ಜೈವಿಕ ವಿಧಾನ ಬಳಸಿ ಕೀಟ ನಿಯಂತ್ರಿಸಿ !!

1

ಜೈವಿಕ ನಿಯಂತ್ರಣ ವಿಧಾನ

ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕಾದರೆ ನಾಟಿ/ಬಿತ್ತನೆ ಹಂತದಿಂದಲೇ ಜಾಗರೂಕತೆ ವಹಿಸಬೇಕು. ಕೀಟ-ನೊಣಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜೈವಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಬೇಕು. ಹೀಗೆ ಮಾಡುವುದರಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಗುಣಮಟ್ಟದ ಫಸಲು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ನೀಲಿ ಬಣ್ಣದ ಜಿಗುಟಾದ ಹಾಳೆಗಳು, ಹಳದಿ ಬಣ್ಣದ ಅಂಟು ಬಲೆಗಳು ಸಹಾಯಕ. ಹಣ್ಣಿನ ನೊಣಗಳನ್ನು ಮತ್ತು ತರಕಾರಿ ನೊಣಗಳನ್ನು ಹಿಡಿಯಲು ಅತ್ಯಾಧುನಿಕ ಫೆರೊಮೊನ್ ಟ್ರಾಪ್ಗಳು, ಲ್ಯೂರ್ಗಳು ಉಪಯುಕ್ತ.

ಮಣ್ಣಿನ ಆರೋಗ್ಯ:

ರಾಸಾಯನಿಕ ಕೀಟನಾಶಕಗಳು ದುಬಾರಿ. ಇವುಗಳನ್ನು ಬಳಕೆ ಮಾಡುವುದರಿಂದ ನಾನಾ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ. ಪರಿಸರ ಮಾಲಿನ್ಯ ಉಂಟು ಮಾಡುತ್ತವೆ. ಬೆಳೆಗಳ ಗುಣಮಟ್ಟ ಕುಸಿಯುತ್ತದೆ. ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸುವುದರಿಂದ ಅಂತರ್ಜಲದ ಮೇಲೆಯೂ ದುಷ್ಪರಿಣಾಮಗಳು ಆಗುತ್ತವೆ. ಮಣ್ಣಿನ ಆರೋಗ್ಯವೂ ಹದಗೆಡುತ್ತದೆ.

ರೈತನ ಆರೋಗ್ಯ:

ಇವೆಲ್ಲದರ ಜೊತೆಗೆ ಅನ್ನದಾತನಾದ ರೈತನ ಆರೋಗ್ಯವೇ ಹಾಳಾಗುತ್ತದೆ. ಉಗ್ರವಾದ ಕೀಟನಾಶಕಗಳನ್ನು ಸರಿಯಾಗಿ ಬಳಸದಿದ್ದ ಸಂದರ್ಭದಲ್ಲಿ ಸಾವು ಸಂಭವಿಸುತ್ತದೆ. ಇಂಥ ಎಲ್ಲ ಹಾನಿಗಳನ್ನು ನೀಲಿ ಬಣ್ಣದ ಜಿಗುಟಾದ ಹಾಳೆಗಳು, ಹಳದಿ, ಬಿಳಿ ಬಣ್ಣದ ಅಂಟು ಬಲೆಗಳನ್ನು ಅಳವಡಿಸುವುದರಿಂದ ತಪ್ಪಿಸಬಹುದು. ಹೀಗೆ ಸಹಜವಾಗಿ ರೈತನ ಖರ್ಚು ಕಡಿಮೆ ಆಗುತ್ತದೆ. ಲಾಭಾಂಶ ಹೆಚ್ಚುತ್ತದೆ.

ನೀಲಿ ಬಣ್ಣದ ಜಿಗುಟಾದ ಹಾಳೆಗಳು:

ಬೆಳೆಯನ್ನು ಬಾಧಿಸುವ ಕೀಟಗಳಲ್ಲಿ ಬೇರೆಬೇರೆ ವಿಧಗಳಿವೆ. ಇವುಗಳಲ್ಲಿ ಹಾರಾಡುವ ಕೀಟಗಳನ್ನು ಹಿಡಿಯಲು ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯಕ. ಸುಧಾರಿತ ತಂತ್ರಜ್ಞಾನದಿಂದ ರೂಪಿಸಲಾಗಿರುವ ಈ ಜಿಗುಟಾದ ಹಾಳೆಗಳು, ಹಾರಾಡುವ ಕೀಟಗಳಿಗೆ ಚಿಗುರೊಡೆಯುತ್ತಿರುವ ಎಲೆಗಳ ಗೊಂಚಲಿನಂತೆ ಗೋಚರಿಸುತ್ತವೆ. ಇದರಿಂದ ಕೀಟಗಳು ಇತ್ತ ಆಕರ್ಷಿತವಾಗುತ್ತವೆ.

ಹಾಳೆಗಳ ಮೇಲೆ ಕುಳಿತುಕೊಂಡ ತಕ್ಷಣ ಅದರಲ್ಲಿರುವ ಜಿಗುಟಾದ ಅಂಶದಿಂದ ಅಲ್ಲಿಯೇ ಅಂಟಿಕೊಳ್ಳುತ್ತವೆ. ಕ್ರಮೇಣ ಹೀಗೆ ಹಾಳೆಗಳಿಗೆ ಸಿಲುಕಿಕೊಳ್ಳುವ ಕೀಟಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಬೆಳೆ ಸುರಕ್ಷಿತವಾಗಿರುತ್ತದೆ. ಇವುಗಳನ್ನು ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯಲಾಗುತ್ತದೆ

ಬಾಧೆ ನೀಡುವ ಕೀಟಗಳು:

ಗಿಡಹೇನುಗಳು, ಬಿಳಿನೊಣ, ಜಸ್ಸಿಡ್ಗಳು, ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು ಬ್ಯಾರಿಕ್ಸ್ ಕೀಟ ನಿಯಂತ್ರಣ ಸಾಧನಗಳಿಂದ ಪರಿಣಾಮಕಾರಿಯಾಗಿ ನಿಯಂತ್ರಿತವಾಗುತ್ತವೆ.

ಬಳಸುವ ಕ್ಷೇತ್ರ:

ಆಹಾರ ಧಾನ್ಯಗಳ ಬೆಳೆಗಳು, ತೋಟಗಾರಿಕೆ ಬೆಳೆಗಳು ಅಂದರೆ ಹಣ್ಣುಗಳು-ತರಕಾರಿಗಳು, ಒಳಾಂಗಣದಲ್ಲಿ ಬೆಳೆಯುವ ಅಣಬೆಗಳು, ಇತ್ಯಾದಿ ಎಲ್ಲ ಕೃಷಿ ಉತ್ಪನ್ನಗಳನ್ನು ಕೀಟಗಳಿಂದ ಸಂರಕ್ಷಿಸಲು ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯ ಮಾಡುತ್ತವೆ. ಹಸಿರು ಮನೆಗಳ ನಿರ್ವಹಣೆ ದುಬಾರಿ. ಇಂಥ ಸಂದರ್ಭದಲ್ಲಿ ಹಾನಿಕಾರಕ ಕೀಟಗಳನ್ನು ನಿಯಂತ್ರಿಸದೇ ಇದ್ದರೆ ಅಲ್ಲಿರುವ ತೋಟಗಾರಿಕೆ ಬೆಳೆ ಹಾಳಾಗುತ್ತದೆ. ಇದನ್ನು ತಡೆಗಟ್ಟಲು ಸಹ ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯ ಮಾಡುತ್ತವೆ.

ಬಳಸುವ ವಿಧಾನ:

ಹಸಿರು ಮನೆಗಳಲ್ಲಿ ನೀಲಿಬಣ್ಣದ ಹಾಗೂ ಹಳದಿ ಬಣ್ಣದ ಜಿಗುಟಾದ ಹಾಳೆಗಳನ್ನು ಪ್ರವೇಶ ದ್ವಾರದ ಬಳಿ, ಕಿಟಕಿಗಳಲ್ಲಿ ತೂಗು ಹಾಕಬಹುದು. ಇದರಿಂದ ಒಳನುಸುಳುವ ಕೀಟಗಳು ಆರಂಭದಲ್ಲಿಯೇ ಇತ್ತ ಆಕರ್ಷಿತವಾಗಿ ಸಿಲುಕಿಕೊಳ್ಳುತ್ತವೆ. ಧಾನ್ಯಗಳ ಬೆಳೆ ಇರುವ ಹೊಲ-ಗದ್ದೆಗಳಲ್ಲಿ ತೆನೆಗಳಿಗಿಂತ ತುಸು ಹೆಚ್ಚು ಎತ್ತರದಲ್ಲಿ ಕಟ್ಟಬೇಕು. ಬೆಳೆ ಎತ್ತರವಾದಂತೆ ಹಾಳೆಗಳನ್ನು ಅವುಗಳಿಗಿಂತ ಸ್ವಲ್ಪ ಎತ್ತರದಲ್ಲಿ ಕಟ್ಟಬೇಕು. ಮುಖ್ಯವಾಗಿ ಹಾಳೆಗಳ ಮೇಲೆ ಬೆಳಕು ಚೆನ್ನಾಗಿ ಬೀಳಬೇಕು. ಅಣಬೆಗಳನ್ನು ಬೆಳೆಯುತ್ತಿರುವ ಜಾಗದಲ್ಲಿ ಹಾಳೆಗಳನ್ನು ಬೆಂಚುಗಳ ಮೇಲೆ ಅಡ್ಡಲಾಗಿ ಇಡಬಹುದು. ತ್ರಿಪ್ಸ್, ಎಲೆಕೋಸು ಕಾಂಡದ ಹುಳು, ಎಲೆ ಕೊರೆಯುವ ಹುಳುಗಳ ಬಾಧೆ ಬಗ್ಗೆ ಆರಂಭದಲ್ಲಿಯೇ ತಿಳಿಯಬಹುದು ಜೊತೆಗೆ ತ್ವರಿತ ಗತಿಯಲ್ಲಿ ಬಾಧೆ ನೀಡುವ ಕೀಟಗಳ ನಿಯಂತ್ರಣವೂ ಸಾಧ್ಯವಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಬ್ಯಾರಿಕ್ಸ್ ಸಂಸ್ಥೆ

ಮೊಬೈಲ್: 9900800033

1 COMMENT

LEAVE A REPLY

Please enter your comment!
Please enter your name here