ವಿಶ್ವ ಮಣ್ಣುದಿನ ಆಚರಿಸಲು ಮರೆಯಬೇಡಿ

0
ಲೇಖಕರು: ಸಾಯಿಲ್‌ ವಾಸು, ಕೃಷಿತಜ್ಞರು

ಆತ್ಮೀಯರೇ, 05 ಡಿಸೆಂಬರ್ 2023 — ಮಂಗಳವಾರ ಜಗತ್ತಿನಾದ್ಯಂತ ” ವಿಶ್ವ ಮಣ್ಣು ದಿನ ” ದ ಸಂಭ್ರಮಾಚರಣೆ. ನೀವೂ ಸಹ ನಿಮ್ಮಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯಿತಿ ವಲಯದಲ್ಲಿ ” ಸಜೀವಿ ಮಣ್ಣು ಕುರಿತು ಮಾತುಕತೆ ” ಕಾರ್ಯಕ್ರಮವನ್ನು ಏರ್ಪಡಿಸಿ.

ಸಜೀವಿ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಅಗತ್ಯತೆಯನ್ನು ರೈತ ಸಮುದಾಯಕ್ಕೆ – ವಿದ್ಯಾರ್ಥಿಗಳಿಗೆ – ಯುವಜನಕ್ಕೆ – ಗ್ರಾಹಕರಿಗೆ ಹಾಗೂ ಜನಸಾಮಾನ್ಯರಿಗೆ ಮನವರಿಕೆ ಮಾಡಿ.

ಈ ಕಾರ್ಯಕ್ರಮವನ್ನು ನಿಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಇತರ ಸರ್ಕಾರೇತರ ಸಂಸ್ಥೆಗಳೊಂದಿಗೆ, ಸಂಬಂಧಿಸಿದ ಸರಕಾರೀ ಇಲಾಖೆಗಳೊಂದಿಗೆ , ರೈತ ಸಂಘಟನೆಗಳೊಂದಿಗೆ, ಯುವಕ ಸಂಘಗಳೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಶಿಕ್ಷಣ ಸಂಸ್ಥೆಗಳೊಂದಿಗೆ, ಗ್ರಾಹಕ ಸಂಸ್ಥೆಗಳೊಂದಿಗೆ ಸೇರಿಯೂ ಜಂಟಿಯಾಗಿ ಆಯೋಜಿಸಬಹುದು

ಮಣ್ಣಿನ ಸಂರಕ್ಷಣೆಗಾಗಿ ದುಡಿದಿರುವ ಹಿರಿಯ ರೈತರು – ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುವುದು. ಅವರು ಕೈಗೊಂಡ ಮಣ್ಣು ಸಂರಕ್ಷಣಾ ವಿಧಾನಗಳನ್ನು ದಾಖಲಿಸುವುದು ಇತ್ಯಾದಿ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬಹುದು.

ಒಂದು ವೇಳೆ ಕೆಲವು ತಾಂತ್ರಿಕ ಕಾರಣಗಳಿಂದ 05 ಡಿಸೆಂಬರ್ 2023 ರಂದು ವಿಶ್ವ ಮಣ್ಣು ದಿನವನ್ನು ಆಚರಿಸಲು ಸಾಧ್ಯವಾಗದಿದ್ದಲ್ಲಿ, ಡಿಸೆಂಬರ್ ತಿಂಗಳಲ್ಲಿ ನಿಮಗೆ ಒಪ್ಪಿಗೆಯಾಗುವ ದಿನದಂದು ಈ ಕಾರ್ಯಕ್ರಮವನ್ನು ನಡೆಸಿ

” ವಿಶ್ವ ಮಣ್ಣು ದಿನ ” ವನ್ನು ನೀವು ಹೇಗೆ ಆಚರಿಸಬಹುದು ? ಈ ಕೆಳಗೆ ತಿಳಿಸಿರುವ ಯಾವುದಾದರೂ ಒಂದು ಚಟುವಟಿಕೆಯನ್ನು ನಡೆಸಿ.

– ವಿಶ್ವ ಮಣ್ಣು ದಿನ ಕುರಿತು ವಿಚಾರ ಸಂಕಿರಣ

– ಗ್ರಾಮ ಪಂಚಾಯಿತಿಯಲ್ಲಿನ ವಿಧವಿಧ ಮಣ್ಣುಗಳು – ನಾಟಿ ಬೀಜಗಳ ಸಂಗ್ರಹಣೆ – ಪ್ರದರ್ಶನ – ಉಪಯುಕ್ತತೆಯ ಮಾಹಿತಿ

– ಸಜೀವಿ ಮಣ್ಣು ಕುರಿತ ವಿಡಿಯೋ / ಪೋಸ್ಟರ್ / ಚಿತ್ರ ಪ್ರದರ್ಶನ
– ವಿವಿಧ ಬಣ್ಣದ ಮಣ್ಣುಗಳಿಂದ ವಿವಿಧ ಬಣ್ಣಗಳನ್ನು ತಯಾರಿಸಿ, ಆ ಬಣ್ಣಗಳನ್ನು ಬಳಸಿ ಚಿತ್ರ ಬಿಡಿಸುವ ಸ್ಪರ್ಧೆ

– ಸಜೀವಿ ಮಣ್ಣು ಕುರಿತು ಪ್ರಬಂಧ ಸ್ಪರ್ಧೆ

– ಮಣ್ಣು ಕುರಿತು ರಸಪ್ರಶ್ನೆ

– ಸಜೀವಿ ಮಣ್ಣಿಗಾಗಿ ವಿವಿಧ ಬಗೆಯ ಸಾವಯವ ಗೊಬ್ಬರಗಳ ತಯಾರಿಕೆಯ ಪ್ರಾತ್ಯಕ್ಷಿಕೆ

– ಮಣ್ಣು ಕುರಿತು ಆಶುಭಾಷಣ ಸ್ಪರ್ಧೆ

– ಸಾವಯವ ವಿಧಾನಗಳ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿರುವ ಹಿರಿಯ ರೈತರರಿಗೆ ಸನ್ಮಾನ

– ಮಣ್ಣು ಕುರಿತ ಕಥೆಗಳು – ಗಾದೆಗಳು – ಹಾಡುಗಳು – ಜನಪದ ನಂಬಿಕೆಗಳು – ಲಾವಣಿಗಳು – ಪದಗಳು

ಕಾರ್ಯಕ್ರಮವನ್ನು ರೂಪಿಸುವಾಗ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು , ಹಿರಿಯ ಅನುಭವಿ ರೈತರು, ಗ್ರಾಮದ ಮುಖ್ಯಸ್ಥರು , ಶಿಕ್ಷಕರು , ವಿಜ್ಞಾನಿಗಳು, ಸಂಶೋಧಕರು ಮುಂತಾದವರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಿ

ಒಂದು ವೇಳೆ ಮಣ್ಣು ಸಂಶೋಧನಾ ಕೇಂದ್ರ ಅಥವಾ ಶಾಲೆಗಳಲ್ಲಿ ಮೈಕ್ರೋಸ್ಕೋಪ್ ಸಿಕ್ಕಲ್ಲಿ, ಅವುಗಳ ಮೂಲಕ ಮಣ್ಣಲ್ಲಿನ ಜೀವಾಣುಗಳನ್ನು ವಿದ್ಯಾರ್ಥಿಗಳಿಗೆ – ರೈತರಿಗೆ – ಮಹಿಳೆಯರಿಗೆ – ಗ್ರಾಹಕರಿಕೆ ತೋರಿಸಿ. ಅವರಲ್ಲೂ ಮಣ್ಣು ಜೀವಿಗಳ ಪ್ರಾಮುಖ್ಯತೆಯ ಅರಿವು ಮೂಡಿಸಲು ಪ್ರಯತ್ನಿಸಿ.

ಮಣ್ಣಿಗೆ ಸಂಬಂಧಿಸಿದ ಪೋಸ್ಟರ್ – ಸಣ್ಣ ಲೇಖನಗಳು – ಫೋಟೋಗಳು – ಪಿಪಿಟಿ ಗಳು ಬೇಕಿದ್ದಲ್ಲಿ, ನನ್ನ ಈಮೈಲ್ ವಿಳಾಸ: [email protected] ಗೆ ಮೇಲ್ ಮಾಡಿ ಇಲ್ಲವೇ ನನ್ನನ್ನು +919483963786 / +919483467779 (WatsUp) ಸಂಪರ್ಕಿಸಿ.

LEAVE A REPLY

Please enter your comment!
Please enter your name here