ಇಂಥ ಹೊಂಡಗಳನ್ನು ಮಳೆನೀರು ಕೊಯ್ಲಿಗೆ ಬಳಸಬಹುದಲ್ಲವೇ

0
ಮುರಕಲ್ಲು ಹೊಂಡ
ಚಿತ್ರ-ಲೇಖನ: ನರೇಂದ್ರ ರೈ ದೇರ್ಲ

ಮುರಕಲ್ಲು ಅಥವಾ ಜಂಬಿಟ್ಟಿಗೆ ಕರಾವಳಿ ಪಾಲಿಗೆ ವರವೂ ಹೌದು ಶಾಪವೂ ಹೌದು. ಕರಾವಳಿ ಮತ್ತು ಕೇರಳದ ಬಹುಭಾಗದಲ್ಲಿ ಹಬ್ಬಿರುವ ಈ ಜಂಬಿಟ್ಟಿಗೆಯ ಕಾರಣಕ್ಕೆ ಬೀಸು ಮಳೆ ಸವಕಳಿಯಿಂದ ನಮ್ಮ ನೆಲ ಪಾರಾಗಿದೆ. ಆದರೆ ಇತ್ತೀಚಿನ ದಿನಮಾನದಲ್ಲಿ ಇಲ್ಲಿಯ ಸ್ಥಾವರಾಭಿವೃದ್ಧಿಗೆ ಮುರಕಲ್ಲು ಪೂರಕವೆಂದು  ಭೂಮಿಯನ್ನು ಅಗೆದು ಬಗೆದು ಇದನ್ನು ಮೇಲೆತ್ತುವ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದೆ.

ಈಗ ಸಿಮೆಂಟ್  ಇಟ್ಟಿಗೆಗಳು ಬಂದಮೇಲೆ ಇವುಗಳ ಅವಲಂಬನೆ ಸ್ವಲ್ಪ ಕಡಿಮೆಯಾದರೂ ಗ್ರಾಮಾಂತರ ಪ್ರದೇಶಗಳ ಸ್ಥಾವರ ಕಾಮಗಾರಿಗಳಲ್ಲಿ ಮುರಕಲ್ಲಿನ ಬಳಕೆ ಹೆಚ್ಚು .ಇಂಥ ಗಣಿಗಾರಿಕೆಗೆ ಸರಕಾರ ಅನುಮತಿ ನೀಡುವಾಗ ಒಂದು ನಿರ್ಬಂಧವನ್ನು ಹಾಕಲೇಬೇಕು.

ಲಕ್ಷಾಂತರ ಕಲ್ಲುಗಳನ್ನು ಎತ್ತಿ ಭೂಮಿಯನ್ನು ಬಗೆದು ಖಾಲಿ ಕೆರೆಯ ಹಾಗೆ ಮಾಡಿ ಹೋಗುವ ಗುತ್ತಿಗೆದಾರರು ಕೊನೆಗೆ ಅಕ್ಕ ಪಕ್ಕದಲ್ಲಿ ಹರಿದುಹೋಗುವ ಮಳೆ ನೀರನ್ನು ಇಂತಹ ಗಣಿ ಹೊಂಡಗಳಿಗೆ ತುಂಬಿಸುವ ವ್ಯವಸ್ಥೆಯನ್ನು ಮಾಡ ಬೇಕೆಂಬ ನಿಯಮ ರೂಪಿಸಬೇಕು.

ಕೋಟಿಗಟ್ಟಲೆ ಲೀಟರ್ ನೀರನ್ನು ತುಂಬಿಸಿಡಬಹುದಾದ ಇಂಗಿಸಬಹುದಾದ ಇಂಥ ಮುರಕಲ್ಲಿನ ಕೋರೆಗಳು ಕರಾವಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಬೋಳು ಬಯಲಲ್ಲಿ ,ಗುಡ್ಡೆಯಂಚಿನಲ್ಲಿರುವ ಇಂಧ ಹೊಂಡಗಳು ಮಳೆ ಕೊಯ್ಲಿಗೆ ಹೇಳಿ ಮಾಡಿಸಿದಂತಿದೆ.

ಗುತ್ತಿಗೆದಾರರು ಕಲ್ಲೆತ್ತಿ ಲಾಭ ಪಡುತ್ತಾರೆಯೇ ಹೊರತು ಅವುಗಳನ್ನು ಮಳೆ ನೀರಿನಿಂದ ತುಂಬಿಸುವ ಕೆಲಸ ಮಾಡುವುದಿಲ್ಲ. ಇಲಾಖೆಗಳು ಅನುಮತಿ ಕೊಡುವಾಗ ಕೊನೆಗೊಂದು ಷರ – ನಿರ್ಬಂಧ ಹಾಕಿದರೆ ಬರಗಾಲದ ಇಂತಹ ಸಂದರ್ಭದಲ್ಲಿ ನೀರು ಇಂಗಿಸುವಲ್ಲಿ ಈ ಕೋರೆಗಳಿಂದ ಸಹಾಯವಾಗುತ್ತದೆ.

LEAVE A REPLY

Please enter your comment!
Please enter your name here