
ಕೊಳಕು ಮಂಡಲ. ಭಾರತದ ನಾಲ್ಕು ದೊಡ್ಡ ವಿಷಕಾರಿ ಹಾವುಗಳಲ್ಲಿ ಒಂದು. ಬಹಳಷ್ಟು ಜನರ ನಂಬಿಕೆಯಂತೆ ಕೇವಲ ಉಸಿರು ತಾಗಿದರೆ ಇಲ್ಲ ಅಪಾಯ. ಆದರೂ ಉಸಿರು ತಾಗದಷ್ಟು ಅಂತರ ಇಟ್ಟುಕೊಳ್ಳುವುದು ಕ್ಷೇಮ! ನಿಶಾಚರಿಯಾದ ಕೊಳಕು ಮಂಡಲಗಳು ರಾತ್ರಿ ಸಂಚಾರಿಗಳು. ಹಾಗಾಗಿ ರಾತ್ರಿ ಹೊರಗೆ ಹೋದಾಗ ತಪ್ಪದೆ ಬಳಸೋಣ ಟಾರ್ಚುಗಳು, ಹಾಕೋಣ ಕಾಲಿಗೆ ಶೂವುಗಳು
ಹುಲ್ಲಿನ ರಾಶಿ, ಸೆತ್ತೆ, ಸೆದೆಗಳು, ಕಲ್ಲಿನ ಸಂದಿಗಳೆ ಇವುಗಳ ಆವಾಸಸ್ಥಾನ. ಹಾಗಾಗಿ ಸಾಮಾನ್ಯವಾಗಿ ಓಡಾಡುವ ತಾಣಗಳಲ್ಲಿ ಅಂತಹ ‘ಸ್ಥಾನ‘ಗಳು ಇರದಂತೆ ಮಾಡುವುದು ಮುನ್ನೆಚ್ಚರಿಕೆ ದೃಷ್ಟಿಯಿಂದ ಉತ್ತಮ. ಜೊತೆಗೆ ಅಂತಹ ತಾಣಗಳಲ್ಲಿ ಓಡಾಡುವಾಗ ಎಚ್ಚರ ವಹಿಸುವುದು ಕ್ಷೇಮ.
ಎಲ್ಲ ಎಚ್ಚರಿಕೆ ತೆದೆದುಕೊಂಡು ಕೊಳಕು ಮಂಡಲಗಳು ಅಕಸ್ಮಾತ್ ಕಚ್ಚಿದರೂ ಗಾಬರಿ ಬೇಡ; ಮಂತ್ರ ತಂತ್ರದ ಮೊರೆ ಹೋಗುವುದು ಬೇಡ. ಹತ್ತಿರದ ಆಸ್ಪತ್ರೆಗಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತೆರಳಿ, ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಅಪಾಯ ಇರಲ್ಲ!!
ಕೊಳಕು ಮಂಡಲ ಸೇರಿ, ಪ್ರತಿಯೊಂದು ಪ್ರಾಣಿಗಳು ಜೀವವೈವಿಧ್ಯದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಅವುಗಳ ಸಂಹಾರ ಆಗದಿರಲಿ ಯಾರ ಗುರಿ. ಅವುಗಳ ಸಂರಕ್ಷಣೆಯೊಂದಿಗೆ ನಮ್ಮ ರಕ್ಷಣೆಯೇ ಸದಾ ಆಗಲಿ ಗುರಿ! ಅದಕ್ಕಾಗಿ ಇರಲಿ ಇವುಗಳ ಕುರಿತು ಮನದಲ್ಲಿ ಸದಾ ಎಚ್ಚರಿಕೆ!!