Home Blog Page 61
ಯಾವುದೇ ಬೆಳೆಯಲ್ಲಿ ಮೊಗ್ಗು - ಹೂವು - ಕಾಯಿ ಉದುರುತ್ತಿವೆ ಅಂದಾದರೆ ಅದಕ್ಕೆ ಪ್ರಮುಖ ಕಾರಣ ಬೋರಾನ್ ಕೊರತೆ. ಬೋರಾನ್ ಅಂದ್ರೆ ಏನು? ಹೇಗಿರುತ್ತೆ? ಅದರ ಕೆಲಸ ಏನು? ಮುಂತಾದ ವಿವರ ನಿಮಗಾಗಿ.... Boron (ಬೋರಾನ್) ನಮ್ಮ ದೇಹಕ್ಕೆ ಹೇಗೆ ವಿಟಮಿನ್ಗಳು ಬೇಕೋ ಹಾಗೆ ಬೆಳೆಗಳಿಗೂ ಕೆಲವೊಂದು ಅಂಶಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಬೇಕು.ಬೋರಾನ್ ಧಾತುಗಳು ಬೆಳೆಗಳ ಸಮತೋಲಿತ ಪೋಷಕಾಂಶಗಳಲ್ಲಿ ಒಂದು. ಬುದ್ಧಿವಂತ ರೈತರ್ಯಾರು ಬೋರಾನ್ ಅನ್ನು ಹೇಗೆಂದರೆ ಹಾಗೆ ಬಳಸಲ್ಲ.ಇದ್ರ ಬಳಕೆ ತುಸು ಹೆಚ್ಚಾದ್ರು ಹೂವು ಹಣ್ಣಿನ ನಷ್ಟ ಉಂಟಾಗುತ್ತದೆ. ಭೂಮಿಯಲ್ಲಿ ಸಿಗೋ ಎಲ್ಲಾ ಬೋರಾನ್...
ಬೆಂಗಳೂರು: ಅಕ್ಟೋಬರ್ 19: (ಅಗ್ರಿಕಲ್ಚರ್ ಇಂಡಿಯಾ) ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೃಷಿ ವಿಜ್ಞಾನಿಗಳು ರೋಗ ನಿರೋಧಕ ಜೊತೆಗೆ ಅಧಿಕ ಇಳುವರಿ ನೀಡುವ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅವುಗಳು ನವೆಂಬರ್ 3 ರಿಂದ 6ರ ತನಕ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ನಡೆಯುವ ಕೃಷಿಮೇಳದಲ್ಲಿ ಲೋಕಾರ್ಪಣೆಯಾಗುತ್ತವೆ. ಹೊಸ ತಳಿಗಳ ವಿವರ ಮುಂದಿದೆ. 1) ಭತ್ತ: ಕೆ.ಎಂ.ಪಿ-225: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ...
ಬೆಂಗಳೂರು: ಅಕ್ಟೋಬರ್ 19: ಹವಾಮಾನ ಕೇಂದ್ರದಿಂದ ಬಿಡುಗಡೆಯಾದ ವರದಿ. ಮುಂದಿನ ಮೂರು ತಾಸುಗಳ ಅವಧಿಯಲ್ಲಿ ಬಳ್ಳಾರಿಯಲ್ಲಿ  ಗುಡುಗು ಸಹಿತ ಮಿಂಚು ಬೆಳಕಿನೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಈ ದಿಶೆಯಲ್ಲಿ ಹವಾಮಾಣ ಕೇಂದ್ರ ಈ ಹವಾಮಾಣ ವರದಿ ಕುರಿತಂತೆ ಗಮನ ಹರಿಸಲು ಜಿಲ್ಲಾಡಳಿತದ ಗಮನ ಸೆಳೆದಿದೆ.
ಮಂಗಳವಾರ, 18ನೇ ಅಕ್ಟೋಬರ್ 2022 / 26 ನೇ ಆಶ್ವೀಜ 1943  ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ಸಾರ್ವಕಾಲಿಕ ದಾಖಲೆಯಾಗಿ ಬೆಂಗಳೂರು ನಗರದಲ್ಲಿ  17ನೇ ಅಕ್ಟೋಬರ್ 2022 ರಂದು ವಾರ್ಷಿಕ ಮಳೆಯ ಒಟ್ಟು ಮೊತ್ತ 1709.1 ಮಿಮೀ ದಾಟಿದ್ದು, ಇದು ಹಿಂದಿನ 2017 ರ ಸಾರ್ವಕಾಲಿಕ ದಾಖಲೆಯಾದ ವಾರ್ಷಿಕ ಮಳೆಯ ಮೊತ್ತ  1696.0 ಮಿಮೀ ನ್ನು ದಾಟಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ  ಒಳನಾಡಿನ  ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಇತರೆ ಪ್ರಮುಖ ಮಳೆ ಪ್ರಮಾಣ (ಸೆಂ.ಮಿ): ನಾಪೋಕ್ಲು (ಕೊಡಗು ಜಿಲ್ಲೆ )...
ಭಾರತೀಯ ಕೃಷಿಪದ್ಧತಿಗೆ ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚಿನ ವೈಜ್ಞಾನಿಕ ಬೇಸಾಯದ ತಳಹದಿಯಿದೆ. ಈ ಹಾದಿಯಲ್ಲಿ ಕೃಷಿಕರು ಬೆಳೆ ಪರಿವರ್ತನೆ ಪ್ರಾಮುಖ್ಯತೆ ಕಂಡು ಕೊಂಡಿದ್ದಾರೆ. ಪ್ರತಿ ಬಾರಿಯೂ ಬೆಳೆ ಆವರ್ತನ ಮಾಡುತ್ತಾ ಬರುತ್ತಿದ್ದಾರೆ. ಹಸಿರು ಕ್ರಾಂತಿ ನಂತರ ವಿಶೇಷವಾಗಿ ನೀರಾವರಿ ಪ್ರದೇಶಗಳ ಕೃಷಿಭೂಮಿಗಳಲ್ಲಿ ಬಹುತೇಕ ರೈತರು ಬೆಳೆ ಪರಿವರ್ತನೆ ಮಾಡುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಭೂಮಿಯ ಫಲವತ್ತತೆ ಕಡಿಮೆಯಾಗುತ್ತಾ ಬಂದಷ್ಟೂ ಕೃಷಿಯ ಖರ್ಚುವೆಚ್ಚ ಹೆಚ್ಚಾಗುತ್ತಾ ಬರುತ್ತದೆ. ಈ ದೃಷ್ಟಿಯಲ್ಲಿ ಬೆಳೆ ಪರಿವರ್ತನೆ ಬಹಳ ಮುಖ್ಯ. ಇದರಿಂದ ಕೃಷಿಭೂಮಿಯ ಮಣ್ಣಿನಲ್ಲಿ , ಬೆಳೆಯಲ್ಲಿ...
ಬೆಂಗಳೂರು: ಅಕ್ಟೋಬರ್ 17: ವಿಶ್ವದ ಹಸಿವು ಮತ್ತು ಬಡತನದ ಅರಿವನ್ನು ಹೆಚ್ಚಿಸುವ ಮತ್ತು ಸುಸ್ಥಿರ ಬದಲಾವಣೆಗೆ ಪ್ರೇರೆಪಿಸುವ ಗುರಿಯೊಂದಿಗೆ 1979 ರಿಂದ ಪ್ರತಿ ವರ್ಷ ಆಕ್ಟೋಬರ್ 17 ರಂದು 150ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಹೇಳಿದರು. ಅವರಿಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ರೈತ ತರಬೇತಿ ಸಂಸ್ಥೆ ಮತ್ತು ಸಿಬ್ಬಂದಿ ತರಬೇತಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿತವಾಗಿದ್ದ “ವಿಶ್ವ ಆಹಾರ ದಿನಾಚರಣೆ – 2022  ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ...
ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು , ಸ್ಥಳೀಯ ಮಾರುಕಟ್ಟೆ, ಹೀಗೆ  ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡಲು  ಸರ್ಕಾರ ಸಿದ್ಧವಿದೆ. ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ,ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕೆಂಬ ಉದ್ದೇಶದಿಂದ ಇಂದಿನ ಸಮಾವೇಶ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು. ಅಕ್ಟೋಬರ್...
ರೈತಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ 14 ಲಕ್ಷ ಮಂದಿ ರೈತಮಕ್ಕಳಿಗೆ ವಿದ್ಯಾನಿಧಿ ಕೊಡುತ್ತಿದ್ದೇವೆ. ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿದಿ ಯೋಜನೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು. ಅಕ್ಟೋಬರ್ 16 ರಂದು 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಅವರು  ಉದ್ಘಾಟಿಸಿ, ಮಾತನಾಡಿದರು. ಈಗಾಗಲೇ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು  ಇದೇ ವರ್ಷ ವಿತರಿಸುವ ಗುರಿಯನ್ನು ಹೊಂದಿದ್ದು,  ಇದಕ್ಕಾಗಿ 50  ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು.
ಒಳನಾಡು ಮೀನುಗಾರಿಕೆಗೂ ಪ್ರೋತ್ಸಾಹ ನೀಡಲು 5600  ಗ್ರಾಮ ಪಂಚಾಯಿತಿಯಲ್ಲಿ  5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ ನೀಡಿದೆ. ಆಲಮಟ್ಟಿ, ಕೆ.ಆರ್.ಎಸ್ ಹಿನ್ನೀರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೀನುಗಾರಿಕೆ ಆಗುತ್ತಿಲ್ಲ.  ಕೆಲವರೇ ಸ್ವಾಮ್ಯತೆ ಮಾಡಿಕೊಂಡಿದ್ದು, ಇದನ್ನು ತಪ್ಪಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.  ಅಕ್ಟೋಬರ್ 16 ರಂದು 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಅವರು  ಉದ್ಘಾಟಿಸಿ, ಮಾತನಾಡಿದರು. ಮೀನುಗಾರರಿಗೆ ಡೀಸಲ್ ಹಾಗೂ ಸೀಮೆ ಎಣ್ಣೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಮೀನುಗಾರರ ಹಡುಗುಗಳು ಹಾಳಾಗುತ್ತವೆ. ಅದಕ್ಕೆ ಎನ್.ಡಿ.ಆರ್.ಎಫ್...
ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು. ಅಕ್ಟೋಬರ್ 16 ರಂದು 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಅವರು  ಉದ್ಘಾಟಿಸಿ, ಮಾತನಾಡಿದರು. ಹೊಸ ತಳಿಗಳನ್ನು ಅಭಿವೃದ್ಧಿ ಮಾಡಿದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ.  ಮಾರುಕಟ್ಟೆ ಹಾಗೂ ಉತ್ಪಾದನೆಯ ನಡುವೆ ದೊಡ್ಡ ಅಂತರವಿದೆ.  ಈ ಅಂತರ ತುಂಬಲು ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ ಹೊಸ ತಳಿಗಳನ್ನು ಪ್ರಯೋಗ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳಸಬೇಕು. ಸಮುದ್ರದ ಮೀನುಗಾರಿಕೆಗೆ ಹಲವಾರು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಪ್ರೋತ್ಸಾಹ ಧನ ನೀಡಲಾಗುತ್ತಿದೆ....

Recent Posts