ಶೀಘ್ರದಲ್ಲಿ ಆಹಾರ ಕೊರತೆ ಕಾಡಲಿದೆಯೇ ?    

0
ಡಾ. ಚಂದ್ರಶೇಖರ್, ಮಹಾ ನಿರ್ದೇಶಕರು, ಮ್ಯಾನೇಜ್, ಹೈದ್ರಾಬಾದ್

ದೇಶದಲ್ಲಿ 314.5 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ದಾಸ್ತಾನು ಇದೆ. ಇದು ಬೃಹತ್ ಸಾಧನೆ. ದೇಶದಲ್ಲಿರುವ ಎಲ್ಲರಿಗೂ ಆಹರ ನೀಡುವಷ್ಟು ಮಟ್ಟದಲ್ಲಿ ಆಹಾರ ಧಾನ್ಯ ಸಂಗ್ರಹಣೆ ಇದೆ. 125 ಮಿಲಿಯನ್ ಪ್ರಮಾಣದ ಬಫರ್ ದಾಸ್ತಾನು ಇದೆ. ಯಾವುದೇ ವಿಪತ್ತು ಬಂದರೂ ನಾವು ಅದನ್ನು ನಿಭಾಯಿಸಬಹುದು.

ಇವತ್ತು ನಾವು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ 57ನೇ ಸಂಸ್ಥಾಪನಾ ದಿನ ಆಚರಣೆ ಮಾಡುತ್ತಿದ್ದೇವೆ. ವಿಶ್ವವಿದ್ಯಾಲು ನಿರ್ಮಾಣ ರೂಪಿಸುತ್ತಿರುವ ಸಾವಿರಾರು ಮಂದಿ ವಿದ್ಯಾರ್ಥಿಗಳು, ಇಲ್ಲಿರುವ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಅಥವಾ ಇವರೆಲ್ಲರ ನಾಯಕರಿರಬಹುದು. ಆಹಾರ ಭದ್ರತೆ ವಿಚಾರದಲ್ಲಿ ಇಂಥವರೆಲ್ಲರ ಪಾತ್ರವಿದೆ.

ನಾನು ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಓಡಾಡಿದ್ದೇನೆ. ಅಲ್ಲಿನ ಸಣ್ಣ ರಾಷ್ಟ್ರವೊಂದರಲ್ಲಿ ಇರುವವರಿಗೆ ಆಹಾರ ಭದ್ರತೆಯೇ ಇಲ್ಲ. ಅಲ್ಲಿ ವಿಶಾಲವಾದ ಜಾಗವಿದೆ. ಆದರೂ ಆಹಾರ ಭದ್ರತೆ ಸಾಧ್ಯವಾಗಿಲ್ಲ. ಹೀಗಿರುವಾಗ ಭಾರತದಂಥ ಅಪಾರ ಜನಸಂಖ್ಯೆಯಿರುವ ರಾಷ್ಟ್ರದಲ್ಲಿ ಆಹಾರ ಭದ್ರತೆ ಸಾಧಿಸಿದ್ದೇವೆ ಎನ್ನುವುದು ಸಣ್ಣ ಮಾತಲ್ಲ.

ನಮಗೆ ಫುಡ್ ಸೆಕ್ಯುರಿಟಿ ಇದೆ ಎಂಬ ನಮ್ಮ ಗ್ರಹಿಕೆಯ ಭಾವನೆ ಹೆಚ್ಚು ದಿನ ಉಳಿಯುವುದಿಲ್ಲ. ಏಕೆಂದರೆ ನಮ್ಮ ಮುಂದೆ ಅನೇಕ ಸವಾಲುಗಳಿವೆ. ಕೃಷಿಕರಿಗೆ ಆದಾಯದ ಭದ್ರತೆ ಬೇಕು, ಸಮಾಜಕ್ಕೆ ಪೌಷ್ಠಿಕ ಭದ್ರತೆ ಬೇಕು, ಈಗ 22. 4 ಜನಸಂಖ್ಯೆಯಲ್ಲಿ ಇರುವವರೆಲ್ಲ ಅಗತ್ಯಕ್ಕಿಂತ ಕಡಿಎ ತೂಕ ಹೊಂದಿದ್ದಾರೆ. ಶೇಕಡ 20ರಷ್ಟು ಮಂದಿ ಅಗತ್ಯಕ್ಕಿಂತಲೂ ಅತ್ಯಧಿಕ ತೂಕ ಹೊಂದಿದ್ದಾರೆ.ನಾವು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂದರೆ ಇವೆಲ್ಲ ಅಂಶಗಳು ಸರಿಯಿರಬೇಕು. ಇದನ್ನು ಸರಿ ಮಾಡಬೇಕಾದರೆ ಪೌಷ್ಠಿಕಾಂಶ ಆಧಾರಿತ ಆಹಾರ ಬೆಳೆಯಬೇಕು. ಇದು ಎರಡನೇ ದೊಡ್ಡ ಸವಾಲು.

ಕೃಷಿಕರ ಆದಾಯ ಹೆಚ್ಚಬೇಕಾದರೆ ಸರ್ವರೀತಿಯ ಪ್ರಯತ್ನಗಳು ಆಗಬೇಕು. ಕೃಷಿ ಉತ್ಪಾದಕರ ಸಂಘ ಬಲಿಷ್ಠವಾಗಿರಬೇಕು. ಇಂಥ ಸಂಘಟನೆಗಳಿಗೆ ಉತ್ತೇಜನ ದೊರೆಯಬೇಕು. ಇವೆಲ್ಲ ಬಹಳ ಬಹಳ ಮುಖ್ಯವಾದ ಅಂಶಗಳು. ರೈತರು ಒಬ್ಬೊಬ್ಬರೇ ಇರುವ ವ್ಯವಸ್ಥೆಯಲ್ಲಿ ಉಳಿಯುವುದಾಗಲಿ, ಬೆಳೆಯುವುದಾಗಲಿ ಕಷ್ಟ. ಿವರಿಗೊಂದು ಸಂಘಟನೆ ಬೇಕು. ಈ ದೃಷ್ಟಿಯಿಂದ ಕೃಷಿಕರ ಉತ್ಪಾದನಾ ಸಂಘಗಳಿಗೆ ಹಣಕಾಸು ನೆರವು, ವ್ಯವಹಾರ ತರಬೇತಿ ನೀಡುವುದು ಅತ್ಯವಶ್ಯಕ.

ತುಂಬ ಯಶಸ್ಸು ಕಂಡಿರುವ ಿಂಥ ಸಂಘಟನೆಗಳು ದೇಶದ ಬೇರೆಬೇರೆ ಭಾಗಗಳಲ್ಲಿವೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ 8000 ಸಾವಿರ ಮಂದಿ ಸದಸ್ಯರಿರುವ ಸಹ್ಯಾದಿ ಕೃಷಿಕರ ಉತ್ಪಾದನಾ ಸಂಘ ಇದಕ್ಕೆ ಉದಾಹರಣೆ.ಇಂಥ ಕೃಷಿಕರ ಸಂಘಟನೆಗಳು ಹೆಚ್ಚೆಚ್ಚು ರಚನೆಯಾಗಬೇಕು.

ಹವಾಮಾನ ಬದಲಾವಣೆ

ಇದಂತೂ ಬಹಳ ಮುಖ್ಯವಾದ ಸವಾಲು. ಹವಾಮಾನದ ತಾಪಮಾನ ಒಂದು ಡಿಗ್ರಿ ಜಾಸ್ತಿಯಾದರೂ ಶೇಕಡ 7 ರಿಂದ 10ರಷ್ಟು ಇಳುವರಿ ಕಡಿಮೆಯಾಗುತ್ತದೆ. ಈ ರೀತಿ ಆದರೆ ಇನ್ನೆಂಟು ವರ್ಷಗಳಲ್ಲಿ ಆಹಾರದ ಕೊರತೆ ತೀವ್ರವಾಗಿ ಎರಡೇ ಹೊತ್ತು ಮಿತ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವಂಥ ಸ್ಥಿತಿ ನಿರ್ಮಾಣವಾಗಬಹುದು. ಈ ದೃಷ್ಟಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹವಾಮಾನ ಆಧಾರಿತ ಕೃಷಿಪದ್ಧತಿ ಅಧ್ಯಯನ ಅಗತ್ಯ. ಇದು ಈಗಾಗಲೇ ಆರಂಭವಾಗಿದೆ.

LEAVE A REPLY

Please enter your comment!
Please enter your name here