*ಕಬ್ಬು ಅರೆಯಲು ಕಾರ್ಖಾನೆಗಳನ್ನು ಸೂಕ್ತ ಸಮಯದಲ್ಲಿ ಪ್ರಾರಂಭ ಮಾಡದೇ ವಿಳಂಬ ಮಾಡಿ ಕಬ್ಬು ಅರೆಯಲು ಪ್ರಾರಂಭ ಮಾಡುವುದು. *ಕಬ್ಬು ಕಟ್ಟಾವು ಮಾಡುವಲ್ಲಿ ವಿಳಂಬ ಧೋರಣೆ. *ಕಟ್ಟಾವು ವಿಳಂಬದಿಂದ ಕಬ್ಬಿನ ಇಳುವರಿ ಕುಂಠಿತವಾಗುತ್ತಿರುವುದು. *ನೋಂದಾಯಿತ ರೈತರ ಕಬ್ಬನ್ನು ಜೇಷ್ಠತೆ ಆಧಾರದಲ್ಲಿ ಕಟ್ಟಾವು ಮಾಡದೇ ಇರುವುದು. *ಕಾರ್ಖಾನೆ ಸಾಮರ್ಥ್ಯಕ್ಕೆ ತಕ್ಕಂತೆ ಕಬ್ಬು ಅರೆಯದೆ ಕುಂಟು ನೆಪ ಹೇಳುವುದು. *ಕಟ್ಟಾವು ಮಾಡಲು ವಿಪರೀತ ಕೂಲಿ ವಸೂಲಿ ಮಾಡುತ್ತಿರುವುದು. *ದುಬಾರಿ ಸಾಗಾಟದ ವೆಚ್ಚ. *ತೂಕ ಮತ್ತು ಇಳುವರಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು. *ಹಣ ಪಾವತಿಯಲ್ಲಿ ಆಗುತ್ತಿರುವ ವ್ಯತ್ಯಾಸ ಮತ್ತು ವಿಳಂಬ. ಈ ಸಮಸ್ಯೆಗಳಿಂದ ಪ್ರತಿವರ್ಷ ಕಬ್ಬು ಬೆಳೆಗರಾರು ಕಷ್ಟ ನಷ್ಟ ಅನುಭವಿಸುವಂತಾಗಿದೆ.
ಪರಿಹಾರಗಳು:
*ಕಬ್ಬಿನ ಕಟ್ಟಾವು ಅವಧಿ, ಕಟ್ಟಾವು ಕೂಲಿ, ಸಾಗಾಟದ ವೆಚ್ಚ,ಬೆಲೆ ನಿಗ ಮತ್ತು ಪಾವತಿ ವಿಚಾರಗಳು ಕಬ್ಬು ನಾಟಿ ಮುನ್ನವೇ ರೈತರು ಮತ್ತು ಕಾರ್ಖಾನೆ ನಡುವೆ ಕಾನೂನಾತ್ಮಕವಾಗಿ ಆಗಬೇಕಾದ ಒಪ್ಪಂದ.ಈ ಒಪ್ಪಂದ ಜಾರಿಯಾಗದೇ ಇರುವುದೇ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕಾರಣ.
*ರೈತರು ಮತ್ತು ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ(Bilateral Agreement)ಆಗದೇ ಇವುಗಳಿಗೆ ಪರಿಹಾರ ಕೊಡಿಸಲು ಸಾಧ್ಯವಾಗುವುದಿಲ್ಲ, ಕಬ್ಬು ಬೆಳೆಗಾರರ ಬವಣೆ ಪ್ರತಿ ವರ್ಷ ಮುಂದುವರೆಯುತ್ತ ಹೋಗುತ್ತದೆ.
ದ್ವಿಪಕ್ಷೀಯ ಒಪ್ಪಂದದಿಂದ ರೈತರಿಗೆ ಆಗುವ ಅನುಕೂಲಗಳು :
*ಕಟ್ಟಾವು ಅವಧಿ,ಕಟ್ಟಾವು ಕೂಲಿ,ಸಾಗಾಟದ ವೆಚ್ಚ ಇವುಗಳು ವೈಜ್ಞಾನಿಕ ಆಧಾರದಲ್ಲಿ ನಿಗದಿಯಾಗಿ ಒಪ್ಪಂದ ಪತ್ರದಲ್ಲಿ ದಾಖಲಿಸಲಾಗುತ್ತದೆ.
*ಸಕ್ಕರೆ ಇಳುವರಿ ಆಧಾರದಲ್ಲಿ ಮಾತ್ರ ಈಗ ಕಬ್ಬಿನ ಬೆಲೆ ನಿಗದಿ ಮಾಡಲಾಗುತ್ತಿದೆ,ಇದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ.ಸಕ್ಕರೆ ಜೊತೆಗೆ ಕಾರ್ಖಾನೆಯವರು ಉತ್ಪಾದನೆ ಮಾಡುವ ಉಪ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಂಡು ಆ ಪ್ರಕಾರ ಕಬ್ಬಿನ ಬೆಲೆ ನಿಗಧಿ ಮಾಡಬೇಕಿರುತ್ತದೆ.
*ಕಬ್ಬು ನಾಟಿ ಮುನ್ನವೇ ಆ ವರ್ಷದ ಬೆಲೆ ನಿಗದಿಯಾಗಿ ಒಪ್ಪಂದ ಪತ್ರದಲ್ಲಿ ಕಾಣಿಸಲಾಗುತ್ತದೆ. *ಕಬ್ಬು ಪೂರೈಕೆ ಮಾಡುವ ನೋಂದಾಯಿತ ರೈತರ ಕಬ್ಬನ್ನು ಜೇಷ್ಠತೆ ಆಧಾರದಲ್ಲಿ(Seniority list) ಕಟ್ಟಾವು,ಜೇಷ್ಠತೆ ಪಟ್ಟಿ ಆನ್ಲೈನ್ ಮೂಲಕ ಪಾರದರ್ಶಕವಾಗಿ ಲಭ್ಯವಾಗುತ್ತದೆ. *ಪೂರೈಕೆ ಮಾಡಿದ ಕಬ್ಬಿನ ಹಣ ಪಾವತಿ ಕೂಡ ಜೇಷ್ಠತೆ ಆಧಾರದಲ್ಲಿ ಪಾವತಿ ಮತ್ತು ಪಾವತಿ ವಿವರಗಳು ಆನ್ಲೈನ್ ಮೂಲಕ ಪಾರದರ್ಶಕವಾಗಿ ಲಭ್ಯವಾಗುವ ವ್ಯವಸ್ಥೆ. *ತೂಕ ಮತ್ತು ಇಳುವರಿಯನ್ನು ರೈತರು ಪರಿಶೀಲನೆ ಮಾಡುವ ಅಧಿಕಾರ.
*ಕಟ್ಟಾವು, ಪಾವತಿ, ತೂಕ, ಇಳುವರಿಯಲ್ಲಿ ಆಗುವ ವ್ಯತ್ಯಾಸ ಮತ್ತು ವಿಳಂಬಕ್ಕೆ ಕಾರ್ಖಾನೆಯವರಿಗೆ ದಂಡ ಮತ್ತು ಕಾರ್ಖಾನೆ ಮೇಲೆ ಕ್ರಮ ಜರುಗಿಸುವ ಅಧಿಕಾರ. *ಒಪ್ಪಂದದ ಪ್ರಕಾರ ರೈತರು ಮತ್ತು ಕಾರ್ಖಾನೆಯವರು ನೆಡೆದುಕೊಳ್ಳಬೇಕಾಗುತ್ತದೆ,ಒಪ್ಪಂದದ ನಿಬಂಧನೆಯನ್ನು ರೈತರು ಮತ್ತು ಕಾರ್ಖಾನೆಯವರು ಪಾಲಿಸಬೇಕಾಗುತ್ತದೆ. *ಒಪ್ಪಂದ ಉಲಂಘನೆ ಮಾಡಿದವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಇಬ್ಬರಿಗೂ ವೈಯಕ್ತಿಕ ಅಧಿಕಾರವಿರುತ್ತದೆ.
ಕಬ್ಬು ಬೆಳೆಗಾರರು ಪ್ರತಿವರ್ಷ ಅನುಭವಿಸುತ್ತಿರುವ ಸಮಸ್ಯೆಗಳಿಂದ ಮುಕ್ತವಾಗಲು ದ್ವಿಪಕ್ಷೀಯ ಒಪ್ಪಂದ(Bilateral Agreement) ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಾಯ ಮಾಡಬೇಕಿದೆ. ಈ ಬಗ್ಗೆ ರೈತರು,ರೈತ ಸಂಘಟನೆಗಳು, ಕಾನೂನು ತಜ್ಞರು ಒಪ್ಪಂದ ಜಾರಿಗೊಳಿಸುವ ಸಂಬಂಧ ಕಾರ್ಯಪ್ರವೃತ್ತರಾಗಬೇಕಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530