ಬೆಳೆ ಪರಿವರ್ತಿಸಿ ಚಮತ್ಕಾರ ಗಮನಿಸಿ

0

ಭಾರತೀಯ ಕೃಷಿಪದ್ಧತಿಗೆ ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚಿನ ವೈಜ್ಞಾನಿಕ ಬೇಸಾಯದ ತಳಹದಿಯಿದೆ. ಈ ಹಾದಿಯಲ್ಲಿ ಕೃಷಿಕರು ಬೆಳೆ ಪರಿವರ್ತನೆ ಪ್ರಾಮುಖ್ಯತೆ ಕಂಡು ಕೊಂಡಿದ್ದಾರೆ. ಪ್ರತಿ ಬಾರಿಯೂ ಬೆಳೆ ಆವರ್ತನ ಮಾಡುತ್ತಾ ಬರುತ್ತಿದ್ದಾರೆ.

ಹಸಿರು ಕ್ರಾಂತಿ ನಂತರ ವಿಶೇಷವಾಗಿ ನೀರಾವರಿ ಪ್ರದೇಶಗಳ ಕೃಷಿಭೂಮಿಗಳಲ್ಲಿ ಬಹುತೇಕ ರೈತರು ಬೆಳೆ ಪರಿವರ್ತನೆ ಮಾಡುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಭೂಮಿಯ ಫಲವತ್ತತೆ ಕಡಿಮೆಯಾಗುತ್ತಾ ಬಂದಷ್ಟೂ ಕೃಷಿಯ ಖರ್ಚುವೆಚ್ಚ ಹೆಚ್ಚಾಗುತ್ತಾ ಬರುತ್ತದೆ.

ಈ ದೃಷ್ಟಿಯಲ್ಲಿ ಬೆಳೆ ಪರಿವರ್ತನೆ ಬಹಳ ಮುಖ್ಯ. ಇದರಿಂದ ಕೃಷಿಭೂಮಿಯ ಮಣ್ಣಿನಲ್ಲಿ , ಬೆಳೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಿಷ್ಟೇ ಅಲ್ಲದೇ ತೇವಾಂಶ ಹಿಡಿದಿಟ್ಟುಕೊಳ್ಳುವಂತ ಶಕ್ತಿ ಹೆಚ್ಚುತ್ತದೆ ಬೆಳೆ ಕೂಡ ಹುಲಸಾಗಿ ಬರುತ್ತದೆ. ಇಳುವರಿ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.

ಇದಕ್ಕೆಲ್ಲ ಮುಖ್ಯ ಕಾರಣ ಅಂದರೆ ಸದೆ (ಕಳೆ ) ಅಂದರೆ ಹುಲ್ಲು ಬಾರರದಂತೆ ನೋಡಿ ಕೊಂಡಾಗ ಮಾತ್ರ ಭೂಮಿಯಲ್ಲಿ ಇರುವ ಪೋಷಕಾಂಶಗಳು ತೇವಾಂಶ ಬೆಳೆಗಳಿಗೆ ಪೂರ್ಣ ಸಿಗುತ್ತದೆ

ಕಳೆ (ಸದೆ) ಇದ್ದರೆ ಈ ಎಲ್ಲಾ ಪೋಷಕಾಂಶ ಮತ್ತು ತೇವಾಂಶ ಕಳೆಗಳಿಗೆ ದಕ್ಕುತ್ತದೆ. ಇದರಿಂದ ಬೆಳೆ ಸಮೃದ್ಧವಾಗಿ ಬೆಳೆಯುವುದಿಲ್ಲ. ಆದ್ದರಿಂದ ಬೀಜ ಆಗುವುದಕ್ಕೆ ಮುಂಚಿತವಾಗಿ ಕಳೆಗಳನ್ನು ತೆಗೆದಯಬೇಕು.
ನೆನಪಿಡಬೇಕಾದ ಅಂಶವೆಂದರೆ ಕಳೆಗಳನ್ನು ತೆಗೆಯಲು ರಾಸಾಯನಿಕ ದ್ರವಗಳನ್ನು ಬಳಸಬಾರದು. ಇದರಿಂದ ಹಲವಾರು ರೀತಿಯ ದುಷ್ಪರಿಣಾಮಗಳು ಆಗುತ್ತವೆ. ಕೈಯಿಂದ ಅಥವಾ ಕಳೆ ನಿವಾರಕ ಯಂತ್ರಗಳನ್ನು ಬಳಸಬೇಕು.

ಲೇಖಕರು: ಸೋಮನಾಥ ರೆಡ್ಡಿ ಪೂರ್ಮಾ

LEAVE A REPLY

Please enter your comment!
Please enter your name here