ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

0

ಶನಿವಾರ, 18 ನೇ  ಮಾರ್ಚ್ 2023 / 27 ನೇ ಫಾಲ್ಗುಣ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.   ಕರಾವಳಿಯಲ್ಲಿ ಒಣಹವೆ ಇತ್ತು.

ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ):  ಬೀದರ್, ನಿರ್ಣಾ (ಬೀದರ್ ಜಿಲ್ಲೆ ) ತಲಾ 7 ಸೆಂ.ಮೀ. ಇತರೆ ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಶಹಪುರ (ಯಾದಗಿರಿ ಜಿಲ್ಲೆ ) 6; ನಿಟ್ಟೂರು (ಬೀದರ್ ಜಿಲ್ಲೆ ) 5, ಮನ್ನಾಲಿ, ಮಂಠಾಳ, ಸಂತಪುರ, ಜನವಾಡ, ಹುಮನಾಬಾದ್ (ಎಲ್ಲಾ ಬೀದರ್ ಜಿಲ್ಲೆ ), ಕಮಲಾಪುರ (ಕಲಬುರ್ಗಿ ಜಿಲ್ಲೆ ) ತಲಾ 3; ಮುಡಬಿ (ಬೀದರ್ ಜಿಲ್ಲೆ ), ಕೋಲಾರ, ಮಾಲೂರು (ಕೋಲಾರ ಜಿಲ್ಲೆ ) ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ , ಎಂಪ್ರಿ (ಬೆಂಗಳೂರು ನಗರ ಜಿಲ್ಲೆ ) ತಲಾ 2; ರಾಜೇಶ್ವರ್, ಹಲಬರ್ಗಾ (ಎರಡೂ ಬೀದರ್ ಜಿಲ್ಲೆ ), ಕಲಬುರ್ಗಿ ಮುಧೋಳೆ, ಅಡಕಿ, , ಮಹಾಗೋನ್, ಕೋಡ್ಲಾ, ಗುಂಡಗುರ್ತಿ (ಎಲ್ಲಾ ಕಲಬುರ್ಗಿ ಜಿಲ್ಲೆ ) ತಾಳಿಕೋಟೆ (ವಿಜಯಪುರ ಜಿಲ್ಲೆ ) , ಗೋಪಾಲ ನಗರ, ಉತ್ತರಹಳ್ಳಿ (ಬೆಂಗಳೂರು ನಗರ ಜಿಲ್ಲೆ ), ಹೊಸಕೋಟೆ(ಬೆಂಗಳೂರು ಗ್ರಾಮಾಂತರ  ಜಿಲ್ಲೆ ),  ಗೌರಿಬಿದನೂರು (ಚಿಕ್ಕಬಳ್ಳಾಪುರ ಜಿಲ್ಲೆ ) ತಲಾ 1.

ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 36.1 o ಡಿ.ಸೆ. ಪಣಂಬೂರಿನಲ್ಲಿ  ದಾಖಲಾಗಿದೆ. ರಾಜ್ಯದಲ್ಲಿ ಅತೀ ಕನಿಷ್ಠ ಉಷ್ಣಾಂಶ 12.5 o ಡಿ.ಸೆ. ಬೀದರ್ ನಲ್ಲಿ  ದಾಖಲಾಗಿದೆ.

20 ನೇ ಮಾರ್ಚ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳು:  ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ /ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕರಾವಳಿಯಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ

ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ /ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ:

ಮುಂದಿನ  24 ಗಂಟೆಗಳಲ್ಲಿ : ಗರಿಷ್ಠ ಉಷ್ಣಾಂಶವು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಕನಿಷ್ಠ ಉಷ್ಣಾಂಶ:

ಮುಂದಿನ 24 ಗಂಟೆಗಳಲ್ಲಿ: ಕನಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಷಿಯಸ್ ಕಡಿಮೆಯಾಗುವ  ಸಾಧ್ಯತೆ ಇದೆ.

ಗುಡುಗು ಮುನ್ನೆಚ್ಚರಿಕೆ:

ಮುಂದಿನ 24 ಗಂಟೆಗಳಲ್ಲಿ: ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಗಂಟೆಗಳಲ್ಲಿ: ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ:  ಇಲ್ಲ. . ಮುಂದಿನ 48 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

20 ನೇ ಮಾರ್ಚ್ 2023 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಹಗುರದಿಂದ ಸಾಧಾರಣ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಹಗುರದಿಂದ ಸಾಧಾರಣ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here