ತುರ್ತು ಪರಿಹಾರಕ್ಕೆ ಏಕೀಕೃತ ಕೃಷಿ ಸಹಾಯವಾಣಿ

0

ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ತ್ವರಿತವಾಗಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಏಕೀಕೃತ ಕೃಷಿ ಸಹಾಯವಾಣಿ ಆರಂಭಿಸಿದೆ.ಇದರ ಮೂಲಕ ಅಗತ್ಯವಾಗಿರುವ ಸಲಹೆ – ಸೂಚನೆಗಳನ್ನು ನೀಡಲಾಗುವುದು. ವೈಜ್ಞಾನಿಕ ಮಾದರಿಯಲ್ಲಿ ಇದನ್ನು ನಿರ್ವಹಿಸಲಾಗುವುದು.

ಏಕೀಕೃತ ಕೃಷಿ ಸಹಾಯವಾಣಿ ಸಂಖ್ಯೆ 1800 – 425 – 3553. ಇದಕ್ಕೂ ಮೊದಲು ಕೃಷಿ ಇಲಾಖೆಯಲ್ಲಿ ಒಟ್ಟು ಏಳು ಸಹಾಯವಾಣಿ ಸಂಖ್ಯೆಗಳಿದ್ದವು.ಬೆಳೆ ಸಮೀಕ್ಷೆ, ಪಿಎಂ ಕಿಸಾನ್, ರೈತ ವಿದ್ಯಾನಿಧಿ, ಬೆಳೆವಿಮೆ, ಕೃಷಿ ಸಂಜೀವಿನಿ, ಕೆ-ಕಿಸಾನ್, ರೈತರ ಸಹಾಯವಾಣಿ ಇವುಗಳಿಗೆಲ್ಲ ಪ್ರತ್ಯೇಕ ದೂರವಾಣಿಗಳಿದ್ದವು.

ಪ್ರತಿ ವಿಭಾಗಕ್ಕೆ ದೂರ ಬಂದಾಗ ಸಂಬಂಧಿಸಿದ ವಿಭಾಗಕ್ಕೆ ಅದನ್ನು ವರ್ಗಾಯಿಸುವ ಕಾರ್ಯ ಮಾಡಲಾಗುತ್ತಿತ್ತು. ಹಲವೊಮ್ಮೆ ಗೊಂದಲಗಳು ಉಂಟಾಗುತ್ತಿತ್ತು. ಇದನ್ನೆಲ್ಲ ನಿವಾರಣೆ ಮಾಡಿ  ಸಾಧ್ಯವಾದಷ್ಟು ಶೀಘ್ರ ಸ್ಪಂದಿಸಲು ಏಕೀಕೃತ ಸಹಾಯವಾಣಿ ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯದ ರೈತರು ಈ ದೂರವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಮೊಬೈಲ್ ಪೋನ್ ಗಳಲ್ಲಿ 1800 – 425 – 3553 ನಂಬರ್ ಅನ್ನು ಸೇವ್ ಮಾಡಿಕೊಳ್ಳುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಮುಂದಿನ ದಿನಗಳಲ್ಲಿ ಮುಂದುವರಿದ ತಂತ್ರಜ್ಞಾನವಾದ ಮೆಷಿನ್ ಲರ್ನಿಂಗ್, ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here