ಸಮುದ್ರದ ತಳಮಳ, ನೆಲದ ಜೀವಿಗಳಿಗೆ ಕಳವಳ !

0
ಲೇಖಕರು: ಮೃತ್ಯುಂಜಯ ನಾರ

ವೈಜ್ಞಾನಿಕವಲ್ಲದ ಜೊತೆಗೆ ಮಿತಿಯಿಲ್ಲದ  ಮೀನುಗಾರಿಕೆಯಿಂದ ಭಾರಿ ಅನಾಹುತಗಳಿವೆ.  ಸಮುದ್ರವನ್ನ ಲೂಟಿ ಹೊಡೆಯೋದು.ಕ್ಯಾಪಿಟಾಲಿಸ್ಟಿಕ್ ಕರಾಳಮುಖ.ಜಗತ್ತಿನಾದ್ಯಂತ ಇಂದು ಅನುಭವಿಸುತ್ತಿರುವ ತೀವ್ರಮಳೆ ,ಬಿಸಿ ಬಿರು ಗಾಳಿಗಳಿಗೆ ಇದೂ ಒಂದು ಕಾರಣ.ಜಾಗತಿಕ ತಾಪಮಾನ ಸಿಕ್ಕಾಪಟ್ಟೆ ಏರೋದಕ್ಕೆ ಅರಣ್ಯನಾಶವೊಂದೇ ಕಾರಣವಲ್ಲ.ನಮ್ಮ ಸಮುದ್ರದಲ್ಲಿನ ಜೀವಿಗಳ ಅಳಿವೂ ಸಹ ಕಾರಣವಾಗುತ್ತಿದೆ.

ಸಮುದ್ರದಲ್ಲಿನ ಶಾರ್ಕ್ ,ತಿಮಿಂಗಿಲು,ಸಮುದ್ರಸಿಂಹ, ಡಾಲ್ಫಿನ್ ಮತ್ತು ಇನ್ನಿತರೇ ಭಕ್ಷಕ ಜಲಚರ ಜೀವಿಗಳ ಮುಖ್ಯ ಆಹಾರ ಸಣ್ಣಸಣ್ಣ ಮೀನುಗಳು .ಈ ಮೀನುಗಳಿಂದಲೇ ಅವುಗಳ ಜೀವನ ಇವುಗಳನ್ನು ತಿಂದು ಸಂತಾನೋತ್ಪತ್ತಿ ನಡೆಸುತ್ತಾ ಸಾಗರದೆಲ್ಲೆಡೆ ಸಂಚರಿಸುವ ಭಕ್ಷಕ ಜಲಚರಗಳು ತಮ್ಮ ದೇಹದಿಂದ ಮಲಮೂತ್ರಗಳನ್ನ ವಿಸರ್ಜಿಸುತ್ತವೆ.

ಜಲಚರಗಳ ಈ ಮಲಮೂತ್ರ ಸಮುದ್ರದಲ್ಲಿನ ದಲ್ಲಿನ ಪೈಟೋಪ್ಲಾಂಕ್ಟಾನ್ ಎನ್ನುವ ಸೂಕ್ಷ್ಮ ಸಸ್ಯಗಳಿಗೆ ಅತಿಮುಖ್ಯ ಜೈವಿಕ ಗೊಬ್ಬರ. “ಪೈಟೋಪ್ಲಾಂಕ್ಟಾನ್” ಗಳು ಸಮುದ್ರದಲ್ಲಿ ತೇಲಾಡುತ್ತಾ ವಿಪುಲವಾಗಿ ಬೆಳೆಯುವ ಸೂಕ್ಷ್ಮ ಸಸ್ಯಗಳು.ನಮ್ಮ ವಾತಾವರಣದಲ್ಲಿ ಇವುಗಳಿಂದಲೇ  ಅತಿಹೆಚ್ಚು ಆಕ್ಸಿಜನ್  ಉತ್ಪತ್ತಿಯಾಗುವುದು.( ಶೇಕಡ 70ರಷ್ಟು)

ಸಾಗರ ರಚನೆಯ ಜೈವಿಕ ಗಂದಗಾಳಿಯೂ ಗೊತ್ತಿಲ್ಲದ  ಕಮರ್ಷಿಯಲ್  ಮೀನುಗಾರಿಕೆ ಕಂಪನಿಗಳು ಸಾಗರದಲ್ಲಿನ ಸಣ್ಣ ಮೀನುಗಳು ಮತ್ತು ತಿಮಿಂಗಿಲು ,ಶಾರ್ಕ್ ,ಡಾಲ್ಫಿನ್ ಸೇರಿದಂತೆ ಎಲ್ಲಾ ಜಲಚರಗಳನ್ನ ಹಿಡಿದು ಕಂಪನಿಗಳಿಗೆ ಸಾಗಿಸುತ್ತಾರೆ.

ಹೆಚ್ಚು ಹಣ ಮಾಡುವ ಉದ್ದೇಶದಿಂದ ಅಗತ್ಯಕ್ಕಿಂತ ಅತಿಹೆಚ್ಚು ಮೀನುಗಳ ಬೇಟೆಯಾಡುತ್ತಾರೆ.ಇದರಿಂದ ಸಣ್ಣಮೀನುಗಳು ಪ್ರಮಾಣ ಕುಸಿದು ಸಾಗರದಲ್ಲಿನ ದೊಡ್ಡ ಜಲಚರಗಳಿಗೆ ಆಹಾರದ ಅಭಾವ ಉಂಟಾಗುತ್ತಿದೆ.

ಇತ್ತ ಸಣ್ಣ ಮೀನುಗಳನ್ನೂ ಕಬಳಿಸುವುದು ಅತ್ತ ದೊಡ್ಡ ಜಲಚರಗಳನ್ನೂ ಕಬಳಿಸುವುದರಿಂದಾಗಿ ಸಾಗರದಲ್ಲಿ  ಅಸಮತೋಲನತೆ ಉಂಟಾಗುತ್ತಿದೆ.ಸಮೃದ್ದ ಮತ್ತು ಆರೋಗ್ಯಕರ ಸಮುದ್ರಕ್ಕೆ ಎಷ್ಟು ಜಲಚರಗಳು ಬೇಕೋ ಅಷ್ಟು ಉಳಿದಿಲ್ಲ.

ಇದರಿಂದ ಪೈಟೋಪ್ಲಾಂಕ್ಟಾನ್ ಗಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಜಲಚರಗಳ ಜೈವಿಕ ಗೊಬ್ಬರ ಸಿಗುತ್ತಿಲ್ಲ.ಪೈಟೋಪ್ಲಾಂಕ್ಟಾನ್ ಗಳಿಂದ ಉತ್ಪತ್ತಿಯಾಗುವ ಆಕ್ಸಿಜನ್ ಪ್ರಮಾಣ ದಿನೇದಿನೇ ಕುಸಿಯತೊಡಗಿದೆ.ಈ ಜಲ ಪ್ರಳಯಕ್ಕೆ ಅರಣ್ಯನಾಶವೂ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ತನ್ನ ಕೊಡುಗೆ ಕೊಡುತ್ತಲೇ ಇದೆ.

ಇದರೊಂದಿಗೆ ವಾತಾವರಣದಲ್ಲಿ ಅತಿಹೆಚ್ಚು ಗ್ರೀನ್ಹೌಸ್ ಗ್ಯಾಸ್ ಗಳು ,ಕಾರ್ಬನ್ ಡೈಯಾಕ್ಸೈಡ್ ಸೇರುತ್ತಿವೆ . ಹೀಗಾಗಿ ಜಾಗತಿಕ ತಾಪಮಾನ ಪ್ರತಿವರ್ಷ ಏರುತ್ತಲೇ ಇದೆ. ನಮ್ಮ ಈ ಭೂಮಿಗೆ ಎರೆಡು ಶ್ವಾಸಕೋಶಗಳಿವೆ. ಒಂದು ದಟ್ಟವಾದ ಅರಣ್ಯಗಳು ಇನ್ನೊಂದು ಆರೋಗ್ಯಕರ ಸಮುದ್ರ . ಇದರಲ್ಲಿ ಒಂದಕ್ಕೆ ಹಾನಿಯಾದರೂ ಅದರ ಘೋರ ಪರಿಣಾಮ ಈ ಭೂಮಿಗೆ ತಪ್ಪಿದ್ದಲ್ಲ .

LEAVE A REPLY

Please enter your comment!
Please enter your name here