ಟೊಮ್ಯಾಟೋ ಸಮಗ್ರ ರೋಗ ನಿರ್ವಹಣೆ

0

ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವ ಜನಪ್ರಿಯ ತರಕಾರಿ ಬೆಳೆ. ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದು. ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ರಸಸಾರ 6 ರಿಂದ 7 ಇದ್ದಲ್ಲಿ ಬೆಳೆಗೆ ಸೂಕ್ತ.  ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು. ಇತ್ತೀಚಿನ ದಿನಗಳಲ್ಲಿ ಉತ್ತಮ ಇಳುವರಿ ಕೊಡಬಲ್ಲ ತಳಿಗಳು ಲಭ್ಯವಿವೆ.  ಹೆಕ್ಟರ್‌ಗೆ 100 ರಿಂದ 250 ಗ್ರಾಂ ಬಿತ್ತನೆ ಬೀಜ ಅವಶ್ಯಕತೆ ಇರುತ್ತದೆ.

ಸಸಿಮಡಿ ತಯಾರಿಕೆ:

ಸಸಿಮಡಿ ತಯಾರಿಕೆ ವೇಳೆ 3 ರಿಂದ 4 ಕೊಟ್ಟಿಗೆ ಗೊಬ್ಬರ ಹಾಗೂ 2 ಕಿಲೋ ಗ್ರಾಂ ಕ್ಯಾಲ್ಸಿಯಂ ಮ್ಯಗ್ನಿಷಿಯಮ್ ಗಂಧಕವುಳ್ಳ ಗೊಬ್ಬರ ಪ್ರತಿ ಮಡಿಗಳಿಗೆ ಕೊಟ್ಟಲ್ಲಿ ಮಣ್ಣಿನ ಫಲವತ್ತತೆ ಉತ್ತಮಗೊಂಡು ಟ್ರೈಕೋಡರ್ಮಾ ಶಿಲೀಂಧ್ರ ನಾಶಕದಿಂದ ಬೀಜೋಪಚರಿಸಿದ ಬೀಜಗಳ ಬಿತ್ತನೆ ಮಾಡಿ ತೆಳುವಾಗಿ ಮಣ್ಣಿನಿಂದ ಮುಚ್ಚಬೇಕು. ಮೊಳಕೆಯೊಡೆಯದ  4 ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

 ನಾಟಿ ಮಾಡಲು ಸಿದ್ಧಪಡಿಸಿದ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಭೂಮಿ ಹದಮಾಡಿ, ನಿಗದಿತ ಪ್ರಮಾಣದ ಕಾಂಪೋಸ್ಟ್ ಕೊಟ್ಟಿಗೆ ಗೊಬ್ಬರ ಬಳಸಿ ಭೂಮಿ ಸಿದ್ಧತೆ ಮಾಡಬೇಕು. ಶಿಫಾರಸ್ಸು ಮಾಡಿದ ಶೇ. 50 ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ(50 ಕೆ.ಜಿ), ಪೋಟ್ಯಾಷ್(30 ಕೆ.ಜಿ) ಹಾಗೂ ಸಮೃದ್ಧಿ ಅಥವಾ ಸೆಟ್‌ರೈಟ್ ಕೆಂಪು ಮಣ್ಣಿನಲ್ಲಿ ಪ್ರದೇಶಗಳಿಗೆ ಬಳಸಿದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು.

ಮುಖ್ಯ ರೋಗಗಳು:

ಎಲೆ ಚುಕ್ಕೆ ರೋಗ ಹಾಗೂ ಅಂಗಮಾರಿ:

ಅಲ್ಟರ್‌ನೇರಿಯ, ಸೆಪ್ಟೋರಿಯ ಶಿಲೀಂಧ್ರಗಳು ಈ ರೋಗವನ್ನು ಪೋಟಾಷ್ ಕೊರತೆ ಇರುವ ಭೂಮಿಗಳಲ್ಲಿ ಯಥೇಚ್ಛವಾಗಿ ಹರಡುತ್ತವೆ. ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಪರಿವರ್ತನೆಗೊಂಡು ಎಲೆ ಅಂಗಮಾರಿ ರೋಗ ಸೃಷ್ಠಿಯಾಗಿ ಎಲೆಗಳು ಒಣಗುತ್ತವೆ. ಮ್ಯಾಂಕೋಜಿಬ್ 2 ಗ್ರಾಂ. ಹಾಗೂ ಬಯೋ 20 ಅಥವಾ ಬಯೋವಿಟಾ 50 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಲ್ಲಿ ರೋಗ ನಿರ್ವಹಣೆ ಸಾಧ್ಯ.

ಎಲೆ ಮುದುಡು ರೋಗ:

ಗಿಡಗಳ ಎಲೆಗಳು ಪೊದೆಯಾಕಾರಗೊಂಡು ಎಲೆಯ ಬೆಳವಣಿಗೆ ಕುಂಠಿತಗೊAಡು, ಎಲೆ ಗಾತ್ರ ಕಡಿಮೆಯಾಗಿ ಕಾಯಿ ಕಟ್ಟುವಿಕೆ ಕ್ಷೀಣಿಸುವುದು ಬೇಸಿಗೆ ಕಾಲದಲ್ಲಿ ರಸ ಹೀರುವ ಕೀಟಗಳಲ್ಲಿ ಉದ್ಭವಗೊಂಡ ಮಾರಕ ವೈರಸ್ ರೋಗವು ಗಿಡದಿಂದ ಗಿಡಗಳಿಗೆ ಹರಡುತ್ತದೆ. ಭೂಮಿಯಲ್ಲಿ ಜಿಂಕ್ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಹುಳಿ ಮಜ್ಜಿಗೆ ಅಥವಾ ಗೋಮೂತ್ರ 750 ಮೀ.ಲೀ ಪ್ರತಿ 15 ಲೀಟರ್ ಟ್ಯಾಂಕ್‌ಗೆ ಬೆರೆಸಿ ಸಿಂಪಡಿಸಬೇಕು. ಅತಿಯಾದ ಮುದುಡು ಪೀಡಿತ ಗಿಡವನ್ನು ಹೊಲದಿಂದ ತೆಗೆದು ನಾಶಪಡಿಸಬೇಕು.

ಸೊರಗು ರೋಗ:

 ಈ ರೋಗದಲ್ಲಿ ಎರಡು ವಿಧಗಳಿವೆ ಪ್ಯಸೇರಿಯಂ ಸೊರಗು ರೋಗ ಹಾಗೂ ದುಂಡಾಣು ಸೊರಗು ರೋಗ. ಶಿಲೀಂಧ್ರ ಸೊರಗು ತುತ್ತಾದ ಗಿಡಗಳು ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಕೆಳಗೆ ಬಾಗುತ್ತವೆ ನಂತರ ಗಿಡದ ಎಲೆಗಳು ಪೂರ್ತಿ ಒಣಗುತ್ತವೆ. ರೋಗ ಪೀಡಿತ ಗಿಡಗಳನ್ನು ನಾಶಪಡಿಸಬೇಕು. ಸೊರಗು ಪೀಡಿತ ಹಾಗೂ ಸುತ್ತಲಿರುವ ಆರೋಗ್ಯ ಗಿಡಗಳಿಗೆ ಸಿಓಸಿ (ತಾಮ್ರದ ಅಕ್ಸಿಕ್ಲೋರೈಡ್) 0.3 ಗ್ರಾಂ. ಅಥವಾ ಕಾರ್ಬೇನಡೆಂಜಿಮ್ 0.2% ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ನೆನೆಯುವಂತೆ ಸುರಿಯಬೇಕು.

ಕೀಟಗಳು:

ಎಲೆ ತಿನ್ನುವ ಕೀಟದ ಮೊದಲ ಹಂತದ ಮರಿ ಹುಳುಗಳು ಎಲೆಯ ಹಸಿರು ಪದಾರ್ಥವನ್ನು ಕೊರೆದು ತಿನ್ನುತ್ತವೆ. ಡೈಮೀಥೆಯೇಟ್ 1.5 ಮಿ.ಲೀ ಅಥವಾ ಫಸ್ಪೋಮೀಡಾನ್ 0.5 ಮೀ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿಬೇಕು.

ಹಣ್ಣು ಕೊರೆಯುವ ಹುಳ:

 ಮರಿ ಹುಳುಗಳು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ನಂತರ ಹಣ್ಣು ಕೊಳೆಯಲು ಆರಂಭಿಸುತ್ತದೆ. ಕಾರ್ಬರಿಲ್ 3 ಗ್ರಾಂ. ಅಥವಾ ಬೇವಿನ ಎಣ್ಣೆ 5 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಪೋಷಕಾಂಶ ನ್ಯೂನತೆಗಳು:

ಭೂಮಿಯಲ್ಲಿ ಸುಣ್ಣದ ಅಂಶ ಕಡಿಮೆಯಾದಾಗ ಸಸ್ಯಗಳಲ್ಲಿ ಇಳುವರಿ ಕೊಡಬಲ್ಲ ಕಾಯಿ ಹಣ್ಣುಗಳು ಕ್ಯಾಲ್ಸಿಯಂ ಕೊರತೆಯಿಂದ ಕಪ್ಪು ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ಯಾಲ್ಸಿಯಂ ಯುಕ್ತ ಪೋಷಕಾಶಗಳಾದ ಸುಣ್ಣದ ಪುಡಿ2.0 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿ ಕಟ್ಟುವ ಸಂದರ್ಭದಲ್ಲಿ ಸಿಂಪಡಿಸಿದಲ್ಲಿ ಈ ನ್ಯೂನತೆ ನಿವಾರಿಸಬಹುದು.

ಲೇಖಕರು: ಗಂಗಾಧರ. ಎಂ. ಅರ್ಕಾಚಾರಿ ಎಂ.ಎಸ್ಸಿ. (ಕೃಷಿ) ಸಸ್ಯ ರೋಗ ಶಾಸ್ತçಜ್ಞ, ಶ್ರೀ ಸಂಯೋಜಕ ಗೋ ಕೃಷಿ ಸಂಶೋಧನಾ ಉಪಖಂಡ ಶ್ರೀ ರಾಮಚಂದ್ರಾಪುರ ಮಠ, ಡಾ|| ಆಶಾ ಕೆ.ಎಂ. ಸಹಾಯಕ ಪ್ರಾಧ್ಯಾಪಕಿ ತೋಟಗಾರಿಕೆ ಮಹಾ ವಿದ್ಯಾಲಯ ಹಿರಿಯೂರು, ಚಂದನಾ ಹೆಚ್.ಎಸ್ ಎಂ.ಎಸ್ಸಿ (ಕೃಷಿ) ಸಸ್ಯ ತಳಿ ಅಭಿವೃದ್ಧಿ ಮತ್ತು ಅನುವಂಶಿಕ ವಿಭಾಗ, ಭಾರತೀಯ ಕೃಷಿ ಸಂಶೋಧನಾ ಕೇಂದ್ರ ನವದೆಹಲಿ.

LEAVE A REPLY

Please enter your comment!
Please enter your name here