‘ಗೃಹ ತಪಸ್ವಿನಿ’ ಭೂಮಿ ಹುಣ್ಣಿಮೆ ಹಬ್ಬಕ್ಕೆ ಅಡುಗೆ ಮನೆಯನ್ನು ಸಿದ್ದಗೊಳಿಸುತಿರುವಳು.ಅಡವಿಯಿಂದ ತಂದ ನೂರೊಂದು ಕುಡಿಗಳನ್ನು ಹೆರೆಯುತಿರುವಳು.ಕಬ್ಬು,ಚೆಂಡು ಹೂ,ಸೌತೆ,ಹೀರೆಕಾಯಿ,ಬಾಳೆಯ ದಿಂಡಿನ ಪಚಿಡಿ ರೆಡಿಯಾಗಿದೆ.ಕೊಟ್ಟೆ ಕಡುಬು ಲೇಟಾಗಿ ತಯಾರಾಗಲಿದೆ.ಯಾವುದೇ ಕಾರಣಕ್ಕೂ ಬದನೆ ಕಾಯಿ,ಚೀನೀಕಾಯಿ, ಆಲುಗಡ್ಡೆಯಂತಹ ನಂಜಿನ ಪದಾರ್ಥಗಳು ಭೂಮಿ ಹುಣ್ಣಿಮೆ ಹಬ್ಬದಲ್ಲಿ ನಿಷಿದ್ದ.ಏಕೆಂದರೆ ಭೂಮಿ ತಾಯಿ ಇದೀಗ ತುಂಬಿದ ಬಸುರಿ.ಈಕೆಗೆ ಒಂಚೂರೂ ಕೂಡಾ ತೊಂದರೆಯಾಗಬಾರದು.
ನಂಜಿನ ಪದಾರರ್ಥಗಳನ್ನೊಳಗೊಂಡ ಅನ್ನವನ್ನು ಭೂ ತಾಯಿಯ ಒಡಲು ಸೇರಿದರೆ ಭತ್ತ ಚೆಟ್ಟಾಗುವುದು.ಗೃಹ ತಪಸ್ವಿನಿಯರು ನಿದ್ದೆ ಬಂತೆಂದು ಮಲಗಿದರೂ ಭತ್ತ ಚೆಟ್ಟಾಗುವುದಂತೆ.ದೀಪಾವಳಿ ಹಬ್ಬ ಮನೆಯ ಯಜಮಾನನ ಹಬ್ಬವಾದರೆ ಭೂಮಿ ಹುಣ್ಣಿಮೆ ಯಜಮಾನತಿಯ ಹಬ್ಬ.ನಾನು ಮಲಗುವೆ.ಬೆಳಿಗ್ಗೆ ಐದು ಗಂಟೆಗೆ ಎದ್ದು ದೊಂದಿಯೊಂದಿಗೆ ಗದ್ದೆಗೆ ಹೋಗುವೆ.ಜೊತೆಗೆ ಗೃಹ ತಪಸ್ವಿನಿ ಇರುತ್ತಾಳೆ.
ದೊಂದಿಯನ್ನು ಬೀಸುತ್ತಾ ಪ್ರಜ್ವಲಿಸುವ ಆ ಬೆಳಕಲ್ಲಿ ದಾರಿ ಮಾಡುತ್ತಾ ಹೋಗುವ ಖುಷಿ ಇದೆ.ಗದ್ದೆಯ ಅಂಚಿನ ಹುಲ್ಲುಗಳ ಮೇಲೆ ಬಿದ್ದ ಇಬ್ಬನಿಯ ಹನಿಗಳನ್ನು ಸರಿಸುತ್ತಾ ಹಿಂದಿನ ದಿನದ ಸಂಜೆಯೇ ಮಾಡಿಟ್ಟಿದ್ದ ತೋರಣದ ಮಂಟಪದ ಎದುರಲ್ಲಿ ಪೂಜೆ ಸಲ್ಲಿಸಬೇಕು.ಭತ್ತ ಅಥವಾ ಅಡಿಕೆಯ ಓಲಿಗಳಿಗೆ ಕಪ್ಪು ಬಳೆ ತೊಡಿಸಬೇಕು.ಭತ್ತದ ಓಲಿಗಳಿಗೆ ಬಂಗಾರದ ಸರ ಹಾಕಬೇಕು.ಎಡೆಯಲ್ಲಿರುವ ನೂರೊಂದು ಸಸ್ಯಗಳ ಕುಡಿಗಳನ್ನು ಒಳಗೊಂಡ ಅನ್ನವನ್ನು ತಳಿಯಬೇಕು.ಪ್ರತಿ ಗದ್ದೆ,ಗಣ್ಣ, ಹಾಳಿ,ಅಗೇಡಿ ಮತ್ತು ಅಡಿಕೆ ತೋಟಗಳಿಗೆ ಬೀರಬೇಕು.
‘ಅಚ್ಚಂಬಲಿ ಹಾಲಂಬಲಿ. ಬೇಲಿ ಮೇಲೆ ಇರುವ ಧಾರದ ಹೀರೇಕಾಯಿ
ಭೂಮಿ ಉಂಡು ಹೋಗು’ ಎಂದು ಹೇಳಬೇಕು