ಗ್ರಾಮೀಣರ ಅಭಿವೃದ್ಧಿಗೆ ಮೈಕ್ರೋ ಫೈನಾನ್ಸ್‌ ಸಹಾಯಕವೇ ?

1

ಬೆಂಗಳೂರು, 12ನೇ ಸೆಪ್ಟೆಂಬರ್ : ನಗರ ಮತ್ತು ಗ್ರಾಮೀಣ ಭಾರತದ ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುವಲ್ಲಿ ಮೈಕ್ರೊಫೈನಾನ್ಸ್ ಸಂಸ್ಥೆಗಳು ಬಹಳ ನಿರ್ಣಾಯಕ ಪಾತ್ರವಹಿಸುತ್ತಿವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ  ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಗೌಡ ಅವರು ತಿಳಿಸಿದರು.

ಇಂದು ಲಲಿತ್ ಅಶೋಕ್ ಹೋಟಲ್ ನಲ್ಲಿ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ವತಿಯಿಂದ ಮೈಕ್ರೋಫೈನಾನ್ಸ್ ಕರ್ನಾಟಕ ಸಮಿಟ್ 2023 ಕಾರ್ಯಕ್ರಮವನ್ನು ‌ಉದ್ಘಾಟಿಸಿ ಅವರು ಮಾತನಾಡಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತಿವೆ.  ಮೈಕ್ರೋ ಫೈನಾನ್ಸ್ ಸಂಸ್ಥೆಗಳು(ಎಂಎಫ್ಐಗಳು) ಬಡತನದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸ್ವಸಹಾಯ ಗುಂಪುಗಳ (ಎಸ್ ಎಚ್ ಜಿಗಳು) ಬೆಂಬಲದೊಂದಿಗೆ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಲು ಕೆಲಸ ಮಾಡಿವೆ. ರಾಜ್ಯದ 31 ಜಿಲ್ಲೆಗಳಲ್ಲಿ ಹರಡಿರುವ ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ 56 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲವನ್ನು ಹೊಂದಿರುವ ದೇಶದ ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ತಿಳಿಸಿದರು.

ನಬಾರ್ಡ್ ನ ಮಾಜಿ ಮುಖ್ಯ ಪ್ರಧಾನ ವ್ಯವಸ್ಥಾ ಎಸ್. ಶ್ರೀನಿವಾಸನ್ ಅವರು ಮಾತನಾಡಿ ಎಂಎಫ್ ಐಗಳು ದುರ್ಬಲ , ಕಡಿಮೆ ಆದಾಯದ ಜನರಿಗೆ ಒಳ್ಳೆಯದನ್ನು ಮಾಡುವ ಶಕ್ತಿಯನ್ನು ಹೊಂದಿದೆ ಎಂದರು. ಅನೇಕ ಗ್ರಾಹಕರು ಮೈಕ್ರೋ ಫೈನಾನ್ಸ್ ನ ನಿರಂತರ ಲಭ್ಯತೆಯಿಂದ ತಮ್ಮ ಜೀವನೋಪಾಯ ಮತ್ತು  ಜೀವನದ ಗುಣಮಟ್ಟವನ್ನು ಸುಧಾರಿಸಿದ್ದಾರೆ. ಅಲ್ಲದೆ, ಗ್ರಾಹಕರು ತರಬೇತಿ ಮತ್ತು ಅಭ್ಯಾಸದ ಮೂಲಕ ಆರ್ಥಿಕವಾಗಿ ಸಮರ್ಥರಾಗುತ್ತಾರೆ  ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಕ್ರೆಡಿಟ್‌ ಆಕ್ಸೆಸ್  ಗ್ರಾಮೀಣ ಲಿಮಿಟೆಡ್ ನ ಎಂಎಫ್ ಐಎನ್ ಮತ್ತು  ಎಂಡಿ ಅಧ್ಯಕ್ಷ  ಉದಯ ಕುಮಾರ್ ಅವರು ಮಾತನಾಡಿ ಮೈಕ್ರೋ ಕ್ರೆಡಿಟ್ ನ  ಗ್ರಾಮೀಣ ಲಿಮಿಟೆಡ್‌ನ ಮೂಲ ಅಡಿಪಾಯವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಯಿತು. ಇದು  ಆರ್ಥಿಕ ಸೇರ್ಪಡೆ ಕ್ಷೇತ್ರದಲ್ಲಿ ಸಾಟಿಯಿಲ್ಲದ ಮಾನದಂಡವಾಗಿದೆ. ಹಣಕಾಸಿನ ತರಬೇತಿ, ವಿಮಾ ಸೌಲಭ್ಯಗಳು ಮತ್ತು ಸಮುದಾಯ ಅಭಿವೃದ್ಧಿ ಉಪಕ್ರಮಗಳ ಅಂಶಗಳು ಮೈಕ್ರೋ ಫೈನಾನ್ಸ್ ನಿಜವಾದ ಪ್ರತಿಬಿಂಬವಾಗಿದೆ ಎಂದರು.

ಎನ್ ಎಲ್  ನ ಮಿಷನ್ ನಿರ್ದೇಶಕರಾದ ಡಾ.ರಾಗಪ್ರಿಯ ಅವರು ಮಾತನಾಡಿ  ಪಶುಸಖಿ, ಕೃಷಿ ಸಖಿ, ಸ್ರೀಸಾಮರ್ಥ್ಯ ಯೋಜನೆ, ಲಘುಪತಿ ದಿದಿ, ಕ್ಷೀರ ಸಂಜೀವಿನಿಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಿರು ಹಣಕಾಸಿನ ಬೆಳವಣಿಗೆ ಪುಸ್ತಕ ವನ್ನು ಬಿಡುಗಡೆ ಮಾಡಲಾಯಿತು

1 COMMENT

LEAVE A REPLY

Please enter your comment!
Please enter your name here