ಮಹಬೂಬಾದ್: ತೆಲಂಗಾಣದ ಮಹಬೂಬಾದ್ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗೆ ಉಂಟಾಗಿರುವ ಕೀಟಬಾಧೆಯಿಂದ ರೈತರು ಕಂಗಾಲಾಗಿದ್ದಾರೆ.
ಕೀಟಬಾಧೆ ನಿಯಂತ್ರಿಸಿ ಬೆಳೆ ರಕ್ಷಿಸಿಕೊಳ್ಳಲು ಆಗದ ಕಾರಣ ದಿಕ್ಕು ತೋಚದಂತಾಗಿದ್ದಾರೆ. ಇದರಿಂದ ಉಂಟಾದ ಆರ್ಥಿಕ ನಷ್ಟದಿಂದಾಗಿ 2022 ರ ಜನವರಿಯಿಂದ ಇಲ್ಲಿಯವರೆಗೆ 20 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ವೇದಿಕೆ (HRF) ಮತ್ತು ರೈತ ಸ್ವರಾಜ್ಯ ವೇದಿಕೆ (RSV) ದ ಭೂ ಸಮೀಕ್ಷೆ ಹೇಳಿದೆ. ಖಮ್ಮಂ ಜಿಲ್ಲೆಯಲ್ಲಿಯೂ ಐದು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಇಂಡೋನೇಷ್ಯಾದ ವಲಸಿಗ ಆಕ್ರಮಣಕಾರಿ ಕೀಟವಾದ ಥ್ರೈಪ್ಸ್ ಪಾರ್ವಿಸ್ಪಿನಸ್ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳಲ್ಲಿ ವೇಗವಾಗಿ ಹರಡಿತು. ತೆಲಂಗಾಣದಲ್ಲಿ ಬೆಳೆಯುವ ಕೆಂಪು ಮೆಣಸಿನಕಾಯಿ ಬೆಳೆಯಲ್ಲಿ ಒಟ್ಟು ಅರ್ಧದಷ್ಟು ಬೆಳೆಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
HRF ಮತ್ತು RSV ಪ್ರಕಾರ, ಕೀಟಗಳ ದಾಳಿಯು ಹಲವಾರು ರೈತರು, ವಿಶೇಷವಾಗಿ ಹಿಡುವಳಿದಾರ ರೈತರ ಮೇಲೆ ಪರಿಣಾಮ ಬೀರಿತು. ತೆಲಂಗಾಣದ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಮಾಧವ ರಾವ್ ಗೊರೆಪಟ್ಟಿ ಅವರು ” 6 ರಿಂದ 12 ಲಕ್ಷ ರೂ.ವರೆಗಿನ ಸಾಲದ ಕಾರಣದಿಂದ ಎರಡು ತಿಂಗಳ ಅವಧಿಯಲ್ಲಿ ಮಹಬೂಬಾದ್‌ನಲ್ಲಿ 20 ಮಂದಿ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಗೇಣಿದಾರ ರೈತರು. ೨ ರಿಂದ ೬ ಎಕರೆವರೆಗೆ ಜಮೀನನನು ಗೇಣಿ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಥ್ರೈಪ್ಸ್ ರೋಗವು ಸಂಪೂರ್ಣ ಬೆಳೆಯನ್ನು ಹಾಳು ಮಾಡಿದೆ ಎಂದು ಹೇಳಿದ್ದಾರೆ.
ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಮೆಣಸಿನಕಾಯಿ ಬೆಳೆಗೆ ಥ್ರೈಪ್ಸ್ ಪರ್ವಿಸ್ಪಿನಸ್ ಆಕ್ರಮಣಕಾರಿ ಕೀಟ ಪ್ರಭೇದದ ಭಾಧೆಯಿಂದ ಸುಮಾರು 40-80 ಪ್ರತಿಶತದಷ್ಟು ಹಾನಿಯುಂಟಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಫೆಬ್ರವರಿ 4, 2022 ರಂದು ಸಂಸತ್ತಿಗೆ ತಿಳಿಸಿದ್ದರು.
ಬೆಳೆ ಋತುವಿನಲ್ಲಿ ಹವಾಮಾನ / ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯು ಆಕ್ರಮಣಕಾರಿ ಕೀಟ ಪ್ರಭೇದಗಳ ಬಾಧೆಗೆ ಕಾರಣವಾಗಿರಬಹುದು. ಹೀಗಾಗಿ ಅದು ಕೀಟಬಾಧೆ ಹಠಾತ್ ಏರಿಕೆಗೆ ಕಾರಣವಾಗಿದೆ ಎಂದು ತೋಮರ್ ಹೇಳಿದ್ದರು.
2015 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ವರದಿಯಾದ ಈ ಪ್ರಭೇದವು ವೈರಸ್ ಅನ್ನು ಹೊತ್ತೊಯ್ಯುತ್ತಿದೆ ಎಂದು ಹೇಳಲಾಗಿದ್ದು ಅದು ರೋಗವನ್ನು ಮತ್ತಷ್ಟು ಹರಡಲು ಕಾರಣವಾಗಿದೆ. ಆದರೆ ಅದರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಇದು ಈಗ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೂ ಹರಡಿದೆ ಎಂದು ತೆಲಂಗಾಣದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಣಸಿನಕಾಯಿ ಬೆಳೆಯುವ ರೈತರು ಒಂದು ಹೆಕ್ಟೇರ್ ಪ್ರದೇಶದಲ್ಲಿ ಸರಾಸರಿ 50 ಕ್ವಿಂಟಾಲ್ ಇಳುವರಿ ಪಡೆಯುತ್ತಾರೆ. ಕೀಟಗಳ ದಾಳಿಯ ನಂತರ ಅವರು ಈ ಪ್ರಮಾಣದಲ್ಲಿ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಇಳುವರಿ ಪಡೆದಿದ್ದರು. ಗಮನಾರ್ಹ ಸಂಗತಿಯೆಂದರೆ ಅನೇಕ ಸಂದರ್ಭಗಳಲ್ಲಿ ಒಂದು ಹೆಕ್ಟೇರ್‌ನಲ್ಲಿ ತೆಗೆದುಕೊಂಡ ಇಳುವರಿ ಪ್ರಮಾಣವ ಕೇವಲ ಐದು ಕ್ವಿಂಟಾಲ್‌ಗಳಷ್ಟಿತ್ತು.
ಆಲಿಕಲ್ಲು ಮಳೆಯು ಈಗಾಗಲೇ ಕೀಟಗಳ ದಾಳಿಯಿಂದ ಉಂಟಾದ ನಷ್ಟವನ್ನು ಹೆಚ್ಚಿಸಿದೆ, ಇದು ರಾಜ್ಯದಲ್ಲಿ ಸುಮಾರು 8,100 ಹೆಕ್ಟೇರ್ ಪ್ರದೇಶದಲ್ಲಿ ಪರಿಣಾಮ ಬೀರಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ.
ತೆಲಂಗಾಣ ತನ್ನದೇ ಆದ ಯಾವುದೇ ಬೆಳೆ ವಿಮಾ ಯೋಜನೆಯನ್ನು ಹೊಂದಿಲ್ಲ. ಇದು ಈಗಾಗಲೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬಿಮಾ ಫಸಲ್ ಯೋಜನೆಯಿಂದ (PMFBY) ಹೊರಗುಳಿದಿದೆ.
“ಹಾನಿಯು ಆಂಧ್ರಪ್ರದೇಶದಲ್ಲಿಯೂ ಇದೆ ಆದರೆ ಅಲ್ಲಿ, ತನ್ನದೇ ಆದ ಬೆಳೆ ವಿಮಾ ಯೋಜನೆಯನ್ನು ಹೊಂದಿರುವುದರಿಂದ PMFBY ಅಥವಾ ಇತರ ಬೆಳೆ ನಷ್ಟ ಪರಿಹಾರದಿಂದ ಕೆಲವು ರೀತಿಯ ಪರಿಹಾರವನ್ನು ಪಡೆಯುವ ಸಾಧ್ಯತೆ ಹೆಚ್ಚು” ಎಂದು RSV ಯ ಕಿರಣ್ ಕುಮಾರ್ ವಿಸ್ಸಾ ಹೇಳಿದ್ದಾರೆ. ತೆಲಂಗಾಣದಲ್ಲಿ ಜನವರಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟದ ನಂತರ ಪರಿಹಾರ ನೀಡುವುದಾಗಿ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯೂ ಇಲ್ಲಿಯವರೆಗೆ ಈಡೇರಿಲ್ಲ ಎಂದು ಅವರು ಹೇಳಿದರು.
ಮೆಣಸಿನಕಾಯಿ ಹೆಚ್ಚಿನ ಬಂಡವಾಳದ ಬೆಳೆಯಾಗಿದ್ದು, ರೈತರು ಎಕರೆಗೆ ಸುಮಾರು 80,000-100,000 ರೂ.ತನಕ ವೆಚ್ಚವಾಗುತ್ತದೆ. “ಕೀಟಬಾಧೆಯಿಂದ ಭಾರೀ ನಷ್ಟವಾಗಿದೆ. ಈ ರೈತರಲ್ಲಿ ಹೆಚ್ಚಿನವರು ಹಿಡುವಳಿದಾರರಾಗಿದ್ದು, ಅವರು ಎಕರೆಗೆ 20,000-25,000 ರೂ.ಗಳ ಹೆಚ್ಚುವರಿ ಗುತ್ತಿಗೆ ಮೊತ್ತವನ್ನು ಪಾವತಿಸುತ್ತಾರೆ. ಅವರು ಯಾವುದೇ ಬ್ಯಾಂಕ್ ಸಾಲವನ್ನು ಪಡೆದಿಲ್ಲ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ಸಾಲ ಅವರನ್ನು ಬಾಧಿಸುತ್ತಿದೆ.