ಜೈವಿಕ ವೈವಿಧ್ಯ ಕಾಪಾಡುವಲ್ಲಿ ರೈತ ಹಾಗೂ ಸರಕಾರದ ಪಾತ್ರ

0
ಲೇಖಕರು: ಡಾ. ಶೋಭಾರಾಣಿ

ಕುಲಾಂತರಿ ತಳಿಗಳ ಅಭಿವೃಧ್ಧಿಯಲ್ಲಿ ದೊಡ್ಡಣ್ಣನೆನಿಸಿಕೊಂಡಿರುವ ಅಮೇರಿಕಾ ದೇಶ, ಸಾವಯವ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಸಾಲಿನಲ್ಲಿ ಮೊದಲಿಗ. ಕೆನಡ, ಆಸ್ಟ್ರೇಲಿಯಾ, ಇಟಲಿ, ಪೋಲೆಂಡ್ ದೇಶಗಳು ಸಾವಯವ ತರಕಾರಿಗಳು, ಹಣ್ಣುಗಳು, ಆಹಾರ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿವೆ,

ಇದಕ್ಕೆ ಮುಖ್ಯ ಕಾರಣ ಅವುಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಅ್ಯಂಟಿ ಆ್ಯಕ್ಷಿಡೆಂಟ್ ಗಳಿದ್ದು ಆರೋಗ್ಯಕ್ಕೆ ಪೂರಕವಾಗಿರುವುದು. ಭಾರತದಲ್ಲಿ ಕಡಿಮೆ ಕೃಷಿ ಪ್ರದೇಶದಲ್ಲಿ ಮಾತ್ರ ಸಾವಯವ ಕೃಷಿಯನ್ನು ಕಾಣಬಹುದು. ರ‍್ನಾಟಕದಲ್ಲಿ ಸಾವಯವ ಕೃಷಿ ಅಭಿವದ್ಧಿ ನಡೆದಿದೆ.

 ಗ್ರಾಮೀಣ ಉದ್ಯೋಗಾವಕಾಶಗಳು, ರೈತ ಸ್ವಾವಲಂಬನೆ, ಪರಿಸರ, ಮಾನವ ಹಾಗೂ ಪ್ರಾಣಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿಯಾಮಾವಳಿಗಳನ್ನು ರೂಪಿಸಲಾಗಿದೆ..

ಸರಕಾರ ಹಾಗೂ ರೈತರ ಹೊಣೆಗಾರಿಕೆಗಳು

ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ಸಮನ್ವಯ ಬಳಕೆ ಮತ್ತು ಪರಿಸರಕ್ಕೆ ಧಕ್ಕೆ ತರದಂತೆ ಪೀಡೆಗಳ ಸಮಗ್ರ ನಿರ್ವಹಣೆ ಕುರಿತು ರೈತರಲ್ಲಿ ಅರಿವು ಮೂಡಿಸುವುದು.

ಸಾವಯವ ಕೃಷಿಗೆ ಉತ್ತೇಜನದೊಂದಿಗೆ ಹಣಕಾಸಿನ ನೆರವು ನೀಡುವುದು. ಸರಕಾರವು ಸಂಬಂಧಿಸಿದ ಇಲಾಖೆಗಳ ಮುಖಾಂತರ, ರ‍್ಕಾರೇತರ ಸಂಸ್ಥೆಗಳ ಮೂಲಕ ಸಾವಯವ ಗೊಬ್ಬರಗಳನ್ನು ಉತ್ಪಾದಿಸಿ ಸೂಕ್ತ ಸಮಯದಲ್ಲಿ ಸೂಕ್ತ ಬೆಲೆಯಲ್ಲಿ ರೈತರಿಗೆ ತಲುಪಿಸುವುದು.

ಈಗಾಗಲೇ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳೊಂದಿಗೆ ರೈತರಿಗೆ ತರಬೇತಿಗಳನ್ನು ಆಯೋಜಿಸುವುದು ಹಾಗೂ ಪ್ರಗತಿಪರ ರೈತರ ಯಶೋಗಾಥೆಗಳನ್ನು ಮುದ್ರಿತ, ಶ್ರವಣ, ದೃಶ್ಯ, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದು.

ರೈತ, ಸಮುದಾಯಗಳ ಮೂಲಕ ಉಪಯುಕ್ತ ತಳಿಗಳ ಸಂರಕ್ಷಣೆ, ಗುಣಮಟ್ಟದ ಬೀಜಗಳು, ತಾಂತ್ರಿಕತೆಗಳ ಕುರಿತು ಹೆಚ್ಚಿನ ಸಂಶೊಧನೆಗಳಿಗೆ ಒತ್ತು ನೀಡುವುದು. ಅಂತಿಮ ಬಳಕೆದಾರರಿಗೆ ಸುಲಭವಾಗಿ ತಲುಪವಂತೆ ಮಾಡುವುದು

ಸಾವಯವ ಕೃಷಿಕರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವುದು. ದೇಶದ ಕೃಷಿ ಭವಿಷ್ಯವನ್ನು ಹಾಗೂ ಮುಂದಿನ ಪೀಳಿಗೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರೈತ ಸಾವಯವ ಕೃಷಿಗೆ ಮುಂದಾಗಬೇಕಿದೆ.

ಸಾವಯವ ಕೃಷಿ ನೋಂದಣಿ: ತಮ್ಮ ಸ್ವಂತಕ್ಕೆ ಸಾವಯವ ಬೇಸಾಯದ ಮೂಲಕ ಬೆಳೆ ಬೆಳೆದುಕೊಳ್ಳುವ ರೈತರನ್ನು ಹೊರತುಪಡಿಸಿ, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಬಯಸುವ ರೈತರು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಬೆಳೆದ ಫಸಲನ್ನು ಖಾತರಿಗೊಳಿಸಿ, ಪ್ರಮಾಣೀಕರಿಸಲು ನಿಗದಿತ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳದೇ ಬೆಳೆದ ಫಸಲನ್ನು ಮಾರಾಟ ಮಾಡಲು, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಲು ಸಾಧ್ಯವಿಲ್ಲ.

ಸಾವಯವ ಕೃಷಿ ಮಾಡುವ ರೈತರು ತಮ್ಮ ಹಿಂದಿನ ಬೇಸಾಯ ಕ್ರಮಗಳಿಂದ ಪರಿವರ್ತಿತರಾಗಿ ಸಾವಯವ ಕೃಷಿಕರಾಗಲು 2-3 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ಬೆಳೆದ ಬೆಳೆ ಸಾವಯವ ಫಸಲು ಆಗುವುದಿಲ್ಲ.

ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂರ‍್ಕ ಕೇಂದ್ರಗಳನ್ನು, ತಾಲ್ಲೂಕು ಕೃಷಿ ಕಛೇರಿಗಳನ್ನು ಸಂರ‍್ಕಿಸಬಹುದು.

LEAVE A REPLY

Please enter your comment!
Please enter your name here