ಬಸವನಹುಳು ವೈವಿಧ್ಯತೆ  ಬಗ್ಗೆ ತಿಳಿದಿರಲಿ

0
Giant African snail on a human hand (against a bright blue background)
ಲೇಖಕರು: ಮೃತ್ಯುಂಜಯ ನಾರ

ಕೃಷಿ – ತೋಟಗಾರಿಕೆ ಭಾರಿ ಬಾ‍ಧೆ ನೀಡುವ ಕೀಟ – ಹುಳುಗಳಿವೆ. ಹುಳುಗಳ ಸಾಲಿನಲ್ಲಿ ಬಸನಹುಳು ಸಹ ಸೇರಿದೆ. ಇವುಗಳ ದಂಡು ದಾಳಿ ಇಟ್ಟರೆ ರಾತ್ರಿ ಕಳೆಯುವಷ್ಟರಲ್ಲಿ ಹಸಿರಾಗಿದ್ದ ತೋಟ ಬರಡಾಗಿರುತ್ತದೆ. ಆ ಪರಿಯ ತೊಂದರೆಯನ್ನು ಇವು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳ ಜೀವನಚಕ್ರ, ವೈವಿಧ್ಯತೆ ತಿಳಿದಿರುವುದು ಸೂಕ್ತ.
ಬಸವನ ಹುಳು. ಇವು ಗ್ಯಾಸ್ಟ್ರೋಪೊಡಾ ಕುಟುಂಬಕ್ಕೆ ಸೇರುವ ಮೃದ್ವಂಗಿಗಳು.(Gastropods)

1: ಭೂಮಿಯ ಮೇಲೆ ವಾಸಿಸುವ ಮೃದ್ವಂಗಿಗಳು ( Terrestrial/ Land snails)
2: ಸಿಹಿನೀರಿನ ಮೃದ್ವಂಗಿಗಳು ( Fresh water snails) ಮತ್ತು
3: ಸಮುದ್ರದಲ್ಲಿ ವಾಸಿಸುವ ಮೃದ್ವಂಗಿಗಳು ( Sea snails) ಗಳಿವೆ .

ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ವಾಸಿಸುವ ಮೃದ್ವಂಗಿಗಳಿಗೆ ಚಿಪ್ಪುಗಳಿರುತ್ತವೆ .ಈ ಚಿಪ್ಪುಗಳು ಸಮದ್ರಲ್ಲಿನ ಮೃದ್ವಂಗಿಗಳಿಗೆ ಭಕ್ಷಕ ಜೀವಿಗಳಿಂದ ರಕ್ಷಿಸಿಕೊಳ್ಳಲು ಸಹಾಯಕ. ಇವು ಭೂಮಿಯ ಮೇಲಿನ ಮೃದ್ವಂಗಿಗಳಿಗೆ ವಾತಾವರಣದಿಂದ ರಕ್ಷಿಸಿಕೊಂಡು ತೇವಭರಿತವಾಗಿರಲು ಸಹಾಯಕವಾಗುತ್ತವೆ .

ಭೂಮಿಯ ಮೇಲಿನ ಮೃದ್ವಂಗಿಗಳಿಗೆ ಶ್ವಾಸಕೋಶಗಳಿದ್ದರೇ ಸಮುದ್ರದ ಮೃದ್ವಂಗಿಗಳಿಗೆ ಕಿವಿರುಗಳಿರುತ್ತವೆ. ಭೂಮಿಯ ಮೇಲಿನ ಮೃದ್ವಂಗಿಗಳ ಮುಂಭಾಗದಲ್ಲಿ ಹೊರಚಾಚಿರುವ ಸೊಂಡಿಲಿನಂತ ಮುದುರಿಕೊಳ್ಳುವ ಅಂಗದಲ್ಲಿ ಕಣ್ಣುಗಳು ಇರುತ್ತವೆ. ಆದರೆ ಸಮುದ್ರದ ಮೃದ್ವಂಗಿಗಳಿಗೆ ಈ ಅಂಗ ಮುದುರಿಕೊಳ್ಳುವುದಿಲ್ಲ .

ಇದುವರೆಗೂ ನಾಲ್ಕು ಸಾವಿರಕ್ಕೂ ಹೆಚ್ಚಿನ ಪ್ರಭೇದದ ಮೃದ್ವಂಗಿಗಳನ್ನ ಗುರುತಿಸಲಾಗಿದೆ .ಬಸವನ ಹುಳು ಒಂದು ವರ್ಷದಲ್ಲಿ ಆರು ಸರ್ತಿ ಮೊಟ್ಟೆ ಇಡುತ್ತವೆ .ಮಿಲನದ ನಂತರ ಮೂರರಿಂದ ಆರು ದಿನಗಳಲ್ಲಿ ಸುಮಾರು 80 ಮೊಟ್ಟೆಗಳನ್ನ ಇಡುತ್ತವೆ .

ಮೊಟ್ಟೆ ಇಡುತ್ತಿರುವ ಬಸವನ ಹುಳು

ನೆಲದ ಮೇಲಿರುವ ಬಸವನ ಹುಳುಗಳ ತೇವಭರಿತ ಮಣ್ಣಿನಲ್ಲಿ ಎರಡರಿಂದ ನಾಲ್ಕು ಸೆಂಟಿಮೀಟರ್ ರಂದ್ರ ಕೊರೆದು ಮೊಟ್ಟೆ ಇಡುತ್ತವೆ.ಎರೆಡು ವಾರಗಳ ನಂತರ ಈ ಮೊಟ್ಟೆಗಳು ಮರಿಯಾಗಿ ಹೊರಬರುತ್ತವೆ . ಸಿಹಿನೀರು ಮತ್ತು ಸಮುದ್ರದಲ್ಲಿನ ಮೃದ್ವಂಗಿಗಳು ನೀರಿನಲ್ಲಿರುವ ಕಲ್ಲು ,ಸಸ್ಯಗಳ ಕಾಂಡ,ಎಲೆಗಳ ಹತ್ತಿರ ಮೊಟ್ಟೆ ಇಡುತ್ತವೆ .

Gastropoda ಕುಟುಂಬಕ್ಕೆ ಸೇರುವ ಈ ಮೃದ್ವಂಗಿಗಳನ್ನ ಸಾಮಾನ್ಯವಾಗಿ Snail (ಬಸವನ ಹುಳು ) ಎಂತಲೇ ಕರೆಯುತ್ತಾರೆ . ಇವುಗಳಲ್ಲಿ ಗೊಂಡೆಹುಳುಗಳು ಎಂತಲೂ ಇವೆ.ಇವು ನೆಲದಡಿಯಲ್ಲಿ ವಾಸಿಸುತ್ತ ಮರಗಿಡಗಳ ಕಾಂಡ ,ಬೇರು ಕೊರೆದು ತಿನ್ನುತ್ತವೆ .ಮಿಲನಕ್ಕಾಗಿ ಮಾತ್ರ ಭೂಮಿಯ ಮೇಲೆ ಬರುವ ಇವು ರೈತರ ಬೆಳೆಗಳಿಗೆ ಹಾನಿಯುಂಟುಮಾಡುತ್ತವೆ. ಗೊಂಡೆಹುಳುಗಳಿಗೆ ಚಿಪ್ಪುಗಳು ಇರುವುದಿಲ್ಲ.

LEAVE A REPLY

Please enter your comment!
Please enter your name here