ಹವಾಮಾನ ವರದಿ: ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ

0

ಮಂಗಳವಾರ 17 ನೇ ಅಕ್ಟೋಬರ್ 2023 /25ನೇ ಆಶ್ವೀಜ 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈಋತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಸಾಮಾನ್ಯವಾಗಿತ್ತು ಹಾಗೂ ಉತ್ತರ ಒಳನಾಡಿನ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.

ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):

ಸಾಲಿಗ್ರಾಮ (ಮೈಸೂರು ಜಿಲ್ಲೆ) 9; ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ) 8.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):

ವಿರಾಜಪೇಟೆ (ಕೊಡಗು ಜಿಲ್ಲೆ) 6; ಮಂಗಳೂರು ವಿಮಾನ ನಿಲ್ದಾಣ 5; ಜಯಪುರ (ಚಿಕ್ಕಮಗಳೂರು ಜಿಲ್ಲೆ) 4; ಪಣಂಬೂರು, ಉಡುಪಿ, ಟಿ ನರಸೀಪುರ, ಹುಣಸೂರು (ಎರಡೂ ಮೈಸೂರು ಜಿಲ್ಲೆ) ತಲಾ 3; ಮಾಣಿ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ (ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆ), ಯಲ್ಲಾಪುರ, ಕದ್ರಾ, ಗೋಕರ್ಣ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ಸಿದ್ದಾಪುರ (ಉಡುಪಿ ಜಿಲ್ಲೆ), ಲೋಂಡಾ(ಬೆಳಗಾವಿ ಜಿಲ್ಲೆ), ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ), ಮೈಸೂರು ತಲಾ 2;. ಮೂಲ್ಕಿ, ಪುತ್ತೂರು (ಎರಡೂ ದಕ್ಷಿಣ ಕನ್ನಡ ಜಿಲ್ಲೆ) ಕಿರವತ್ತಿ (ಉತ್ತರ ಕನ್ನಡ ಜಿಲ್ಲೆ), ಕೋಟ, ಕೊಲ್ಲೂರು (ಎರಡೂ ಉಡುಪಿ ಜಿಲ್ಲೆ), ಎನ್ ಆರ್ ಪುರ, ಕಡೂರು, ತರೀಕೆರೆ, ಕಮ್ಮರಡಿ (ಎಲ್ಲವೂ ಚಿಕ್ಕಮಗಳೂರು ಜಿಲ್ಲೆ), ಹಾರಂಗಿ, ನಾಪೋಕ್ಲು (ಎರಡೂ ಕೊಡಗು ಜಿಲ್ಲೆ), ಅರಕಲಗೂಡು ಹಾಸನ, ಬೆಳ್ಳೂರು (ಮಂಡ್ಯ), ಕುಣಿಗಲ್ (ತುಮಕೂರು) ತಲಾ 1.
ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 35.2 ಡಿ.ಸೆ ಚಿ ಕಲಬುರ್ಗಿ ಯಲ್ಲಿ ದಾಖಲಾಗಿದೆ.  ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 18.0 ಡಿ.ಸೆ. ವಿಜಯಪುರ ನಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here