ಪಾರಿವಾಳದ ಆರ್ಕಿಡ್ (A rare pigeon orchid flower) Peristeria elata. ಪನಾಮ ದೇಶದ ರಾಷ್ಟ್ರೀಯ ಪುಷ್ಪ. ಹೂವು ಅರಳಿದಾಗ ತುಂಬಾ ದೂರದ ವರೆಗೂ ಪರಿಮಳ. ಹೂವಿನ ಒಳ ರಚನೆ ಪಾರಿವಾಳ ರೆಕ್ಕೆ ಬಿಚ್ಚಿ ಹಾರುವಂತೆ ಕಾಣು ವುದರಿಂದ dove orchid ಎಂಬ ಹೆಸರು.
ಗಿಡದ ಬುಡದಲ್ಲಿ ದೊಡ್ಡ ಗಾತ್ರದ ಹಸಿರು ಗಡ್ಡೆ ಗಳು ಇರುತ್ತವೆ. ನನಗೆ ಈ ಗಿಡವನ್ನು ರಾಜೇಶ್ವರಿ ತೇಜಸ್ವಿ ಕೊಟ್ಟಿದ್ದರು. ಎಲೆ ಗುಡಿಗೆ ತೋಟದ ಕೆ.ಆರ್. ಸೀತಾ ಅವರು ಒಂದು ಗಿಡ ಕೊಟ್ಟಿದ್ದರು. ಈಗ ಹೂವರ ಳಿ ಪರಿಮಳ ಪಸರಿಸಿದಾಗ ಅವರಿಬ್ಬರ ನೆನಪೂ ಬರುತ್ತದೆ. ಜುಲೈ ನಿಂದಾ ಅಕ್ಟೋಬರ್ ವರೆಗೂ ಹೂವಿನ ಕಾಲ. ಹೂವಿನ ಬಗ್ಗೆ ಕೆಲವರು ಕುತೂಹಲ ವ್ಯಕ್ತ ಪಡಿಸಿದ್ದರಿಂದ ವಿವರ ನೀಡಿದ್ದೇನೆ.
ಇಪ್ಪತೈದು ವರ್ಷಗಳ ಹಿಂದೆ ತಂದು ನೆಟ್ಟ ಗಿಡ ಈಗ ಹತ್ತು ಪಾಟ್ ಗಳಲ್ಲಿದೆ. ರಾಜೇಶ್ವರಿ ಅವರ ಮನೆಯ ಹೂದೋಟದಲ್ಲಿ ಹತ್ತು ಹನ್ನೆರಡು ಗಿದಗಳಿದ್ದವು..ಒಮ್ಮೆ ಅವರ ಬಂಧು ಮತ್ತು ನನ್ನ ಪರಿಚಿತ ಮಹಿಳೆಯೊಬ್ಬರು ಗಿಡ ಕೇಳಿದಾಗ ಅವರು ಅದನ್ನು ಯಾರಿಗೂ ಕೊಡಲ್ಲ ಅಂದರು ಅಂತ ಸ್ವಲ್ಪ ಕೋಪ ಮಾಡಿಕೊಂಡಿದ್ದರು. ಅಪರೂಪದ ಗಿಡ ಗಳನ್ನು ಎಲ್ಲಿಂದಲೋ ತಂದು ಸಾಕಿದವರಿಗೆ ಅದನ್ನು ನೋಡಿದವರೆಲ್ಲ ಕೇಳಿದಾಗ ಇರಿಸು ಮುರಿಸು ಆಗುತ್ತದೆ.
ಹಳದಿ ಸ್ಪತೋಗ್ಲಟಿಸ್ ಆರ್ಕಿಡ್ ಗಾಗಿ ಹದಿನೈದು ವರ್ಷಗಳ ಹಿಂದೆ ಬೆಂಗಳೂರಿನ ಲಾಲ್ ಬಾಗ್ ಸಿದ್ಧಾಪುರ ದ ಹತ್ತಾರು ನರ್ಸರಿ ಗಳನ್ನ ಹುಡುಕಿ ಕೊನೆಗೆ ಕೃಷ್ನೆಂದ್ರ ದಲ್ಲಿ ಸಿಕ್ಕಿತು..ಈಗ ಅದು ನಾಲ್ಕಾರು ಪಾಟ್ ಗಳಲ್ಲಿ ಇದೆ. ಹೂವನ್ನು ನೋಡಿದವರು ಇದನ್ನು ಒಂದು ಗಿಡ ಕೊಡಿ ಅಂತ ಕೇಳುತ್ತಾರೆ. ಈ ಗಿಡಗಳು ಪೂರ್ಣ ಬಿಸಿಲಿನಲ್ಲಿ ಬರುವುದಿಲ್ಲ. ನೆರಳು ಬೇಕು. ನಾನು ತುಂಬಾ ಜನರಿಗೆ ಅಶೋಕ ಗಿಡಗಳನ್ನು ಕೊಟ್ಟೆ ಎರಡು ಮೂರು ಜನ ಬಿಟ್ಟರೆ ಉಳಿದವರು ಸಾಯಿಸಿದರು. ಇದೆಲ್ಲ ಸಸ್ಯ. ಪುರಾಣ.