ವ ವಿದ್ಯಾನಿಲಯಗಳು, ೧ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ೧ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಹಾಗೂ ೧ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ವಿವಿಧ ವಿಷಯಗಳಲ್ಲಿ ಡಿಪ್ಲೋಮಾ, ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರಲ್‌ಕಾರ್ಯಕ್ರಮಗಳ ಬಗ್ಗೆ ಬೋಧಿಸಲಾಗುತ್ತಿದೆ. ಆದರೆ ಜನಸಾಮನ್ಯರಿಗೆ ಈ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ ಆದ್ದರಿಂದ ಈ ಲೇಖನದಲ್ಲಿ ಕರ್ನಾಟಕದಲ್ಲಿನ ಕೃಷಿ ಮತ್ತು ಕೃಷಿ ಸಂಬಂಧಿತ ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ ಕೊಡಲು ಪ್ರಯತ್ನಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿನ ವಿವಿಧ ಕೃಷಿ ವಿಶ್ವವಿದ್ಯಾನಿಲಯಗಳು:-
೧. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
೨. ಕೃಷಿ ವಿಶ್ವವಿದ್ಯಾಲಯ, ಧಾರವಾಡ
೩. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು
೪. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕ ವಿಶ್ವವಿದ್ಯಾಲಯ, ಶಿವಮೊಗ್ಗ
೫. ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ
೬. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್

 

ಉದ್ಯೋಗಾವಕಾಶಗಳು:

೧. ಕೃಷಿ ಮತ್ತು ತೋಟಗಾರಿಕಾ ವಿಷಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಕೃಷಿ ಅಧಿಕಾರಿï ಹಾಗೂ ತೋಟಗಾರಿಕಾ ಅಧಿಕಾರಿ ಆಗುವ ಅವಕಾಶವಿರುತ್ತದೆ. ಜೊತೆಗೆ ಬ್ಯಾಂಕಿAಗ್‌ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗವಕಾಶಗಳು ಇರುತ್ತದೆ.

೨. ಖಾಸಗಿ ಸಂಸ್ಥೆಗಳಲ್ಲಿ ಕೃಷಿ ಪದವೀಧರರಿಗೆ ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಇರುತ್ತದೆ ಅವುಗಳಲ್ಲಿ ಬೀಜ ಕೃಷಿ ಪರಿಕರ ಮತ್ತು ಕೃಷಿ ಸೇವೆಗಳು ಇತ್ಯಾದಿ.

೩. ಕೃಷಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೊಸದಾಗಿ ಸ್ವಂತ ಆಹಾರಕ್ಕೆ ಸಂಭಧಿಸಿದ ಉದ್ಯಮ ಸ್ಥಾಪಿಸುವ ಅವಕಾಶವಿರುತ್ತದೆ. ಅವುಗಳಲ್ಲಿ ಬಿತ್ತನೆಬೀಜ ಉತ್ಪಾದನಾ ಸಂಸ್ಥೆಗಳ ಸ್ಥಾಪನೆ, ಸಾವಯವ ಕೃಷಿ, ಕೃಷಿ ರಪ್ತು, ಆಹಾರ ತಂತ್ತಜ್ಞಾನ ಮೌಲ್ಯವರ್ದನೆ ಇತ್ಯಾದಿ ಮತ್ತು ಕೇಂದ್ರ ಮತ್ತು ರಾಜ್ಯಸರ್ಕಾರವು ಇಂಥ ಉದ್ಯಮಕ್ಕೆ ಬಹಳ ಪ್ರೋತ್ಸಾಹ ನೀಡುತ್ತದೆ.

೪.  ಪಶುವೈದ್ಯಕೀಯ, ಹೈನುಗಾರೀಕೆ, ಮೀನುಗಾರಿಕೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ವಿಭಾಗಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರದಲ್ಲಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಕೆಲಸವನ್ನು ಪಡೆಯುವ ಅವಕಾಶವಿರುತ್ತದೆ.

೫. ಮುಖ್ಯವಾಗಿ, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ, ಹೈನುಗಾರೀಕೆ, ಮೀನುಗಾರಿಕೆವಿಷಯಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆಯಲು ಅವಕಾಶವಿರುತ್ತದೆ, ಈ ವಿದ್ಯಾರ್ಥಿಗಳಿಗೆ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸ್ನಾತಕೋತ್ತರ/ಡಾಕ್ಟರಲ್ ಪದವಿಯನ್ನು ತಮ್ಮ ಇಚ್ಚೆ ಇರುವ ವಿಷಯದಲ್ಲಿ ವ್ಯಾಸಂಗ ಮಾಡಿ ಆ ವಿಷಯದಲ್ಲಿ ವಿಜ್ಞಾನಿಗಳಾಗಿ/ಸಹಾಯಕ ಪ್ರಾಧ್ಯಾಪಕರಾಗಿ ದೇಶದಾದ್ಯಂತ ಉದ್ಯೋಗವಕಾಶವಿರುತ್ತದೆ.

೬. ಐಸಿಎಆರ್ ನಲ್ಲಿ ವಿಜ್ಞಾನಿಗಳ ಮತ್ತು ರಾಜ್ಯ ಕೃಷಿ ವಿವಿಗಳಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಪಡೆಯಲು ಎಎಸ್‌ಆಬಿ ರವರು ನಡೆಸುವ ಸ್ಪರ್ದ್ರಾತ್ಮಕ ಪರೀಕ್ಷೇಗಳಾದ ಎನ್‌ಇಟಿ/ಎಆರ್‌ಎಸ್‌ಯಲ್ಲಿಉತ್ತಮ ಅಂಕಗಳನ್ನು ಪಡೆದು ಉತೀರ್ಣರಾಗಬೇಕಾಗುತ್ತದೆ.

ಈ ಮೇಲೆ ತಿಳಿಸಿರುವ ಉದ್ಯೋಗಾವಕಾಶಗಳು ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆದವರಿಗೆ ಅವಕಾಶವಿರುತ್ತದೆ.

ಪ್ರವೇಶ ವಿಧಾನ:
ರಾಜ್ಯದ ಕೃಷಿ ಮತ್ತು ಕೃಷಿ ಆಧಾರಿತ ಸ್ನಾತಕ ಪದವಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೇ ಮೂಲಕ ಅವಕಾಶ ದೊರೆಯುತ್ತದೆ.  ರೈತರ ಮಕ್ಕಳ ಕೋಟಾದಡಿಯಲ್ಲಿ ಶೇಕಡ ೫೦ರಷ್ಟು ಸ್ನಾತಕ ಪದವಿಗಳಿಗೆ ಆಯಾ ವಿಶ್ವವಿದ್ಯಾಲಯಗಳು ಪ್ರಾಯೋಗಿಕ ಪರೀಕ್ಷೇಗಳನ್ನು ನಡೆಸಿ ನಂತರ ಮೆರಿಟ್‌ ಆಧಾರದ ಮೇಲೆ ಸಿಇಟಿ ಮುಖಾಂತರ ಪ್ರವೇಶಾತಿಯನ್ನು ಪಡೆಯಬಹುದು ಮತ್ತು ಶೇಕಡ ೨೫ ಸೀಟುಗಳಿಗೆ ಭಾರತೀಯ ಕೃಷಿ ಅನುಸಂದಾನ ಸಂಸ್ಥೆಯು ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೇಗಳ ಮುಖಾಂತರ ಪ್ರವೇಶಾತಿಯನ್ನು ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಆಯಾ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೂಳ್ಳಬಹುದು.

ವಿದ್ಯಾರ್ಹತೆ:
ಕರ್ನಾಟಕದಲ್ಲಿದ್ವಿತೀಯ ಪಿ.ಯು.ಸಿ / ೧೨ನೇ ತರಗತಿಯಲ್ಲಿ ಪಿ.ಸಿ.ಎಂ.ಬಿ/ಪಿ.ಸಿ.ಬಿ/ಪಿ.ಸಿ.ಎA ವಿಷಯಗಳ ಸಂಯೋಜನೆಯೊಂದಿಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು. ಆಯಾ ಕೋರ್ಸ್ಗಳಿಗೆ ಬೇಕಾದ ಅರ್ಹತೆ/ವಿಷಯಗಳ ಬಗ್ಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದು.

ಡಿಪ್ಲೋಮಾ ಕೋರ್ಸ್ಗಳ ವಿವರ

ಎಲ್ಲ ಕೃಷಿಕರಿಗೂ ತಿಳಿದಿರುವಂತೆ, ಈಗಿರುವ ಹವಾಮಾನದ ವೈಪರಿತ್ಯಗಳು ಕೃಷಿಯಲ್ಲಿಅಗುತ್ತಿರುವ ಮಾರುಕಟ್ಟೆ ವ್ಯತ್ಯಯಗಳು, ಗ್ರಾಮೀಣ ಯುವಕಯುವತಿಯರನ್ನು ಪಟ್ಟಣದತ್ತ ಮುಖ ಮಾಡುವಂತೆ ಮಾಡಿದೆ. ಡಿಪ್ಲೋಮಾ (ಕೃಷಿ)ಯನ್ನು ಪ್ರಾರಂಭಿಸಿದ ಮೂಲ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃಷಿ ಮಾಡಲು ಪ್ರೇರೇಪಿಸಿ ಪ್ರಗತಿಪರ ಕೃಷಿಕರನ್ನಾಗಿಸುವುದು. ಡಿಪ್ಲೋಮಾ ಮೂಲಕ ವಿದ್ಯಾರ್ಥಿಗಳಿಗೆ ಬೆಳೆ ಪದ್ಧತಿಗಳು, ಅಭಿವೃದ್ಧಿ ಪಡಿಸಿದ ಉತ್ತಮ ತಳಿಗಳು, ರೋಗ, ಕೀಟ ಮತ್ತು ಕಳೆಗಳ ವೈಜ್ಞಾನಿಕ ಹಾಗೂ ಸಮಗ್ರ ನಿರ್ವಹಣೆ, ಕೃಷಿ ಮಾರುಕಟ್ಟೆಯ ತಿಳುವಳಿಕೆ ಮತ್ತುಇನ್ನಿತರ ವಿಷಯಗಳನ್ನು ಬೋಧಿಸಲಾಗುತ್ತಿದೆ.

ಪ್ರಸ್ತುತ ಡಿಪ್ಲೋಮಾ ತರಗತಿಗಳಿಗೆ ಪ್ರವೇಶವನ್ನು ಎಸ್.ಎಸ್.ಎಲ್.ಸಿ ಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳು ಹಾಗು ಕರ್ನಾಟಕ ಸರ್ಕಾರದ ಮೀಸಲಾತಿ ಆಧಾರದಲ್ಲಿ ನೀಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಕೃಷಿಕರ ಕೋಟಾದಡಿಯಲ್ಲಿ ಪ್ರವೇಶ ಮೀಸಲಾತಿಯನ್ನು ೨೦೨೧-೨೨ನೇ ಸಾಲಿನಿಂದ ಶೇ.೫೦ ಕ್ಕೆ ಹೆಚ್ಚಿಸಿಲಾಗಿರುತ್ತದೆ. ಇದರಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗಿದೆ.

ಡಿಪ್ಲೋಮಾ(ಕೃಷಿ)/ತೋಟಗಾರಿಕೆ ಉತ್ತೀರ್ಣರಾದ ಗ್ರಾಮೀಣ ಮತ್ತು ನಗರ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳು ಬಿ.ಎಸ್ಸಿ. ಕೃಷಿ/ತೋಟಗಾರಿಕೆ ಪದವಿಗೆ ಪ್ರವೇಶ ಪಡೆಯಲು ಆಸಕ್ತಿ ತೋರಿದ್ದರಿಂದ, ಸ್ನಾತಕ ಪದವಿಯನ್ನು ಪಡೆಯಲು ಹೆಚ್ಚಿನ ಅವಕಾಶ ಕಲ್ಪಿಸುವ ದೃಷ್ಠಿಯಿಂದ ಮೊದಲಿಗೆ ಶೇಕಡ ೨ರಷ್ಟಿದ್ದ ಪಾರ್ಶ್ವ ಪ್ರವೇಶದ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇಕಡ ೫ ಕ್ಕೆ ಹೆಚ್ಚಿಸಿ ಅಳವಡಿಸಿಕೊಳ್ಳಲಾಗಿರುತ್ತದೆ.

ಪ್ರಸ್ತುತ ಡಿಪ್ಲೋಮಾ(ಕೃಷಿ) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ)ಯ ಮೂಲಕ ಸ್ನಾತಕ ಪದವಿಗೆ ಪಾರ್ಶ್ವ ಪ್ರವೇಶ ನೀಡಲಾಗುತ್ತಿದೆ.

ಡಿಪ್ಲೋಮಾ (ಕೃಷಿ) ನಂತರದ ಅವಕಾಶಗಳು
ಡಿಪ್ಲೋಮಾ(ಕೃಷಿ) ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳಿಗೆ ಖಾಸಗಿ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ. ಖಾಸಗಿ ಬೀಜಉತ್ಪಾದನಾ ಸಂಸ್ಥೆಗಳಲ್ಲಿ ನರ್ಸರಿ ಉದ್ಯಮದಲ್ಲಿ ಮೇಲ್ವಿಚಾರಕರಾಗಿ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಬೆಳೆ ಮೇಲ್ವಿಚಾರಕರಾಗಿ ಮತ್ತು ಹಲವಾರು ಕೃಷಿಗೆ ಸಂಬಂಧಿಸಿದ ಖಾಸಗಿ ಕಂಪನಿಗಳಲ್ಲಿ ಕ್ಷೇತ್ರ ಸಹಾಯಕರು  ತಾಂತ್ರಿಕ ಸಲಹೆಗಾರರು, ಕ್ಷೇತ್ರಾಧಿಕಾರಿಗಳು,  ಕ್ಷೇತ್ರ ಮೇಲ್ವಿಚಾರಕರು,  ಕೃಷಿ ವ್ಯವಸ್ಥಾಪಕರು, ಮಾರುಕಟ್ಟೆ ನಿರ್ವಾಹಕರು ಆಗಿ ಕಾರ್ಯ ನಿರ್ವಹಿಸಬಹುದಾಗಿದೆ. ಇವುಗಳಲ್ಲದೆ, ಸ್ವಂತ ಉದ್ದಿಮೆಯನ್ನುಕೂಡ ಮಾಡಬಹುದಾಗಿದೆ. ಕೃಷಿ ಪರಿಕರಗಳಾದ ಗೊಬ್ಬರ, ಔಷಧ, ಕೀಟನಾಶಕ ಹಾಗೂ ಕಳೆನಾಶಕ; ನೀರಾವರಿಗೆ ಸಂಬಂಧಿಸಿದ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳ ಮಾರಾಟಗಾರರಾಗಿ, ವಿತರಕರಾಗಿ ಮತ್ತು ತಾಂತ್ರಿಕ ಸಲಹೆಗಾರರಾಗಿಕಾರ್ಯನಿರ್ವಹಿಸಬಹುದು.

ಡಿಪ್ಲೋಮ ಕೋರ್ಸ್ಗಳು ಮತ್ತು ಕಾಲೇಜಿನ ವಿವರಗಳು

LEAVE A REPLY

Please enter your comment!
Please enter your name here