ಅಧ್ಯಯನ – ವಿನ್ಯಾಸ – ಅಭಿವೃದ್ಧಿ
ಫಲವತ್ತತೆ ಹೆಚ್ಚಳದ ದಿಶೆಯಲ್ಲಿ ಮಣ್ಣಿನ ಕಣಗಳ ಸುಧಾರಣೆಯಾಗುವುದು ಅತ್ಯಂತ ಮುಖ್ಯ. ಪ್ರತಿಯೊಂದು ಉಳುಮೆ ಪದ್ಧತಿ ನಡುವೆಯೂ ವ್ಯತ್ಯಾಸವಿದೆ. ಇದನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದ ನಂತರ ಅಂತರ ಬೇಸಾಯ ಯಂತ್ರದ ರಚನೆ ಮಾಡಿ ಅಭಿವೃದ್ಧಿ ಮಾಡಿದೆ. ಇದನ್ನು ತಕ್ಷಣವೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೋಗಲಿಲ್ಲ. ನಮ್ಮ ಸ್ವಂತ ಜಮೀನಿನಲ್ಲೇ ಇದರ ಕಾರ್ಯದ ರೀತಿ, ಅದರಿಂದಾಗುವ ಪ್ರಯೋಜನಗಳನ್ನು ಗಮನಿಸಿದೆ.
ನಿರಂತರ ಮಾರ್ಪಾಡು
ಮತ್ತೆಮತ್ತೆ ಮಾರ್ಪಾಡುಗಳನ್ನು ಮಾಡಿದೆ. ಸತತ ಪ್ರಯತ್ನದ ನಂತರ “ಬಹುಪಯೋಗಿ ಅಂತರ ಬೇಸಾಯ” ಯಂತ್ರ (Multipurpose Power Intercultivator) ಅಭಿವೃದ್ಧಿಪಡಿಸಿದೆ. ಈ ಯಂತ್ರ ಎಲ್ಲ ರೀತಿಯಲ್ಲಿಯೂ ಕೃಷಿಕರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಇದು “ಪವರ್ ವೀಡರ್” (Power weeder)ಆಗಿಯೂ ಕೆಲಸ ನಿರ್ವಹಿಸುವಂತೆ ವಿನ್ಯಾಸ ಮಾಡಲಾಗಿದೆ.
ಮಳೆನೀರು ಇಂಗುವಿಕೆ
ಮಳೆನೀರು ಅಮೃತ ಸಮಾನ. ಇದರಲ್ಲಿಯೂ ಅನೇಕ ಸಹಜ ಪೋಷಕಾಂಶಗಳಿವೆ. ಮಳೆ ಬಿದ್ದಾಗ ಅದು ಭೂಮಿಯೊಳಗೆ ಇಳಿಯುವಂಥ ವ್ಯವಸ್ಥೆ ಇರಬೇಕು. ಇದಕ್ಕೆ ಉಳುಮೆಯ ಮಾದರಿ ವಿಭಿನ್ನವಾಗಿರಬೇಕು. ಬಹುಪಯೋಗಿ ಅಂತರ ಬೇಸಾಯ” ಯಂತ್ರದಿಂದ ಉಳುಮೆ ಮಾಡಿದಾಗ ನೆಲದೊಳಗೆ ನೀರು ಇಂಗುವ ಪ್ರಮಾಣ ಹೆಚ್ಚುತ್ತದೆ. ಮಣ್ಣು ಬಹುದೀರ್ಘಕಾಲ ಹಸಿಯಾಗಿರುತ್ತದೆ ಎಂಬ ಮಾತನ್ನು “ಮಾರುತಿ ಕೃಷಿ ಉದ್ಯೋಗ್” ಮೂಲಕ ಇಂಟರ್ ಕಲ್ಟಿವೇಟರ್ ಖರೀದಿಸಿದ ಅನೇಕ ಮಂದಿ ರೈತರು ಹೇಳುತ್ತಾರೆ.
ಮಣ್ಣಿನ ಫಲವತ್ತತೆ ವೃದ್ಧಿ
ಮಳೆನೀರಿನಿಂದ ಅಂತರ್ಜಲ ವೃದ್ಧಿಯಾಗುವುದರ ಜೊತೆಗೆ ಮಣ್ಣಿನ ಫಲವತ್ತೆಯೂ ಹೆಚ್ಚಳವಾಗುತ್ತದೆ. ಇದರಿಂದ ಬೆಳೆಯ ಆರೋಗ್ಯವೂ ವೃದ್ಧಿಸುತ್ತದೆ. ಬೆಳೆಗೆ ಸಹಜವಾಗಿ ರೋಗಗಳು – ಕೀಟಗಳ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದರಿಂದ ಅಂತಿಮವಾಗಿ ಗುಣಮಟ್ಟದ ಫಸಲು ಸಿಗುವುದರ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಇವೆಲ್ಲ ಒಂದಕ್ಕೊಂದು ಒಂದಕ್ಕೊಂದು ಸರಪಳಿ ಕೊಂಡಿಗಳ ಮಾದರಿ ಸಂಬಂಧವಿರುವ ಸಂಗತಿಗಳು.
ಗರಿಷ್ಠ ಸದ್ಬಳಕೆ
ಇದು ಅಧ್ಯಯನಗಳಿಂದ ಸಾಬೀತಾಗಿದೆ. ಕೃಷಿಕರು ಪ್ರತಿಯೊಂದು ಸಂಗತಿಯನ್ನು ಗಮನವಿಟ್ಟು ನೋಡುವುದರಿಂದ ಅವರು ಸಹ ಮಾರುತಿ ಇಂಟರ್ ಕಲ್ಟಿವೇಟರ್ ಖರೀದಿಗೂ ಮೊದಲು ಇದ್ದ ಗದ್ದೆ – ಹೊಲ – ತೋಟಗಳ ಪರಿಸ್ಥಿತಿಗೂ ಖರೀದಿ ಮಾಡಿ ಬಳಕೆ ಮಾಡತೊಡಗಿದ ನಂತರದ ಪರಿಸ್ಥಿತಿಗೂ ತುಂಬ ವ್ಯತ್ಯಾಸವಿದೆ. ಹಂಗಾಮಿನಿಂದ ಹಂಗಾಮಿಗೆ ಮಣ್ಣಿನ ಕಣಗಳ ಸುಧಾರಣೆ ಜೊತೆಗೆ ಒದಗಿಸಿದ ಪೋಷಕಾಂಶಗಳ ಗರಿಷ್ಠ ಸದ್ಬಳಕೆ ಸಾಧ್ಯವಾಗುತ್ತಿದೆ. ಇದಕ್ಕೆ ಇಂಟರ್ ಕಲ್ಟಿವೇಟರ್ ಮೂಲಕ ಮಾಡುತ್ತಿರುವ ಉಳುಮೆ ಸಹಕಾರಿಯಾಗಿದೆ ಎಂದು ಹೇಳುತ್ತಾರೆ.
ಕೃಷಿಕಾರ್ಮಿಕರ ಅವಲಂಬನೆ ಕಡಿಮೆ
ಪ್ರಸ್ತುತ ದಿನಗಳಲ್ಲಿ ಅಗತ್ಯವಿರುವ ಸಂದರ್ಭದಲ್ಲಿ ಕೃಷಿಕಾರ್ಮಿಕರು ಸಿಗುವುದೇ ಕಷ್ಟ. ಈಗ ಪ್ರತಿಯೊಂದು ಕುಟುಂಬಗಳಲ್ಲಿಯೂ ಕಡಿಮೆ ಸದಸ್ಯರಿರುವ ಕಾರಣ ಕೃಷಿಕಾರ್ಮಿಕರ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಸಿದರೆ ಅಂತಿಮವಾಗಿ ಬರುವ ಲಾಭಾಂಶ ತೀರಾ ಕಡಿಮೆಯಾಗುತ್ತದೆ. ಹಾಗೆಂದು ಕೆಲಸ ಮಾಡಿಸದಿರುವುದು ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ “ಮಾರುತಿ ಮಲ್ಟಿಪರ್ಪಸ್ ಇಂಟರ್ ಕಲ್ಟಿವೇಟರ್” ನೂರಕ್ಕೆ ನೂರರಷ್ಟು ನೆರವಿಗೆ ಬರುತ್ತದೆ ಎಂಬ ಮಾತನ್ನು ಖಚಿತವಾಗಿ ಹೇಳುತ್ತೇನೆ.
ಒಂದೇ ಯಂತ್ರ ಹಲವು ಕಾರ್ಯ
ಅತೀ ಕಡಿಮೆ ಅವಧಿಯಲ್ಲಿ ವೈಜ್ಞಾನಿಕವಾಗಿ ಅತ್ಯುತ್ತಮ ಉಳುಮೆ ಮಾಡುವುದರ ಜೊತೆಗೆ ಕೃಷಿಭೂಮಿಯಲ್ಲಿನ ಕಳೆಗಳನ್ನು ತೆಗೆದು ಹಾಕುತ್ತದೆ ಜೊತೆಗೆ ಮಣ್ಣನ್ನು ಏರಾಕುವ ಕಾರ್ಯವನ್ನೂ ಮಾಡಬಹುದು. ಉಳುಮೆ, ಮಣ್ಣಿನ ಹೆಂಟೆಗಳನ್ನು ಒಡೆಯುವುದು, ಬೆಳೆಗೆ ಮಣ್ಣು ಏರಾಕುವುದು, ಕಳೆ ತೆಗೆಯುವುದು ಮತ್ತು ಅಂತರ ಬೇಸಾಯ, ನೀರೆತ್ತುವುದು, ಬೀಜ ಬಿತ್ತನೆ ಮಾಡುವ ಸಾಧನವನ್ನು ಇದಕ್ಕೆ ಅಳವಡಿಸಿ ಬಿತ್ತನೆ ಮಾಡಬಹುದು. ಈ ಯಂತ್ರ ಬಳಸಿ ಬೆಳೆ ಪ್ರಚೋದಕಗಳನ್ನು ಸಿಂಪಡಣೆ ಮಾಡಬಹುದು. 5೦೦ ಕೆಜಿ ಸಾಮರ್ಥ್ಯದ ಟ್ರಾಲಿ ಅಳವಡಿಸಬಹುದು ಇಷ್ಟೆಲ್ಲ ಕೆಲಸಗಳನ್ನು ಇದೊಂದೇ ಯಂತ್ರದ ಮೂಲಕ ಮಾಡಲು ಸಾಧ್ಯ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:. ಮಾರುತಿ ಕೃಷಿ ಉದ್ಯೋಗ್, ಕೆರೆಕೋಡಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562 123, ದೂರವಾಣಿ: 86186 93986