ಕೊರೊನಾ ಸಾಂಕ್ರಮಿಕ ಪಿಡುಗಿನ ಕಾರಣದಿಂದ ದೇಶ ಹಿಂದೆಂದೂ ಕಂಡರಿಯದ ಲಾಕ್ ಡೌನ್ ಕ್ರಮಕ್ಕೆ ಒಳಗಾಯಿತು. ಈ ಅವಧಿಯಲ್ಲಿ ಬಹುತೇಕ ಕ್ಷೇತ್ರಗಳ ವ್ಯವಹಾರ ಸ್ಥಗಿತವಾದವು. ಆದರೆ ಈ ಸಮಯದಲ್ಲಿಯೂ ಅತ್ಯಂತ ಸಕ್ರಿಯವಾಗಿದ್ದ ಕ್ಷೇತ್ರವೆಂದರೆ “ಕೃಷಿಕ್ಷೇತ್ರ”  ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಕರು ಅಂಜದೇ ಅಳುಕದೇ ತಮ್ಮ ಕಾಯಕ ಮುಂದುವರಿಸಿದರು. ಇದರಿಂದಾಗಿಯೇ ಇಂದು ಅತ್ಯವಶ್ಯಕ ಆಹಾರಧಾನ್ಯಗಳು, ತರಕಾರಿಗಳು ಮತ್ತು ಹಣ್ಣು ಹಂಪಲುಗಳಿಗೆ ಕೊರತೆಯಾಗಿಲ್ಲ. ಇದಕ್ಕಾಗಿ ಅನ್ನದಾತರಿಗೆ ಜನತೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

ಕೃಷಿಕರು ತಮ್ಮ ಕಾಯಕ ಮುಂದುವರಿಸಲು ಅನುಕೂಲವಾಗುವಂತೆ ವ್ಯವಸಾಯಕ್ಕೆ ಬೇಕಾದ ಒಳಸುರಿಗಳು ಮತ್ತು ಯಂತ್ರೋಪಕರಣಗಳ ಮಳಿಗೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತು. ಈ ಸಂದರ್ಭದಲ್ಲಿ ಸ್ಪ್ರೇಯರ್ ಖರೀದಿಸಲು “ಅಗ್ರಿಮಾರ್ಟ್” ಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ಕೃಷಿಕರ ಬಗ್ಗೆ  ತೋರಿಸಿದ  ಮುತುವರ್ಜಿ, ಕಾಳಜಿ ಗಮನ ಸೆಳೆಯಿತು. ನನ್ನ ಗಮನಕ್ಕೆ ಬಂದ ಸಂಗತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಬೆಂಗಳೂರು ನಗರದ ಮೈಸೂರು ಹೆದ್ದಾರಿ ಬದಿಯಲ್ಲಿಯೇ ಸ್ಯಾಟ್ ಲೈಟ್ ಬಸ್ ಸ್ಟ್ಯಾಂಡ್ ಸನಿಹದಲ್ಲಿಯೇ ಇರುವ “ಅಗ್ರಿಮಾರ್ಟ್” ಮಳಿಗೆಯಲ್ಲಿ ವಿವಿಧ ಶ್ರೇಣಿಯ ಸ್ಪ್ರೇಯರ್ ಸಿಗುತ್ತವೆ ಎಂದು ತಿಳಿದಿತ್ತು. ಮ್ಯಾನುವಲ್ ಅಥವಾ ಬ್ಯಾಟರಿ ಆಪರೇಟೆಡ್ ಸ್ಪ್ರೇಯರ್ ತೆಗೆದುಕೊಳ್ಳುವುದೊ ಎಂಬ ಗೊಂದಲವಿತ್ತು. ಮಳಿಗೆಗೆ ನೇರ ಹೋಗಿ ನೋಡಿ, ವಿಚಾರಿಸೊಣ ಎಂದುಕೊಂಡು ಹೋದೆ.

ಮಳಿಗೆ ಪ್ರವೇಶದ್ವಾರದಲ್ಲಿಯೇ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿದ ಸಿಬ್ಬಂದ ನಿಲ್ಲುವಂತೆ ಸನ್ನೆ ಮಾಡಿದರು. ನಿಂತ ಕೂಡಲೇ ಹಸ್ತಗಳನ್ನು ಚಾಚುವಂತೆ ತಿಳಿಸಿ ಸ್ಯಾನಟೈಜರ್ ಹಾಕಿದರು. ಅದನ್ನು ಎರಡೂ ಹಸ್ತಗಳಿಗೂ ಉಜ್ಜಿಕೊಳ್ಳುತ್ತಿದ್ದಂತೆ ದೇಹದ ಉಷ್ಣಾಂಶ ಅಳೆಯುವ ಉಪಕರಣವನ್ನು ಹಣೆಯ ಸಮೀಪ ಹಿಡಿದು ನೋಡಿದರು. ನಂತರ ಕೈಗಳನ್ನು ಮೇಲೆತ್ತಿ ಎರಡೂ ಬದಿಗೂ ಚಾಚುವಂತೆ ತಿಳಿಸಿ ದೇಹದ ಮೇಲೆ ತುಂತುರು ಸ್ಯಾನಿಟೈಜ್ ಮಾಡಿದರು. ಬಟ್ಟೆ ಒದ್ದೆಯಾಯಿತೇನೊ ಎಂದು ನೋಡಿಕೊಂಡೆ. ಒದ್ದೆಯಾಗಿರಲಿಲ್ಲ. ತುಂತುರು ಮೈಮೈಲೆ ಬಿದ್ದರೂ ಏಕೆ ಒದ್ದೆಯಾಗಲಿಲ್ಲ ಎಂದು ಕುತೂಹಲವಾಯಿತು.

ಮುಚ್ಚದ ಬಾಗಿಲನ್ನು ಸಿಬ್ಬಂದಿ ಕೈಯಲ್ಲಿ ಮುಟ್ಟದೇ ಸಣ್ಣ ಉಪಕರಣ ಬಳಸಿ ತೆಗೆದು ಒಳಹೋಗುವಂತೆ ತಿಳಿಸಿದರು. ಒಳ ಹೋದಾಗ ವಿಶಾಲವಾದ ಮಳಿಗೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಕೃಷಿಕೆಲಸಗಳಿಗೆ ಅನುಕೂಲವಾಗುವ ವಿವಿಧ ರೀತಿಯ ಯಂತ್ರೋಪಕರಗಳಿವೆ. ಸಣ್ಣ ರೈತರಿಂದ  ಆರಂಭಿಸಿ ದೊಡ್ಡ ಪ್ರಮಾಣದಲ್ಲಿ ಸಾಗುವಳಿ ಮಾಡುವ ರೈತರುಗಳಿಗೆ ಬೇಕಾದ ಉಪಕರಣಗಳೆಲ್ಲವೂ ಅಲ್ಲಿದ್ದವು. ವಿವಧ ರೀತಿಯ ಸ್ಪ್ರೇಯರ್ ಗಳಿದ್ದವು. ಮುಖಕ್ಕೆ ಮಾಸ್ಕ್ ಧರಿಸಿದ ನುರಿತ ಸಿಬ್ಬಂದಿ ನಿಗದಿತ ಅಂತರದಲ್ಲಿಯೇ ನಿಂತುಕೊಂಡು ರೈತರ ಅಗತ್ಯಗಳೇನು ತಿಳಿದು ಮಾರ್ಗದರ್ಶನ ಮಾಡುತ್ತಿದ್ದರು.

ಮಳಿಗೆಯ ನಿರ್ವಹಣಾಧಿಕಾರಿ ಸುಂದರ್ ಅವರು ಸ್ಪ್ರೇಯರ್ ಬಗ್ಗೆ, ಅವುಗಳ ವೈಶಿಷ್ಟತೆ ಬಗ್ಗೆ ವಿವರಣೆ ನೀಡಿದರು. ಇದರ ಜೊತೆಗೆ ಅಲ್ಲೇ ಇದ್ದ ಸ್ಮಾರ್ಟ್ ಟಿವಿಯಲ್ಲಿ ವಿಡಿಯೋ ಪ್ರಾತ್ಯಕ್ಷಿಕೆ ತೋರಿಸಿದರು. ಬಳಿಕ “ಅಗ್ರಿಮೇಟ್ ಬ್ಯಾಟರಿ ಆಪರೇಟೆಡ್ ಸ್ಪ್ರೇಯರ್” ಖರೀದಿಸಲು ನಿರ್ಧರಿಸಿ ಬೆಲೆ ವಿಚಾರಿಸಿದೆ. ರಿಯಾಯತಿಯೂ ಇದೆ. ಹಣ ನೀಡಿದ ಬಳಿಕ ಬಿಲ್ ನೀಡಿದರು. ಸ್ಪ್ರೇಯರ್ ಕೊಡುವ ಮೊದಲು ಅದರ ನಿರ್ವಹಣೆಯನ್ನು ತೋರಿಸಿದರು. ಪ್ಯಾಕ್ ನಲ್ಲಿರುವ ಉಪಕರಣದ ಸುಸ್ಥಿತಿ ಪರೀಕ್ಷಿಸಿದ ಬಳಿಕವೇ ನೀಡಿದರು. ಇದು ಉತ್ತಮ ಕೆಲಸ. ಇದರಿಂದ ಊರಿಗೆ ಹೋಗಿ ಸರಿಯಿಲ್ಲದಿದ್ದರೆ ದುಪ್ಪಟ್ಟು ಖರ್ಚು ಮಾಡಿಕೊಂಡು ವಾಪ್ಪಸ್ಸು ಬಂದು ಹೋಗುವ ಪ್ರಮೇಯ ತಪ್ಪುತ್ತದೆ.

ಮಳಿಗೆಯಿಂದ ಹೊರಡುವ ಮುನ್ನ ಒಳಬರುವವರ ಬಾಡಿ ಸ್ಯಾನಿಟೈಜ್ ಎಂದಿನಿಂದ ಆರಂಭಿಸಿದಿರಿ ಎಂದು ನಿರ್ವಹಣಾಧಿಕಾರಿ ಸುಂದರ್ ಅವರನ್ನು ಕೇಳಿದೆ. “ಕೊರೊನಾ ಸಾಂಕ್ರಮಿಕ ಪಿಡುಗು ಹರಡದಂತೆ ಮಾಡಲು ಏನೆಲ್ಲ ಮಾಡಬೇಕು ಎಂಬುದನ್ನು ಆರಂಭದಲ್ಲಿಯೇ ತಿಳಿದು ಅಳವಡಿಸಿಕೊಂಡಿದ್ದೇವೆ. ಮಳಿಗೆ ಒಳಗೆ ಬರುವ ಪ್ರತಿಯೊಬ್ಬರೂ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜ್ ಪ್ರಕ್ರಿಯೆಗೆ ಒಳಗಾಗಬೇಕು. ಥರ್ಮಲ್ ಸ್ಕ್ರೀನಿಂಗ್ ಮಾಡಿದಾಗ ನಿಗದಿತ ಉಷ್ಣಾಂಶಕ್ಕಿಂತ ಹೆಚ್ಚಿನ ಉಷ್ಣಾಂಶವಿದ್ದರೆ ಒಳಗೆ ಪ್ರವೇಶ ನೀಡುವುದಿಲ್ಲ. ಇದಕ್ಕೆ ಕಾರಣವನ್ನೂ ವಿವರಿಸಿ ಬಾಡಿ ಉಷ್ಣಾಂಶದ ಮಟ್ಟವನ್ನೂ ಉಪಕರಣದಲ್ಲಿ ತೋರಿಸುತ್ತೇವೆ. ಈ ಕ್ರಮ ಗ್ರಾಹಕರಿಗೆ ಮಾತ್ರವಲ್ಲದೇ ಇಲ್ಲಿನ ಸಿಬ್ಬಂದಿಗೂ ಅನ್ವಯಿಸುತ್ತದೆ ಎಂದು ಸುಂದರ್ ತಿಳಿಸಿದರು.

“ಇನ್ನೊಂದು ಮುಖ್ಯವಾದ ವಿಷಯವೆಂದರೆ ಗುಣಮಟ್ಟದ ಸ್ಯಾನಟೈಜರ್ ಬಳಸುತ್ತೇವೆ. ಜೊತೆಗೆ ಬಟ್ಟೆಯ ಮೇಲೆ ಸ್ಯಾನಿಟೈಜರ್ ಸಿಂಪಡಿಸಲು ವಿಶೇಷವಾದ ಸ್ಪ್ರೇಯರ್ ಬಳಕೆ ಮಾಡುತ್ತಿದ್ದೇವೆ.. ಇದರಿಂದ ತುಂತುರು ಹನಿ ಮೈಮೇಲೆ ಬಿದ್ದರೂ ಬಟ್ಟೆ ಒದ್ದೆಯಾಗುವುದಿಲ್ಲ. ಈ ಎಲ್ಲ ಕ್ರಮಗಳ ಜೊತೆಗೆ ಮಳಿಗೆಯನ್ನೂ ಸ್ಯಾನಿಟೈಜ್ ಮಾಡುತ್ತಿರುತ್ತೇವೆ.ಇದರಿಂದ ಗ್ರಾಹಕರು ಯಾವುದೇ ಆತಂಕವಿಲ್ಲದೇ ಯಾವುದೇ ಉಪಕರಣವನ್ನು ಮುಟ್ಟಿ, ಅದರ ನಿರ್ವಹಣಾ ಕ್ರಮ ತಿಳಿದುಕೊಂಡು ಖರೀದಿ ಮಾಡಬಹುದು. ದೇಶದ ಎಲ್ಲೆಡೆ ಇರುವ ಎಲ್ಲ “ಅಗ್ರಿಮಾರ್ಟ್” ಮಳಿಗೆಗಳಲ್ಲಿಯೂ ಇದೇ ಕ್ರಮ ಅನುಸರಿಸಲಾಗುತ್ತಿದೆ” ಎಂದು ವಿವರಿಸಿದರು.

ಕೃಷಿ ಉಪಕರಣಗಳನ್ನು ಮಾರಾಟ ಮಾಡುವ “ಅಗ್ರಿಮಾರ್ಟ್: ಮಳಿಗೆಯಲ್ಲಿ ರೈತರ ಆರೋಗ್ಯದ ಸುರುಕ್ಷತೆ ಗಮನದಲ್ಲಿಟ್ಟುಕೊಂಡು ಇಷ್ಟೆಲ್ಲ ಮುತುವರ್ಜಿ – ಕಾಳಜಿ ತೋರಿಸುತ್ತಿರುವುದನ್ನು ಪ್ರತ್ಯಕ್ಷ ಅರಿತು ಸಂತೋಷವಾಯಿತು. ಮಳಿಗೆಗೆ ಭೇಟಿ ನೀಡಬೇಕೆನ್ನುವವರು, ಹೆಚ್ಚಿನ ಮಾಹಿತಿ ಅಗತ್ಯವಿರುವವರು ದೂರವಾಣಿ ಕರೆ ಮಾಡಬಹುದು: 080 2698 5001  / Toll Free: 1800 425 3036 (ಬೆಳಗ್ಗೆ 10 ರಿಂದ ಸಂಜೆ 6)

LEAVE A REPLY

Please enter your comment!
Please enter your name here