ಶನಿವಾರ, 02 ನೇ ಸೆಪ್ಟೆಂಬರ್ 2023 / 11ನೇ ಭಾದ್ರಪದ 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಹಾಗೂ ಕರಾವಳಿಯಲ್ಲಿ ದುರ್ಬಲವಾಗಿತ್ತು . ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಅತಿ ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ.ನಲ್ಲಿ): ಶಹಾಪುರ (ಯಾದಗಿರಿ ಜಿಲ್ಲೆ) 12.
ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಮಳವಳ್ಳಿ (ಮಂಡ್ಯ ಜಿಲ್ಲೆ) 9.
ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ), ಮಳವಳ್ಳಿ ಎಆರ್‌ಜಿ, ಮದ್ದೂರು (ಎರಡೂ ಮಂಡ್ಯ ಜಿಲ್ಲೆ) ತಲಾ 6; ತಾವರೆಗೆರೆ (ಕೊಪ್ಪಳ ಜಿಲ್ಲೆ), ಬಂಡೀಪುರ (ಚಾಮರಾಜನಗರ ಜಿಲ್ಲೆ), ಚಿತ್ರದುರ್ಗ ತಲಾ 5; ಬಾದಾಮಿ, ಲೋಕಾಪುರ (ಎರಡೂ ಬಾಗಲಕೋಟೆ ಜಿಲ್ಲೆ) ತಲಾ 4; ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ (ಬೆಳಗಾವಿ ಜಿಲ್ಲೆ), ಗದಗ, ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ), ಯಡ್ರಾಮಿ (ಕಲಬುರ್ಗಿ ಜಿಲ್ಲೆ), ಯಗಟಿ (ಚಿಕ್ಕಮಗಳೂರು ಜಿಲ್ಲೆ), ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ), ಬೆಳ್ಳೂರು (ಮಂಡ್ಯ ಜಿಲ್ಲೆ) ತಲಾ 3; ಚಿಕ್ಕೋಡಿ, ಸಂಕೇಶ್ವರ (ಎರಡೂ ಬೆಳಗಾವಿ ಜಿಲ್ಲೆ), ಕುಂದಗೋಳ (ಧಾರವಾಡ ಜಿಲ್ಲೆ), ಹುಣಸಗಿ, ನಾರಾಯಣಪುರ (ಎರಡೂ ಯಾದಗಿರಿ ಜಿಲ್ಲೆ), ಚಿಕ್ಕಮಗಳೂರು, ಸರಗೂರು (ಮೈಸೂರು ಜಿಲ್ಲೆ), ಕೋಲಾರ, ಕನಕಪುರ (ರಾಮನಗರ ಜಿಲ್ಲೆ) ತಲಾ 2; ಮಹಾಲಿಂಗಪುರ, ಬಿಳಿಗಿ, ರಬಕವಿ (ಎಲ್ಲವೂ ಬಾಗಲಕೋಟೆ ಜಿಲ್ಲೆ), ಉಡುಪಿ, ನಲ್ವತವಾಡ (ವಿಜಯಪುರ ಜಿಲ್ಲೆ), ಕೆಂಭಾವಿ (ಯಾದಗಿರಿ ಜಿಲ್ಲೆ), ಕೆ.ಆರ್.ಸಾಗರ (ಮಂಡ್ಯ ಜಿಲ್ಲೆ), ರಾಯಲ್ಪಾಡು (ಕೋಲಾರ ಜಿಲ್ಲೆ), ದಾವಣಗೆರೆ ಪಿಟಿಒ, ದಾವಣಗೆರೆ, ಹೊಸದುರ್ಗ, ನಾಯಕನಹಟ್ಟಿ (ಎರಡೂ ಚಿತ್ರದುರ್ಗ ಜಿಲ್ಲೆ), ಚಿಕ್ಕಬಳ್ಳಾಪುರ, ಚನ್ನಪಟ್ಟಣ (ರಾಮನಗರ ಜಿಲ್ಲೆ) ತಲಾ 1.
04 ನೇ ಸೆಪ್ಟೆಂಬರ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:
ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿಯ ಕೆಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳು: ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿಯ ಕೆಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ:
ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 48 ಘಂಟೆಗಳು: ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುಡುಗು ಮುನ್ನೆಚ್ಚರಿಕೆ:
ಮುಂದಿನ 48 ಘಂಟೆಗಳು: ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ: ಇಲ್ಲ.
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
04 ನೇ ಸೆಪ್ಟೆಂಬರ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ/ರಾತ್ರಿಯ ವೇಳೆಗೆ ಒಂದೆರಡು ಬಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ/ರಾತ್ರಿಯ ವೇಳೆಗೆ ಒಂದೆರಡು ಬಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.
ಮಳೆಯ ಸುದ್ದಿ ಸುಳ್ಳು. ಇಲ್ಲಿ ಹೇಳುವ ರೀತಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯೇ ಆಗಿಲ್ಲ.ರೈತರು ಕಂಗಾಲಾಗಿದ್ದಾರೆ ನಿರಾಶರಾಗಿದ್ದಾರೆ, ದಯವಿಟ್ಟು ಸುಳ್ಳು ಸುದ್ದಿ ಹಾಕಬೇಡಿ
ಮಳೆ ಕುರಿತಂತೆ ವರದಿ ಮತ್ತು ಮುನ್ಸೂಚನೆಗಳಿರುತ್ತವೆ. ಸಾಮಾನ್ಯವಾಗಿ ಪ್ರತಿ ಹೋಬಳಿ ಕೇಂದ್ರಗಳಲ್ಲಿಯೂ ಮಳೆ ಮಾಪಕಗಳಿರುತ್ತವೆ. ಇಲ್ಲಿ ಬಿದ್ದ ಮಳೆ ಪ್ರಮಾಣ ದಾಖಲೀಕರಣವಾಗುತ್ತದೆ. ಈ ಅಂಕಿಅಂಶಗಳನ್ನು ಸಂಗ್ರಹಿಸಿ ವರದಿ ಮಾಡಲಾಗುತ್ತದೆ.
ಇನ್ನೊಂದು ಮಳೆ ಮುನ್ಸೂಚನೆ. ಇದರಲ್ಲಿ ಮೋಡಗಳ ಸಾಂದ್ರತೆ, ಚಲನೆ, ಗಾಳಿಯ ದಿಕ್ಕು ಇವುಗಳನ್ನು ಆಧರಿಸಿ ಮುನ್ಸೂಚನೆ ನೀಡಲಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಬಹುದು ಎಂದು ಮುನ್ಸೂಚನೆ ಇದ್ದರೆ ಆ ಪ್ರದೇಶದ ಪ್ರತಿಯೊಂದು ಗ್ರಾಮದಲ್ಲಿಯೂ ಮಳೆಯಾಗುತ್ತದೆ ಎಂದರ್ಥವಲ್ಲ. ಆ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದರ್ಥ. ಹವಾಮಾನ ಮುನ್ಸೂಚನೆಯಂತೆ ಕಳೆದ ಐದು ದಿನಗಳಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ ಗಮನಿಸಿ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಎಂಬ ಅಂಕಿಅಂಶಗಳನ್ನು ನೀಡಲಾಗಿದೆ.
ನೀಡುವ ವರದಿಗಳು; ಮುನ್ಸೂಚನೆಗಳು ಎಲ್ಲವೂ ವೈಜ್ಞಾನಿಕ. ಇದರಲ್ಲಿ ಕಟುಕಥೆಗಳಿರುವುದಿಲ್ಲ. ಕೆಲವೊಮ್ಮೆ ಮಳೆಯಾಗುವ ಮುನ್ಸೂಚನೆ ಇದ್ದರೂ ಮಳೆಯಾಗಿರುವುದಿಲ್ಲ. ಆದರೆ ಆ ಮಳೆ ಸುತ್ತಮುತ್ತಲೆಲ್ಲೂ ಬಿದ್ದಿರುತ್ತದೆ. ಇದಕ್ಕೆ ಹವಾಮಾನದಲ್ಲಿ ಆಗುವ ಬದಲಾವಣೆಗಳು ಕಾರಣ.