ವಿದೇಶದ ಈ ಸೊಪ್ಪಿನಷ್ಟೇ ಪೌಷ್ಟಿಕಾಂಶ ಭರಿತ ದೇಸೀ ಸೊಪ್ಪು

0
ಲೇಖಕರು: ಪಲ್ಲವಿ ಇದೂರ್

ಇವತ್ತು ಮಳೆ ಹನಿಯುತ್ತಿದ್ದ ಹಾಗೆಯೇ ಬೆಳ್ಬೆಳಗ್ಗೆ ಮನೆ ಹತ್ತಿರದ ನಾಮಧಾರೀಸ್ ಗೆ ಹೋಗಿ ಈ ಸೊಪ್ಪು ತಂದೆ. ಹೀಗೆ ಸೊಪ್ಪು ತಂದಿದ್ದೆಲ್ಲ ಹೇಳುವವರಲ್ಲ ಇದನ್ಯಾಕೆ ಹೇಳ್ತಿದ್ದಾರೆ ಅಂದುಕೊಂಡಿರಬಹುದು. ಇದಕ್ಕೆ ಕಾರಣವೂ ಇದೆ.

ಈ ಸೊಪ್ಪು ಮೂಲತಃ ಯುರೋಪ್ ಮತ್ತು ಏಶ್ಯಾದ್ದಾದರೂ ಈಗ ಅಮೆರಿಕಾದಲ್ಲಿ ಜಾಸ್ತಿ ಬೆಳೆಯುತ್ತಾರೆ ಮತ್ತು ಉಪಯೋಗಿಸುತ್ತಾರೆ. ಸ್ಕಾಟ್ಲಂಡಿನ ಮನೆಗಳಲ್ಲಿ kale yard ಅಂತಲೇ ಮನೆಹಿತ್ತಲಿಗೆ ಕರೆಯುವಷ್ಟು ಬೆಳೆಯುತ್ತಿದ್ದರಂತೆ.

ಹೆಚ್ಚಾಗಿ ಶೀತ ಪ್ರದೇಶದಲ್ಲಿ ಬೆಳೆಯುವ ಈ ಸೊಪ್ಪು ನಮ್ಮಲ್ಲಿ ಅಕ್ಟೋಬರ್ ನಂತರ ಚಳಿಗಾಲದಲ್ಲಿ ಈಗೀಗ ಅಲ್ಲಲ್ಲಿ ಬೆಳೆಯುತ್ತಾರೆ.  ಈ ಸೊಪ್ಪು ಇಲ್ಲಿ ಸಿಗೋದೇ ಬಹಳ ವಿರಳ. ಇಂಥ ಊರಿಗಿಲ್ಲದ ಸೊಪ್ಪಿನ ಬಗ್ಗೆ ಯಾಕೆ ಹೇಳ್ತಿದೀನಿ ಅಂತ ಯೋಚಿಸ್ತಿದೀರ?  ಇದಕ್ಕೂ ನಮ್ಮಲ್ಲಿ ಧಾರಾಳವಾಗಿ ಸಿಗುವ ಪಾಲಕ್ ಸೊಪ್ಪಿಗೂ ಜಾಸ್ತಿ ವ್ಯತ್ಯಾಸ ಇಲ್ಲ ಅನ್ನೋದನ್ನ ಹೇಳೋದಕ್ಕೆ.

ಈ ಪಾಲಕ್ ಸೊಪ್ಪು amaranth family (Amaranthaceae) ಗೆ ಸೇರಿದರೆ ಕೇಲ್ ನಮ್ಮ ಎಲೆ ಕೋಸಿನಂತೆ cruciferous ತರಕಾರಿಯ ಬಳಗಕ್ಕೆ ಸೇರುತ್ತೆ. ಅದು ಬಿಟ್ಟರೆ ಈ ಎರಡೂ ಸೊಪ್ಪಿನ nutritional values ಹೆಚ್ಚೂ ಕಡಿಮೆ ಒಂದೇ ರೀತಿಯದ್ದಾಗಿದೆ.

ಈಗ ನಾನ್ಯಾಕೆ ಇದೇ ಸೊಪ್ಪು ಹುಡುಕಿ ತರ್ತೀನಿ ಅಂದರೆ ನನಗೆ ಸೊಪ್ಪು ತರಕಾರಿಗಳು ಹಸಿ ತಿನ್ನುವುದು ಅಭ್ಯಾಸ. ಪಾಲಕ್ ಸೊಪ್ಪನ್ನು ಹಸಿ ತಿನ್ನಲು ಹೋದರೆ ಲೋಳೆ ಲೋಳೆ ಅನಿಸುತ್ತೆ ಅದಕ್ಕೆ ಅದನ್ನ ಬೇಯಿಸಲೇ ಬೇಕು. ಆದರೆ ಈ ಕೇಲ್ ಹಾಗೇ ಹಸಿ ತಿನ್ನಬಹುದು ಅನ್ನುವ ಸಣ್ಣ ದುರಾಸೆ.

ಅಂದಹಾಗೆ ಈ ಕೇಲ್ ಎಲ್ಲ ಕಡೆ ಸಿಗದಿರುವುದರಿಂದ ಇದನ್ನ ಹುಡುಕಿಕೊಂಡು ಓಡಾಡಬೇಡಿ. ಮನೆ ಮುಂದೆ ಮಾರಲು ಬರುವ ಸೊಪ್ಪಿನ ಗಾಡಿಯವನೂ ಪಾಲಕ್ ಸೊಪ್ಪು, ಹರಿವೆ ಸೊಪ್ಪು ತರ್ತಾನೆ ಅದನ್ನೇ ಬಹಳಷ್ಟು ಉಪಯೋಗಿಸಿ. ಬೇಯಿಸಿದಾಗ ಅದರ ನ್ಯೂಟ್ರೀಷನಲ್ ವಾಲ್ಯೂ ಕಡಿಮೆ ಆಗುತ್ತೆ ನಿಜ. ಆದರೆ ತಿನ್ನದೇ ಇರುವುದಕ್ಕಿಂತ ಬೇಯಿಸಿಯಾದರೂ ತಿನ್ನುವುದು ಉತ್ತಮ.

ಲೇಖಕರು ಆಹಾರ ಪೌಷ್ಟಿಕಾಂಶ ತಜ್ಞರು ಹಾಗೂ ಸಲಹೆಗಾರರು

LEAVE A REPLY

Please enter your comment!
Please enter your name here