ಭತ್ತ: ಕೆ.ಎಂ.ಪಿ-225: ಈ ತಳಿಯು ಅಲ್ಪಾವಧಿ ತಳಿಯಾಗಿಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿದೆ. ಈ ತಳಿಯ ಅಕ್ಕಿಯು ಬಿಳಿ ಬಣ್ಣದಾಗಿದ್ದು, ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಐಆರ್-64 ಭತ್ತದ ಕಾಳುಗಳ ಹಾಗೆ ಹೆಚ್ಚಾಗಿ ಹೋಲುತ್ತವೆ. ಐಆರ್-64 ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-225 ತಳಿಯು ಎಲೆ ಹಾಗೂ ಕುತ್ತಿಗೆ ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆಯನ್ನು ಹೊಂದಿರುತ್ತದೆೆ. ಆದ ಕಾರಣ ಬೆಂಕಿರೋಗಕ್ಕೆ ತುತ್ತಾಗುವ ಐಆರ್-64 ತಳಿಯ ಬದಲು ಕೆ.ಎಂ.ಪಿ.-225 ತಳಿಯನ್ನು ಬೆಳೆಯಬಹುದಾಗಿದೆ. ಈ ತಳಿಯು ಪ್ರತಿ ಎಕರೆಗೆ 24-26 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.
ಭತ್ತ: ಆರ್.ಎನ್.ಆರ್-15048: ಈ ತಳಿಯು ಅಲ್ಪಾವಧಿ ತಳಿಯÁಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿರುತ್ತದೆ. ಈ ತಳಿಯ ಅಕ್ಕಿಯು ತುಂಬಾ ಸಣ್ಣದಾಗಿದ್ದು, ಉತ್ಕೃಷ್ಟ ದರ್ಜೆಯದಾಗಿರುತ್ತದೆ. ಈ ತಳಿಯು ಪ್ರತಿ ಎಕರೆಗೆ 22-24 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.
ಈ ಎರಡೂ ಭತ್ತದ ತಳಿಗಳು ನವೆಂಬರ್ 3 ರಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿರುವ ಕೃಷಿಮೇಳದಲ್ಲಿ ದೊರೆಯುತ್ತವೆ