ಕರ್ನಾಟಕದ ಹಲವು ಜಿಲ್ಲೆಗಳು ತೆಂಗು ಬೆಳೆಗೆ ಹೆಸರುವಾಸಿ. ಅದರಲ್ಲಿಯೂ ತುಮಕೂರು ಜಿಲ್ಲೆ “ ತೆಂಗುಸೀಮೆ” ಎಂದೇ ಖ್ಯಾತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಯೂ ವಿವಿಧ ರೋಗಗಳ ಬಾಧೆ, ಕೀಟಗಳ ಬಾಧೆಯಿಂದ ತೆಂಗು ಇಳುವರಿ ಕಡಿಮೆಯಾಗಿದೆ. ಮರಗಳು ಸೊರಗಿವೆ. ಬಹುತೇಕ ಕಡೆ ಉತ್ಪನ್ನಗಳ ಗುಣಮಟ್ಟವೂ ಕುಸಿತವಾಗಿದೆ. ಇವೆಲ್ಲದರ ಜೊತೆಗೆ ಜಿಲ್ಲೆಯ ಹಲವೆಡೆ ಮಣ್ಣಿನ ಫಲವತ್ತತೆಯೂ ಕಡಿಮೆಯಾಗಿದೆ. ಇವೆಲ್ಲದರಿಂದ ಬೆಳೆಗಾರರ ಆದಾಯವೂ ಕಡಿಮೆಯಾಗಿದೆ.ಈ ಸಮಸ್ಯೆಗಳಿಗೆ ಪರಿಹಾರವಿಲ್ಲವೇ ? ಖಂಡಿತವಾಗಿಯೂ ಇದೆ. ನನ್ನ ಅನುಭವದಂತೆ ಅವುಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಮಾಡಿದ್ದೇನೆ.
ಮಳೆನೀರಿನ ಗರಿಷ್ಠ ಸದ್ಬಳಕೆ ಮತ್ತು ಲಭ್ಯವಿರುವ ನೀರನ್ನೇ ಪರೀಕ್ಷಿಸಿ ಅದರಲ್ಲಿ ಅಧಿಕ ಲವಣಾಂಶ ಇದ್ದರೆ ಫಿಲ್ಟರ್ ಮಾಡಿ ಬಳಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಇವೆಲ್ಲದರ ಜೊತೆಗೆ ಇನ್ನೊಂದು ಸಮಸ್ಯೆ ಎಂದರೆ ತೋಟಗಳಲ್ಲಿ ಉಳುಮೆ ಮಾಡುವಾಗ ದೊಡ್ಡದೊಡ್ಡ ಟ್ರಾಕ್ಟರ್ ಗಳನ್ನು ಬಳಕೆ ಮಾಡುವುದು. ಇದರಿಂದ ತೆಂಗಿನ ಮರದ ಬೇರುಗಳಿಗೂ, ಬುಡಗಳಿಗೂ ಹಾನಿಯಾಗುತ್ತದೆ. ಅವೈಜ್ಞಾನಿಕ ಉಳುಮೆ, ರೋಟೋವೇಟರ್ ಗಳ ನಿರಂತರ ಬಳಕೆಯಿಂದ ಮಣ್ಣಿನ ಭೌತಿಕ ಗುಣ ನಶಿಸುತ್ತದೆ. ಮೇಲ್ಮಣ್ಣು ಮೂಲಕ ಭೂಮಿಗೆ ನೀರು ಇಂಗುವ ಪ್ರಮಾಣವೂ ಕಡಿಮೆಯಾಗುತ್ತದೆ.
ಇವೆಲ್ಲವುಗಳ ಪರಿಣಾಮವಾಗಿ ತೆಂಗಿನ ಮರಗಳ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ಇಳುವರಿಯೂ ಕಡಿಮೆಯಾಗುತ್ತದೆ. ತೆಂಗಿನ ಗಿಡಗಳಿಗೆ ಪೋಷಕಾಂಶ ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗುವುದರಿಂದ ಜೊತೆಗೆ ಮಣ್ಣಿನಲ್ಲಿಯೂ ಸತ್ವ ಇಲ್ಲದೇ ಇರುವುದರಿಂದ ತೆಂಗಿಗೆ ನುಸಿಪೀಡೆ ಜೊತೆಗೆ ಇತರ ಕೀಟಗಳ ಬಾಧೆ ಹೆಚ್ಚಾಗುತ್ತದೆ.
ಈ ಎಲ್ಲ ದುಷ್ಪರಿಣಾಮಗಳನ್ನು ನಾನು ಆಳವಾಗಿ ಅಧ್ಯಯನ ಮಾಡಿದ್ದೇನೆ. ನಾನು ಸಹ ಸಣ್ಣ ಪ್ರಮಾಣದ ತೆಂಗು ಬೆಳೆಗಾರ ಆಗಿರುವುದರಿಂದ ನಿರಂತರ ಪ್ರಯತ್ನಗಳ ನಂತರ ಪರಿಹಾರ ಕಂಡುಕೊಂಡಿದ್ದೇನೆ. ಇದರ ಪ್ರಯೋಜನವನ್ನು ಎಲ್ಲ ತೆಂಗು ಬೆಳೆಗಾರರು ಪಡೆಯಬೇಕು ಎನ್ನುವುದು ನನ್ನ ಇಚ್ಚೆಯಾಗಿದೆ.
ಮಲ್ಟಿ ಪರ್ಪಸ್ ಪವರ್ ಇಂಟರ್ ಕಲ್ಟಿವೇಟರ್
ದಶಕಗಳ ಕಾಲದ ನಿರಂತರ ಪ್ರಯತ್ನಗಳಿಂದಾಗಿ ಬಹುಪಯೋಗಿ ಸರಳ ಬೇಸಾಯ ಯಂತ್ರವನ್ನು ಅಭಿವೃದ್ಧಿಪಡಿಸಿದ್ದೇನೆ. ಇದನ್ನು ಇತರ ಯಾವುದೇ ಅಂತರ ಬೇಸಾಯ ಯಂತ್ರದ ಜೊತೆಗೆ ಹೋಲಿಕೆ ಮಾಡಲಾಗದ ರೀತಿ ವಿನ್ಯಾಸ ಮಾಡಲಾಗಿದೆ. ಇದರ ವಿಶೇಷತೆಗಳು ಸಾಕಷ್ಟಿದೆ.
ಮುಖ್ಯವಾಗಿ ಈ ಯಂತ್ರದ ಉಳುಮೆಯು ಸಾವಯವ ಕೃಷಿಗೆ ಪೂರಕವಾಗಿದೆ. ಈ ಅಭಿಪ್ರಾಯವನ್ನು ಈಗಾಗಲೇ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಅನೇಕ ಕೃಷಿಕರು ವ್ಯಕ್ತಪಡಿಸಿದ್ದಾರೆ. ಮಾರುತಿ ಕೃಷಿ ಉದ್ಯೋಗ್ ಮೂಲಕ ನಾನು ವಿನ್ಯಾಸ ಗೊಳಿಸಿ, ಅಭಿವೃದ್ಧಿ ಮಾಡಿರುವ ಯಂತ್ರ ಕಡಿಮೆ ತೂಕದ್ದಾಗಿದೆ. ಭೂಮಿಯ ಮೇಲೆ ಹೆಚ್ಚು ತೂಕ ಬೀಳುವುದಿಲ್ಲ. ಇದರಿಂದ ಮಣ್ಣು ದಮ್ಮಸ್ಸಾಗುವುದಿಲ್ಲ. ಮಣ್ಣು ದಮ್ಮಸ್ಸಾದರೆ ಮಳೆನೀರು ಇಂಗುವುದರ ಮೇಲೆ ದುಷ್ಪರಿಣಾಮವಾಗುತ್ತದೆ. ಆ ರೀತಿ ಆಗದಂತೆ ಇದನ್ನು ವಿನ್ಯಾಸ ಮಾಡಲಾಗಿದೆ.
ವಿಶಿಷ್ಟ ರೀತಿ ಚಕ್ರಗಳ ವಿನ್ಯಾಸ
ಈ ಬಹುಪಯೋಗಿ ಅಂತರ ಬೇಸಾಯ ಯಂತ್ರದ ಗಾಲಿಗಳ ವಿನ್ಯಾಸವೇ ವಿಭಿನ್ನವಾಗಿದೆ. ಇದಕ್ಕೆ ಟೈರುಗಳನ್ನು ಅಳವಡಿಸಿಲ್ಲ. ಇದರಿಂದ ಟೈರು ಸವೆಯುತ್ತದೆ, ಬದಲಿಸಬೇಕು ಇತ್ಯಾದಿ ತೊಂದರೆಗಳಿರುವುದಿಲ್ಲ. ಚಕ್ರಗಳಿಗೂ ಉಳುಮೆ ಮಾದರಿಯ ಕೊಂಡಿಗಳನ್ನು ಅಳವಡಿಸಲಾಗಿದೆ. ಇದರಿಂದ ಯಂತ್ರ ಸರಾಗವಾಗಿ ಚಲಿಸುವುದರ ಜೊತೆಗೆ ಉಳುಮೆಗೆ ಪೂರಕವಾಗಿರುತ್ತದೆ.
ತಾಂಡವಾಳದ ನೇಗಿಲು
ಮುಖ್ಯವಾಗಿ ಈ ಬಹುಪಯೋಗಿ ಯಂತ್ರಕ್ಕೆ ತಾಂಡವಾಳದಿಂದ ಮಾಡಿದ ನೇಗಿಲು ಅಳವಡಿಸಲಾಗಿದೆ. ತಾಂಡವಾಳದ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ಈ ಲೋಹದ ನೇಗಿಲಿನಿಂದ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಶಿಲ್ಟ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ನೀರು ಚೆನ್ನಾಗಿ ಇಂಗುತ್ತದೆ. ದೀರ್ಘಕಾಲ ಮಣ್ಣಿನಲ್ಲಿ ತೇವಾಂಶ ಇರುತ್ತದೆ. ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ.
ತಾಂಡವಾಳದ ಉಳುಮೆಯಿಂದ ಮಳೆನೀರು ಚೆನ್ನಾಗಿ ಇಂಗುವುದರ ಜೊತೆಗೆ ಅದರಲ್ಲಿರುವ ಉತ್ತಮ ಮತ್ತು ಅಮೂಲ್ಯ ಪೋಷಕಾಂಶಗಳು ಮಣ್ಣಿಗೆ ದಕ್ಕುತ್ತದೆ. ಮಣ್ಣು ಆರೋಗ್ಯವಾಗಿದ್ದರೆ ಬೆಳೆಯು ಆರೋಗ್ಯವಾಗಿರುತ್ತದೆ. ತೆಂಗಿನ ಸಸ್ಯಗಳಿಗೆ ಉತ್ತಮ ಪೋಷಕಾಂಶ ಲಭಿಸುವುದರ ಜೊತೆಗೆ ಅವುಗಳ ರೋಗ, ಕೀಟಗಳ ವಿರುದ್ಧವಾದ ನಿರೋಧಕ ಶಕ್ತಿಯು ವೃದ್ಧಿಸುತ್ತದೆ.
ಕರ್ನಾಟಕದ ಬಹಳಷ್ಟು ರೈತರು ತಮ್ಮತಮ್ಮ ತೋಟಗಳಲ್ಲಿ ಬಹುಪಯೋಗಿ ಅಂತರ ಬೇಸಾಯ ಯಂತ್ರವನ್ನು ಬಳಸಿ ಇಳುವರಿ ಅತ್ಯಧಿಕವಾಗಿರುವುದನ್ನು ದಾಖಲಿಸಿದ್ದಾರೆ. ಇದರಿಂದ ನಾನು ಪಟ್ಟಿರುವ ಶ್ರಮಕ್ಕೂ ಮಾನ್ಯತೆ ದೊರೆತಂತೆ ಆಗಿದೆ ಎಂದು ಭಾವಿಸಿದ್ದೇನೆ.
ಆಸಕ್ತರು ನೇರವಾಗಿ ಬಂದು ಇನ್ನಷ್ಟು ವಿವರಗಳನ್ನು ಪಡೆಯಬಹುದು, ಪೋನಿನಲ್ಲಿಯೂ ಮಾತನಾಡಬಹುದು. ನವೆಂಬರ್ 17 ರಿಂದ 20ರ ತನಕ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಬಹುಪಯೋಗಿ ಅಂತರ ಬೇಸಾಯ ಯಂತ್ರದ ಮಳಿಗೆ ಇದೆ. ಇದರ ಸಂಖ್ಯೆ 22. ಆಸಕ್ತರು ಬಂದು ಭೇಟಿಯಾಗಬಹುದು.
ವಿಳಾಸ: ಮಾರುತಿ ಕೃಷಿ ಉದ್ಯೋಗ್, ಕೆರೆಕೋಡಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ದೂರವಾಣಿ: 8618693986