ಹವಾಮಾನ ವರದಿ : ಸಾರ್ವಕಾಲಿಕ ದಾಖಲೆ ಮುರಿದ ಭಾರೀ ಮಳೆ !

0

ಮಂಗಳವಾರ, 18ನೇ ಅಕ್ಟೋಬರ್ 2022 / 26 ನೇ ಆಶ್ವೀಜ 1943  ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:

ಸಾರ್ವಕಾಲಿಕ ದಾಖಲೆಯಾಗಿ ಬೆಂಗಳೂರು ನಗರದಲ್ಲಿ  17ನೇ ಅಕ್ಟೋಬರ್ 2022 ರಂದು ವಾರ್ಷಿಕ ಮಳೆಯ ಒಟ್ಟು ಮೊತ್ತ 1709.1 ಮಿಮೀ ದಾಟಿದ್ದು, ಇದು ಹಿಂದಿನ 2017 ರ ಸಾರ್ವಕಾಲಿಕ ದಾಖಲೆಯಾದ ವಾರ್ಷಿಕ ಮಳೆಯ ಮೊತ್ತ  1696.0 ಮಿಮೀ ನ್ನು ದಾಟಿದೆ.

ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ  ಒಳನಾಡಿನ  ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಇತರೆ ಪ್ರಮುಖ ಮಳೆ ಪ್ರಮಾಣ (ಸೆಂ.ಮಿ): ನಾಪೋಕ್ಲು (ಕೊಡಗು ಜಿಲ್ಲೆ ) 5, ಬೇಲಿಕೇರಿ (ಉತ್ತರ ಕನ್ನಡ ಜಿಲ್ಲೆ ), ವಿರಾಜಪೇಟೆ (ಕೊಡಗು ಜಿಲ್ಲೆ ) ತಲಾ 4; ಶಿರಾಲಿ, ಬಸಗೋಡು (ಉತ್ತರ ಕನ್ನಡ ಜಿಲ್ಲೆ ), ಸೆದ್ಬಾಳ್ (ಬೆಳಗಾವಿ ಜಿಲ್ಲೆ ), ಧಾರವಾಡ, ಬಂಡೀಪುರ (ಚಾಮರಾಜನಗರ ಜಿಲ್ಲೆ ), ಹುಂಚದಕಟ್ಟೆ (ಶಿವಮೊಗ್ಗ ಜಿಲ್ಲೆ ), ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ ) , ಸಿರಾ (ತುಮಕೂರು ಜಿಲ್ಲೆ ) ತಲಾ 3;  ಧರ್ಮಸ್ಥಳ, ಬೆಳ್ತಂಗಡಿ, ಮಾಣಿ (ಎಲ್ಲ ದಕ್ಷಿಣ ಕನ್ನಡ ಜಿಲ್ಲೆ ), ಕಾರ್ಕಳ (ಉಡುಪಿ ಜಿಲ್ಲೆ ), ಕಾರವಾರ, ಯಲ್ಲಾಪುರ, (ಉತ್ತರ ಕನ್ನಡ ಜಿಲ್ಲೆ ), ಕೊರಟಗೆರೆ, ವೈ ಎನ್ ಹೊಸಕೋಟೆ (ಎರಡೂ ತುಮಕೂರು ಜಿಲ್ಲೆ ) , ಸಾಗರ  (ಶಿವಮೊಗ್ಗ ಜಿಲ್ಲೆ ), ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ತಲಾ 2; ಅಂಕೋಲಾ, ಸಿದ್ದಾಪುರ, ಕದ್ರಾ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಮೂಡುಬಿದಿರೆ (ದಕ್ಷಿಣ ಕನ್ನಡ ಜಿಲ್ಲೆ), ಧಾರವಾಡ, ಕಲಘಟಕಿ (ಧಾರವಾಡ ಜಿಲ್ಲೆ ), ಬಂಕಾಪುರ (ಹಾವೇರಿ ಜಿಲ್ಲೆ ), ಭಾಲ್ಕಿ (ಬೀದರ್ ಜಿಲ್ಲೆ ), ಶಿರಹಟ್ಟಿ (ಗದಗ ಜಿಲ್ಲೆ ), ಮಾಲೂರು (ಕೋಲಾರ ಜಿಲ್ಲೆ ) , ಬಾಳೆಹೊನ್ನೂರು , ಶೃಂಗೇರಿ , ಯಗಟಿ , ಚಿಕ್ಕನಹಳ್ಳಿ AWS (ಎಲ್ಲಾ ಚಿಕ್ಕಮಗಳೂರು ಜಿಲ್ಲೆ )  , ಆನವಟ್ಟಿ , ಸೊರಬ (ಎರಡೂ ಶಿವಮೊಗ್ಗ ಜಿಲ್ಲೆ ) ಶ್ರವಣಬೆಳಗೊಳ (ಹಾಸನ ಜಿಲ್ಲೆ ) , ಶ್ರೀಮಂಗಲ (ಕೊಡಗು ಜಿಲ್ಲೆ ) , ಚಿಕ್ಕಬಳ್ಳಾಪುರ, ಚಿಂತಾಮಣಿ  (ಎರಡೂ ಚಿಕ್ಕಬಳ್ಳಾಪುರ ಜಿಲ್ಲೆ ) ತಲಾ 1. ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 35.4 ಡಿ.ಸೆ. ರಾಯಚೂರಿನಲ್ಲಿ ದಾಖಲಾಗಿದೆ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 18.6 ಡಿ.ಸೆ. ಬಾಗಲಕೋಟೆಯಲ್ಲಿ   ದಾಖಲಾಗಿದೆ.

20 ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬಹುತೇಕ  ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯ  ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ  ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:   ದಕ್ಷಿಣ ಒಳನಾಡಿನ ಬಹುತೇಕ  ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯ  ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ  ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಗುಡುಗು ಮುನ್ಸೂಚನೆ:   ಮುಂದಿನ 48 ಘಂಟೆಗಳಲ್ಲಿ   ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ:  ಮುಂದಿನ 48 ಘಂಟೆಗಳಲ್ಲಿ   ಇಲ್ಲ. ಮೀನುಗಾರರಿಗೆ ಎಚ್ಚರಿಕೆ    ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕದಲ್ಲಿ ಇಲ್ಲ.

20ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಮಳೆ/ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಮಳೆ/ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ

LEAVE A REPLY

Please enter your comment!
Please enter your name here