ಕೊರೊನ ಹಿನ್ನೆಲೆಯಲ್ಲಿ  ಗೇರು ಬೆಳೆಯುವ ರೈತರಿಗೆ ಮಾರ್ಗಸೂಚಿ  ಮತ್ತು ಸಲಹೆಗಳು

1. ನಿಗದಿತ ಎಲ್ಲಾ ಸುರಕ್ಷತಾ ಕ್ರಮಗಳನ್ನು ಗಮನಿಸುವುದರ ಮೂಲಕ ಕಾರ್ಮಿಕರಿಗೆ ಕರೋನಾ ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. 2. ತೋಟದಲ್ಲಿ ಕೆಲಸ ಮಾಡುವಾಗ ಮತ್ತು ತೋಟಕ್ಕೆ ಹೋಗುವಾಗ ಮತ್ತು ತೋಟದಿಂದ ಬರುವಾಗ ಮುಖವಾಡಗಳನ್ನು ಬಳಸಿರಿ. 3. ನಿಯಮಿತವಾಗಿ ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಮುಖ, ಮೂಗು, ಬಾಯಿ ಮತ್ತು ಕಣ್ಣುಗಳನ್ನು ಕೈಗಳಿಂದ ಸ್ಪರ್ಶಿಸುವುದನ್ನು ತಪ್ಪಿಸಿ. 5. ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಇತರ ಸಲಹೆಗಳನ್ನು ಅನುಸರಿಸಿ.

0

COVID-19 ಕಾರಣದಿಂದಾಗಿ ಭಾರತದಲ್ಲಿ ವಿಧಿಸಲಾದ ಲಾಕ್ ಡೌನ್ ಅವಧಿಯಲ್ಲಿ ಗೇರು ಬೆಳೆಯುವ ರೈತರಿಗೆ ಮಾರ್ಗಸೂಚಿಗಳು ಮತ್ತು ಸಲಹೆಗಳು ಈ ಮುಂದಿನಂತಿವೆ.  ಸಾಮಾನ್ಯ ಮಾರ್ಗಸೂಚಿಗಳು: 1. ನಿಗದಿತ ಎಲ್ಲಾ ಸುರಕ್ಷತಾ ಕ್ರಮಗಳನ್ನು ಗಮನಿಸುವುದರ ಮೂಲಕ ಕಾರ್ಮಿಕರಿಗೆ ಕರೋನಾ ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. 2. ತೋಟದಲ್ಲಿ ಕೆಲಸ ಮಾಡುವಾಗ ಮತ್ತು ತೋಟಕ್ಕೆ ಹೋಗುವಾಗ ಮತ್ತು ತೋಟದಿಂದ ಬರುವಾಗ ಮುಖವಾಡಗಳನ್ನು ಬಳಸಿರಿ. 3. ನಿಯಮಿತವಾಗಿ ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಮುಖ, ಮೂಗು, ಬಾಯಿ ಮತ್ತು ಕಣ್ಣುಗಳನ್ನು ಕೈಗಳಿಂದ ಸ್ಪರ್ಶಿಸುವುದನ್ನು ತಪ್ಪಿಸಿ. 5. ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಇತರ ಸಲಹೆಗಳನ್ನು ಅನುಸರಿಸಿ.

ಬೀಜಗಳು / ಗೇರು ಹಣ್ಣಿನ ಸಂಗ್ರಹ:  ಲಾಕ್‌ಡೌನ್ ಅವಧಿಯಲ್ಲಿ ಗೇರು ಬೀಜ ಮತ್ತು ಹಣ್ಣಿನ ಸಂಗ್ರಹ ನಡೆಯುತ್ತಿದೆ. 1. ನಿಮ್ಮ ಗೇರು ತೋಟದ ಕೆಲಸಕ್ಕೆ ಕೂಲಂಕುಷವಾಗಿ ವಿಚಾರಿಸಿ, ಆರೋಗ್ಯವಂತ ವ್ಯಕ್ತಿಗಳನ್ನು ಮಾತ್ರ ತೊಡಗಿಸಿಕೊಳ್ಳಿ. 2. ಗೇರು ಬೀಜ ಮತ್ತು ಹಣ್ಣುಗಳನ್ನು ಆರಿಸುವಾಗ ವ್ಯಕ್ತಿಗಳ ನಡುವೆ ಕನಿಷ್ಠ 4-5 ಅಡಿ ಅಂತರವನ್ನು ಕಾಯ್ದುಕೊಳ್ಳುವುದು. 3. ಗೇರು ಹಣ್ಣಿನಿಂದ ಬೀಜಗಳನ್ನು ತೆಗೆದುಹಾಕುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಮುಖವಾಡಗಳ ಬಳಕೆಯನ್ನು ಮಾಡಿ.  4. ಸಂಗ್ರಹಿಸಿದ ಬೀಜಗಳನ್ನು ನೀರು ಸುರಿಯುವುದರ ಮೂಲಕ ತೊಳೆಯಿರಿ ಮತ್ತು ತೆರೆದ ಸೂರ್ಯನ ಬೆಳಕಿನಲ್ಲಿ 3-4 ದಿನಗಳವರೆಗೆ ಒಣಗಿಸಿ ಮತ್ತು ನಂತರದ ಹಂತದಲ್ಲಿ ಅದರ ಮಾರಾಟಕ್ಕಾಗಿ ಚೆನ್ನಾಗಿ ಗಾಳಿ ಇರುವ ಒಣ ಕೋಣೆಗಳಲ್ಲಿ ಗೋಣಿ ಚೀಲಗಳಲ್ಲಿ ಸಂಗ್ರಹಿಸಿ. 5. ಮಾರುಕಟ್ಟೆಗೆ ಭೇಟಿ ನೀಡುವಾಗ ಪ್ರಮಾಣಿತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ನರ್ಸರಿ ಕಾರ್ಯಾಚರಣೆಗಳು: ಮೇಲೆ ವಿವರಿಸಿದಂತೆ ಕರೋನಾ ಹರಡುವಿಕೆಯ ವಿರುದ್ಧ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನರ್ಸರಿ ಪ್ಯಾಕೆಟ್ಟುಗಳನ್ನು ತುಂಬುವ ಹಾಗೂ ಬೀಜಗಳನ್ನು ಬಿತ್ತನೆ ಮಾಡುವಂತಹ ಕಾರ್ಯಾಚರಣೆಗಳನ್ನು ಪ್ರಾರಂಭಿಸಬಹುದು.

ಸವರುವಿಕೆ: ಮುಂಚೆ ಹೂಬರುವ ತಳಿಗಳಲ್ಲಿ, ಹೆಚ್ಚು ಆರೋಗ್ಯಕರ ಕಸಿ ಕಡ್ಡಿಗಳ ಉತ್ಪಾದನೆಗಾಗಿ ಸವರುವಿಕೆಯನ್ನು ವಿಶೇಷವಾಗಿ ಸಯಾನ್ ಬ್ಯಾಂಕುಗಳಲ್ಲಿ ಮಾಡಬಹುದು.

ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು

LEAVE A REPLY

Please enter your comment!
Please enter your name here