ನಾಳೆ ಪ್ರತಿಷ್ಠಿತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಘಟಿಕೋತ್ಸವ

0

ಬೆಂಗಳೂರು: ಸೆಪ್ಟೆಂಬರ್ 08 ರಾಷ್ಟ್ರದ ಪ್ರತಿಷ್ಠಿತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ  56ನೇ ಘಟಿಕೋತ್ಸವ-ಸೆಪ್ಟೆಂಬರ್ 09ರಂದು ನಿಗದಿಯಾಗಿದೆ. ಈ ಕುರಿತ ವಿವರವನ್ನು ಮುಂದೆ ನೀಡಲಾಗಿದೆ.

ಗಾಂಧಿ ಕೃಷಿ ವಿಶ್ವವಿದ್ಯಾಲಯ (ಜಿ.ಕೆ.ವಿ.ಕೆ.) ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟಿಯ ಸಭಾಂಗಣದಲ್ಲಿ ಬೆಳಗ್ಗೆ10 ಘಂಟೆಗೆ ಜಿಾಯೋಜಿಸಲಾಗಿದೆ. ಇಂದು ಕೃಷಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ನಾಯಕ್ ಭವನದಲ್ಲಿ ಆಯೋಜಿತವಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ವಿವರಗಳನ್ನು ನೀಡಿದರು.

ಚಿತ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಕುಲ ಸಚಿವ ಡಾ. ಬಸವೇಗೌಡ, ಶಿಕ್ಷಣ ನಿರ್ದೇಶಕ ಡಾ. ಕೆ.ಸಿ. ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ಕೆ. ನಾರಾಯಣಗೌಡ, ಹಿರಿಯ ವಾರ್ತಾತಜ್ಞ ಡಾ.ಕೆ. ಶಿವರಾಮು ಅವರುಗಳನ್ನು ಕಾಣಬಹುದು

1144 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಶೈಕ್ಷಣಿಕ ವರ್ಷ 2020-21 ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 56ನೇ ಘಟಿಕೋತ್ಸವದಲ್ಲಿ ಒಟ್ಟಾರೆ 1144 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ, 751 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 304 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 89 ವಿದ್ಯಾರ್ಥಿಗಳು ಡಾಕ್ಟೊರಲ್ ಪದವಿಗಳನ್ನು ಪಡೆಯಲಿದ್ದಾರೆ.

ಇದೇ ಸಮಾರಂಭದಲ್ಲಿ, ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 07 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 15 ಚಿನ್ನದ ಪದಕಗಳನ್ನು, 11 ದಾನಿಗಳ ಚಿನ್ನದ ಪದಕಗಳು ಹಾಗೂ 04 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಮಾಸ್ಟರ್ ಪದವಿಯಲ್ಲಿ ಒಟ್ಟು 72 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 23 ವಿದ್ಯಾರ್ಥಿನಿಯರು ಹಾಗೂ 07 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 22 ಚಿನ್ನದ ಪದಕಗಳು ಹಾಗೂ 05 ಆವರಣದ ಚಿನ್ನದ ಪದಕಗಳನ್ನು, 34 ದಾನಿಗಳ ಚಿನ್ನದ ಪದಕಗಳು ಹಾಗೂ 11 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊAಡಿರುತ್ತಾರೆ.

ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 54 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ., ಅದರಲ್ಲಿ 11 ವಿದ್ಯಾರ್ಥಿನಿಯರು ಹಾಗೂ 04 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 03 ಆವರಣದ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ, 36 ದಾನಿಗಳ ಚಿನ್ನದ ಪದಕಗಳು ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

56ನೇ ಘಟಿಕೋತ್ಸವ ಸಮಾರಂಭದಲ್ಲಿ 156 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ.  ಅದರಲ್ಲಿ 47 ವಿಧ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯದ 41 ಚಿನ್ನದ ಪದಕ, 68 ದಾನಿಗಳ ಚಿನ್ನದ ಪದಕ ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಅದರಂತೆ 18 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 11 ಚಿನ್ನದ ಪದಕ, 13 ದಾನಿಗಳ ಚಿನ್ನದ ಪದಕ ಹಾಗೂ 04 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಒಟ್ಟು 65 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 52 ಚಿನ್ನದ ಪದಕಗಳನ್ನು, 81 ದಾನಿಗಳ ಚಿನ್ನದ ಪದಕಗಳನ್ನು (26+61+46=133) ಹಾಗೂ 23 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು

2020-21ರ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಾಧನೆಯ ಮುಖ್ಯಾಂಶಗಳು

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಸೇರಿದ ಒಟ್ಟು 05 ಬೋಧನಾ ಆವರಣಗಳಲ್ಲಿ (ಬೆಂಗಳೂರು, ಮಂಡ್ಯ, ಹಾಸನ, ಚಿಂತಾಮಣಿ ಮತ್ತು ಚಾಮರಾಜನಗರ) 06 ಸ್ನಾತಕ ಪದವಿ ಕಾರ್ಯಕ್ರಮಗಳನ್ನು, 24 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 16 ವಿಷಯಗಳಲ್ಲಿ ಡಾಕ್ಟೋರಲ್ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

2021-22ನೇ ಸಾಲಿನಲ್ಲಿ ಒಟ್ಟು 918 ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಪ್ರವೇಶಾತಿ ಪಡೆದಿರುತ್ತಾರೆ. ಅದರಲ್ಲಿ 66 ವಿದ್ಯಾರ್ಥಿಗಳು ಐಸಿಎಆರ್, 58 ವಿದ್ಯಾರ್ಥಿಗಳು ಎನ್‌ಆರ್ ಐ ನಿಂದ ಮತ್ತು 01 ವಿದೇಶಿ ವಿದ್ಯಾರ್ಥಿ.

ಸ್ನಾತಕೋತ್ತರ ಪದವಿಗೆ ಒಟ್ಟು 337 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುತ್ತಾರೆ. ಅದರಲ್ಲಿ, 72 ವಿದ್ಯಾರ್ಥಿಗಳು ಐಸಿಎಆರ್/ಜೆಎನ್‌ಯು, 15 ವಿದ್ಯಾರ್ಥಿಗಳು ಎನ್‌ಆರ್‌ಐ ಮತ್ತು 01 ವಿದೇಶಿ ವಿದ್ಯಾರ್ಥಿ.

ಡಾಕ್ಟೋರಲ್ ಪದವಿಗೆ ಒಟ್ಟು 117 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುತ್ತಾರೆ. ಅದರಲ್ಲಿ, 19 ವಿದ್ಯಾರ್ಥಿಗಳು ಐಸಿಎಆರ್, 01 ವಿದ್ಯಾರ್ಥಿ ಎನ್‌ಆರ್ ಐ ಮತ್ತು 03 ವಿದೇಶಿ ವಿದ್ಯಾರ್ಥಿಗಳು.

ಇದಲ್ಲದೆ, 2021-22ರ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 49 ವಿದ್ಯಾರ್ಥಿಗಳು ಮಂಡ್ಯ ಆವರಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ (ಕೃಷಿ) ಮತ್ತು 07 ವಿದ್ಯಾರ್ಥಿಗಳು ಚಿಂತಾಮಣಿ ಆವರಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ (ರೇಷ್ಮೆಕೃಷಿ) ಕಾರ್ಯಕ್ರಮದಡಿಯಲ್ಲಿ ಸೇರ್ಪಡೆಯಾಗಿದ್ದಾರೆ.

 2021-22ನೇ ಸಾಲಿನಿಂದ ಕೃಷಿ ಮಹಾವಿದ್ಯಾಲಯ, ಮಂಡ್ಯದಲ್ಲಿ ಡಾಕ್ಟೋರಲ್ ಪದವಿಯನ್ನು 03 (ಮಣ್ಣು ವಿಜ್ಞಾನ, ಬೇಸಾಯಶಾಸ್ತ್ರ, ಸಸ್ಯ ರೋಗಶಾಸ್ತç) ವಿಷಯಗಳಲ್ಲಿ ಹೊಸದಾಗಿ ಪ್ರಾರಂಭಿಸಲಾಗಿದೆ.

ವಿದ್ಯಾರ್ಥಿ ವೇತನಗಳು

 ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಸ್ನಾತಕ ಪದವಿ ಕಾರ್ಯಕ್ರಮಗಳಡಿಯಲ್ಲಿ ಒಟ್ಟು -80 ವಿದ್ಯಾರ್ಥಿಗಳಿಗೆ ಮೆರಿಟ್ ವಿದ್ಯಾರ್ಥಿ ವೇತನ, 444 ವಿದ್ಯಾರ್ಥಿಗಳಿಗೆ ಸಾಮಾನ್ಯ ಅರ್ಹತಾ ವಿದ್ಯಾರ್ಥಿವೇತನಗಳನ್ನು ಹಾಗೂ 09 ವಿದ್ಯಾರ್ಥಿಗಳಿಗೆ ದಾನಿಗಳ ವಿದ್ಯಾರ್ಥಿವೇತನಗಳನ್ನು ನೀಡಿದೆ.

 ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 156 ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾನಿಲಯದ ಸ್ಥಾನಿಕ ಅರ್ಹತಾ ವಿದ್ಯಾರ್ಥಿವೇತನಗಳನ್ನು ಹಾಗೂ 06 ವಿದ್ಯಾರ್ಥಿಗಳಿಗೆ ದಾನಿಗಳು ಕೊಡುವ ಶಿಷ್ಯವೇತನಗಳನ್ನು ನೀಡಿದೆ.

ಅದೇರೀತಿ ಮಂಡ್ಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಒಟ್ಟು 10 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಸ್ಥಾನಿಕ ಅರ್ಹತಾ ವಿದ್ಯಾರ್ಥಿವೇತನವನ್ನು ನೀಡಲಾಗಿದೆ.

ಜಿ.ಕೆ.ವಿ.ಕೆ. ಆವರಣದಲ್ಲಿ ಒಟ್ಟು 66 ಪಿಎಚ್.ಡಿ. ಪದವಿ ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾನಿಲಯದ ಸ್ಥಾನಿಕ ಅರ್ಹತಾ ವಿದ್ಯಾರ್ಥಿವೇತನವನ್ನು ನೀಡಲಾಗಿದೆ.

 ಪ್ರಸ್ತುತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಾಗೂ ಇತರ ಸಹಯೋಗ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 38 ಶಿಕ್ಷಕರು/ವಿಜ್ಞಾನಿಗಳನ್ನು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಶಿಕ್ಷಕರೆಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here