ಹವಾಮಾನ ವರದಿ: ಬೀದರ್ ; ಅತೀ ಕಡಿಮೆ ಉಷ್ಣಾಂಶ ದಾಖಲು

0

ಮಂಗಳವಾರ, 29ನೇ ನವೆಂಬರ್ 2022 / 08 ನೇ ಅಗ್ರಹಾಯಣ 1944 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಭಾಗಮಂಡಲ (ಕೊಡಗು ಜಿಲ್ಲೆ) 5; ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) 4; ನಾಪೋಕ್ಲು(ಕೊಡಗು ಜಿಲ್ಲೆ) 3; ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ), ಶಿಗ್ಗಾಂವ್ (ಹಾವೇರಿ ಜಿಲ್ಲೆ) ತಲಾ 2; ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಪಣಂಬೂರು, ಧಾರವಾಡ, ಸಕಲೇಶಪುರ (ಹಾಸನ ಜಿಲ್ಲೆ) ತಲಾ 1.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 12.0 ಡಿ.ಸೆ. ಬೀದರ್ ನಲ್ಲಿ  ದಾಖಲಾಗಿದೆ.

01 ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ

ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ.

ಗುಡುಗು ಮುನ್ಸೂಚನೆ : ಮುಂದಿನ 48 ಘಂಟೆಗಳಲ್ಲಿ  ಇಲ್ಲ. ಮೀನುಗಾರರಿಗೆ ಎಚ್ಚರಿಕೆ  ಇಲ್ಲ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಬೆಂಗಳೂರು ಹವಾಮಾನ : 01ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು/ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 28ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು:  ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು/ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here