Home Blog
ಹೊಲಗಳೆಂದರೆ ಅವು ಗೀಜಗನ ಗೂಡು; ಜೀವವೈವಿಧ್ಯತೆಯ ಬದುಕಿನ ಬೀಡು. ಒಂದೊಂದೇ ಹೊಸ ಹುಟ್ಟಿನ ಹುಟ್ಟಾಣಿಕೆಯ ಕಾಣುವ ಸೋಜಿಗಗಳ ತಾಣಗಳು ಹೊಲ. ಬೀಜಗಳು ಮೊಳೆಯುತ್ತವೆ, ಬಳ್ಳರಿಯುತ್ತವೆ ಬೀಜಗಳು ಹುಟ್ಟಿ ಹಲವಾರು.
ಹಕ್ಕಿಗಳು ಉಣ್ಣಲು ಬಂದು ಗಿಡಗಳ ಬುಡಗಳನ್ನೇ ತಾವು ಮಾಡಿಕೊಂಡು ಹುಲ್ಲು ಗರಿ ಗೂಡು ಎಣೆದು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತಿರುತ್ತವೆ ಕಾವಿಗೆ ಕೂತು, ಅಕ್ಕೆಅಕ್ಕೆಗೂ ಕಾವು ಕೊಟ್ಟು. ಹಕ್ಕಿ ಗೂಡುಗಳ ಮನೆಯಿಂದ ಮನೆಗೆ ಮೂಸಿರಿಯುತ್ತಾ, ಮುಸುಣಿ ಇಕ್ಕಿ ಮೊಟ್ಟೆ ಹುಡುಕಿ ಮಸಕಾಡಿ ಹರಿಯುವ ಸಿಗುಳು ನೀರಿನ ಹಾಗೆ ಹರಿದಾಡುವ ಹಾವುಗಳು, ಹೂ ಮರಿಗಳ ಮೇಲೆ...
ಕೃಷಿಭೂಮಿಯಲ್ಲಿ ಮುಖ್ಯವಾದ ಕೆಲವು ಗುಣಗಳಿರಬೇಕು. ಅವುಗಳಲ್ಲಿ ಇಂಗಲಾಂಶವೂ ಸೇರಿದೆ. ಅದು ಇರುವಾಗ ಆಗುವ ಅನುಕೂಲದ ಬಗ್ಗೆ ಪಟ್ಟಿ ನಿಮ್ಮ ಮುಂದಿದೆ.
ದಿನಾಂಕ: ಮಂಗಳವಾರ, 11ನೇ ಫೆಬ್ರವರಿ 2025 ಸಂಚಿಕೆಯ ಸಮಯ ಭಾರತೀಯ ಕಾಲಮಾನ 11:40 ಗಂಟೆಗಳು. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ.
ಕರ್ನಾಟಕ ರಾಜ್ಯದ ಸಿನಾಪ್ಟಿಕ್ ವೈಶಿಷ್ಟ್ಯಗಳು:
ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ಪೂರ್ವ/ಪೂರ್ವ ಹವಾಮಾನವಿರುತ್ತದೆ.
*ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಒಳನಾಡಿನಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ.
ದಿನ 1 (11.02.2025):
• ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ.
• ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು/ಹೆಚ್ಚಾಗಿ ಉಂಟಾಗುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಉಂಟಾಗುವ ಸಾಧ್ಯತೆ ಇದೆ.
ದಿನ 2 (12.02.2025):
• ರಾಜ್ಯದಾದ್ಯಂತ...
ಅದು 1998 ರ ಕಾಲ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಗಸೂರಿನ ಕೃಷಿಕರು ನನ್ನೆದುರು ಅಕ್ಕಿ ಮುಡೆ ಕಟ್ಟುವ ಪ್ರಾತ್ಯಕ್ಷಿಕೆ ಮಾಡಿದರು. ನಾನು ಚಿತ್ರ ದಾಖಲಿಸಿದೆ. ಅದು ಇಲ್ಲಿದೆ. ವಿಷಯ ಇಷ್ಟೇ ಅಲ್ಲ, ಈ ಮುಡೆ ಕಟ್ಟುವಾಗ ಎಷ್ಟು ದೊಡ್ಡದು ಮಾಡಲಿ? ಕೇಳಿದ್ದರು. "50. ಕಿಲೋ ತೂಕದ್ದು ಮಾಡಿ "ಎಂದಿದ್ದೆ. "ನನಗೇ ತೂಕ ತೆಳುದಿಲ್ಲ, ನಮ್ದು ಪಾಯಲಿ ಲೆಕ್ಕ " ಎಂದು ನಗುತ್ತಾ ಕೆಲಸ ಆರಂಭಿಸಿದರು.
ಬಾಳೆ ಬಳ್ಳಿಯನ್ನು ಮಡಚಿ ಪಾದಕ್ಕೆ ಸಿಕ್ಕಿಸಿ ಮೊಳಕಾಲು ಚಿಪ್ಪಿನ ತನಕ ಅಳೆದು ಅದನ್ನು ಮುಡೆ ಪಾಯದ ಹಗ್ಗವಾಗಿಸಿ...
ಸ್ವಾತಂತ್ರ್ಯದ 75 ವರ್ಷಗಳ ನಂತರ 'ಪಾಳುಭೂಮಿ' ಎಂಬ ನಾಮಕರಣವನ್ನು ಮತ್ತೆ ರೂಪಿಸುವ ಸಮಯ ಬಂದಿದೆ. ಭಾರತದ 205 ಮಿಲಿಯನ್ ಎಕರೆಗಳಷ್ಟು ವಿಸ್ತೀರ್ಣದ ಕಾಡುಗಳು, ಹುಲ್ಲುಗಾವಲುಗಳು ಮತ್ತು ಜಲಮೂಲಗಳು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರಂತಹ ಅಂಚಿನಲ್ಲಿರುವ ಗುಂಪುಗಳು ಸೇರಿದಂತೆ 350 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಮೀಣ ಜನರಿಗೆ ಜೀವನಾಡಿಯಾಗಿದೆ.
ಈ ಸಂಪನ್ಮೂಲಗಳು ಆಹಾರ, ಉರುವಲು ಮತ್ತು ಮೇವಿನಂತಹ ಅಗತ್ಯ ವಸ್ತುಗಳನ್ನು ಒದಗಿಸುತ್ತವೆ, ಆದರೆ ಅವುಗಳ ಅತಿಯಾದ ಬಳಕೆಯು ಹವಾಮಾನ ದುರ್ಬಲತೆ ಮತ್ತು ಗ್ರಾಮೀಣ ಸಂಕಷ್ಟವನ್ನು ಹೆಚ್ಚಿಸಿದೆ. ಸ್ಥಳೀಯ ಸಮುದಾಯಗಳ, ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿನ ಸಾಂಪ್ರದಾಯಿಕ...
ಅಂದು ಭವಾನಕ್ಕ ಏನಿಲ್ಲವೆಂದರೂ ಎಂಟು ಬಾರಿ ಫೋನು ಮಾಡಿದ್ದರು. ಅವರದು ಸಾಗರದ ವಿಜಯನಗರ ಬಡಾವಣೆಯಲ್ಲಿ ವಿಶಾಲವಾದ ಸೈಟಿನಲ್ಲಿ ಚೆಂದದ ಮನೆಯಿದೆ. ಮನಕ್ಕೆ ಖುಷಿ ಕೊಡುವ ಹತ್ತಾರು ಬಗೆಯ ಗಿಡಮರಗಳ ನಡುವೆ ಸುಂದರ ಮನೆ. ಗಂಡ ವೆಂಕಪ್ಪನವರು ಮತ್ತು ಭವಾನಕ್ಕ ಇಬ್ಬರೂ ನಿವೃತ್ತ ನೌಕರರು. ನಿವೃತ್ತಿಯ ಬದುಕನ್ನು ಅದೆಷ್ಟು ಲವಲವಿಕೆಯಿಂದ ನಡೆಸುತ್ತಿದ್ದಾರೆ ಎಂದರೆ ಅದನ್ನು ನೋಡುವುದೇ ಒಂದು ಆನಂದ.
ಭವಾನಕ್ಕ, ಭವಾನಿ ಹೆಗಡೆ ಫೋನು ಮಾಡಿದ್ದರು ಎಂದೆನಲ್ಲಾ ಅದು ಜೇನಿನ ವಿಷಯಕ್ಕೆ ಆಗಿತ್ತು.. ಭವಾನಕ್ಕನಿಗೆ ಹಿಂದಿನ ದಿನವಷ್ಟೇ ಜೇನು ಪೆಟ್ಟಿಗೆ ಕೊಟ್ಟಿದ್ದೆ. ರಾತ್ರಿ ಆಗಿದ್ದರಿಂದ ಮೇಲು...
ಮನೆಯಲ್ಲಿರುವ ಬಾಕ್ಸ್ ರೂಪದ ದಿವಾನ ಕಾಟಿನೊಳಗೆ ನಿತ್ಯ ಬಳಸದ ಹಲವು ಬಗೆಯ ಸಾಮಾನುಗಳನ್ನು ತುಂಬಿಟ್ಟಿದ್ದೇವೆ. ಕೆಲವು ದಿನಗಳ ಹಿಂದೆ ಅದರೊಳಗೆ ಏನನ್ನೋ ಹುಡುಕುವಾಗ ಸುಮಾರು ಇಪ್ಪತೈದು ಸೇರುಗಳಷ್ಟಿದ್ದ ರಾಗಿಯ ಚೀಲವೊಂದಿತ್ತು. ಅದನ್ನು ಬಿಚ್ಚಿ ನೋಡಿದೆ. ಅದರಲ್ಲಿದ್ದ ರಾಗಿ ಬಳಸಲು ಯೋಗ್ಯವಾಗಿತ್ತು. 2017ರ ಆಗಸ್ಟ್‍ನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ವಾಸಸ್ಥಳ ಬದಲಿಸುವ ಒಂದೂವರೆ ವರ್ಶ ಮೊದಲು ಎರಡು ಕ್ವಿಂಟಾಲ್‍ನಶ್ಟು ಕ್ಲೀನ್ ಮಾಡಿಸಿದ ರಾಗಿಯನ್ನು ಊರಿಂದ ತಂದಿದ್ದೆ. ಮನೆಯಿಂದ ತರುವ ಒಂದು ವರ್ಶಕ್ಕೂ ಹಿಂದೆ ಬೆಳೆದ ರಾಗಿ ಅದಾಗಿತ್ತು. ಅಂದರೆ ಏಳು ವರ್ಶಗಳಿಗೂ ಹೆಚ್ಚು ಹಳೆಯ ರಾಗಿ...
ದಿನಾಂಕ: ಬುಧವಾರ, 05ನೇ ಫೆಬ್ರವರಿ 2025ಸಂಚಿಕೆಯ ಸಮಯ ಭಾರತೀಯ ಕಾಲಮಾನ 11:20 ಗಂಟೆ
ಕರ್ನಾಟಕ ರಾಜ್ಯದ ಸಿನಾಪ್ಟಿಕ್ ವೈಶಿಷ್ಟ್ಯಗಳು:ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ಪೂರ್ವ / ಆಗ್ನೇಯ ಹವಾಮಾನವಿರುತ್ತದೆ.
*ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಒಳನಾಡಿನಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ.
ದಿನ 1 (05.02.2025):
• ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ.
• ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಕಡೆಗಳ ಒಂದೆರಡು ಕಡೆಗಳಲ್ಲಿ ಮಂಜು ಇರುವ ಸಾಧ್ಯತೆ ಇದೆ.
ದಿನ...
ಕಾಡು ಪ್ರಾಣಿಗಳೆಲ್ಲ ಊರೊಳಗಿನ ಕೃಷಿ ಆವರಣಗಳಿಗೆ ದಿನಾ ದಾಳಿ ಇಡುತ್ತಿವೆ. ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತಿವೆ. ಇದು ಬರೀ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು ಕರಾವಳಿ; ಆ ಕಡೆ ಬಯಲು ಸೀಮೆಯಲ್ಲೂ ಇದೇ ಸಮಸ್ಯೆ. ಹಂದಿ, ಮುಳ್ಳು ಹಂದಿ, ಆನೆ ,ಜಿಂಕೆ, ಕಾಡುಕೋಣ ,ಮಂಗ, ನವಿಲು, ಇಲಿ, ಹೆಗ್ಗಣ, ಚಿರತೆ ಕಾಡುಕೋಣ ಹೀಗೆ ನೂರಾರು ಜೀವ ಜಂತುಗಳ ಜೊತೆಗೆ ರೈತ ತಮ್ಮ ಕೃಷಿಯನ್ನು ಉಳಿಸಲು ಸತತ ಪ್ರಯತ್ನ ಪಡಬೇಕಾಗಿದೆ.
ನಾಲ್ಕು ನಾಲ್ಕೈದು ವರ್ಷಗಳಿಂದ ಈ ಮೇಲಿನ ಎಲ್ಲವುಗಳನ್ನು ನನ್ನಂಥ ರೈತರೇ...
ಉತ್ಪಾದನೆಯಲ್ಲಿ ಜಾಗತಿಕ ಕುಸಿತ ಮತ್ತು ಬೇಡಿಕೆ ಹೆಚ್ಚಳದಿಂದಾಗಿ ಕೇವಲ ಮೂರು ತಿಂಗಳಲ್ಲಿ ಕಾಫಿ ಬೆಲೆ ಪ್ರತಿ ಕಿಲೋಗೆ 60 ರೂ. ಏರಿಕೆಯಾಗಿವೆ.ಕಾಫಿ ಉತ್ಪಾದಿಸುವ ಪ್ರದೇಶಗಳಲ್ಲಿ, ಬೆಲೆಗಳು ದಾಖಲೆಯ ಮಟ್ಟವನ್ನು ತಲುಪುತ್ತಿದ್ದು, ರೈತರು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿವೆ.
ಮಧ್ಯ ಕೇರಳದಲ್ಲಿ, ಕಾಫಿ (ರೋಬಸ್ಟಾ) ಬೀನ್ಸ್ ಬೆಲೆ ಪ್ರತಿ ಕಿಲೋಗ್ರಾಂಗೆ 435 ರೂ.ಗಳಿಗೆ ಏರಿದೆ, ಆದರೆ ಸಿಪ್ಪೆ ಇರುವ ಬೀಜಕೋಶಗಳು 260 ರೂ.ಗಳಿಗೆ ಮತ್ತು ಕಚ್ಚಾ ಕಾಫಿ ಚೆರ್ರಿಗಳು ಪ್ರತಿ ಕಿಲೋಗ್ರಾಂಗೆ 90 ರೂ.ಗಳಿಗೆ ಮಾರಾಟವಾಗುತ್ತಿವೆ. ವಯನಾಡಿನಲ್ಲಿ, ಕಾಫಿ (ರೋಬಸ್ಟಾ ಚೆರ್ರಿ) ಬೆಲೆಗಳು 260...