ಕರ್ನಾಟಕ ದ್ರಾಕ್ಷಿ, ವೈನ್ ಬೋರ್ಡಿನಿಂದ ಬೆಳೆಗಾರರಿಗೆ ನೆರವೇನು ?

0

ಪ್ರತಿಯೊಂದು ಬೆಳೆಯ ಬೆಳೆಗಾರರಿಗೂ ಅಗತ್ಯವಿದ್ದಾಗ ಸರ್ಕಾರದ ನೆರವು ದೊರೆಯುವುದು ಅಗತ್ಯ. ಈ ದಿಶೆಯಲ್ಲಿ ವಾಣಿಜ್ಯ ಬೆಳೆಗಳಿಗಂತೂ ಸಕಾಲದ ನೆರವು ಅವಶ್ಯಕ. ಇದನ್ನು ಮನಗಂಡ ಕರ್ನಾಟಕ ರಾಜ್ಯ ಸರ್ಕಾರ, ವೈನ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ಮಂಡಳಿಯನ್ನು “ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್” ಎಂದು ಮರು ನಾಮಕಾರಣ ಮಾಡಿದೆ.

ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ.

ಹೆಸರಷ್ಟೇ ಬದಲಾಗದೇ ಅದರ ಕಾರ್ಯ ವ್ಯಾಪ್ತಿಯೂ ವಿಸ್ತರಿಸಿದೆ. ದ್ರಾಕ್ಷಿ ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ. ಅವರು ಹೇಳುತ್ತಾರೆ. ಇವರು ಈ ಮೊದಲಿನ ವೈನ್ ಬೋರ್ಡಿನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ರಾಜ್ಯದಲ್ಲಿ ವೈನ್ ಬಗ್ಗೆ ಇದ್ದ ತಪ್ಪು ಗ್ರಹಿಕೆಗಳನ್ನು ನಿವಾರಿಸಿ ಜನಪ್ರಿಯಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂಬುದು ಗಮನಾರ್ಹ.
ದ್ರಾಕ್ಷಿ ಬೆಳೆಗಾರರಿಗೆ ದೊರೆಯುವ ನೆರವು:
1. ದ್ರಾಕ್ಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಲು ದ್ರಾಕ್ಷಿ ಸುಧಾರಿತ – ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವುದು
2. ದ್ರಾಕ್ಷಿ ಮತ್ತು ದ್ರಾಕ್ಷಿ ಉತ್ಪನ್ನಗಳ ಸಂಸ್ಮರಣೆ, ಮೌಲ್ಯವರ್ಧನೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಂತಹ ಸುಗ್ಗಿಯ ನಂತರದ ನಿರ್ವಹಣಾ ಸೇವೆಗಳನ್ನು ಉತ್ತೇಜಿಸುವುದು.
3. ವೈನ್ ದ್ರಾಕ್ಷಿ ಬೆಳೆಗಾರರು, ವೈನ್ ಸಂಸ್ಕರಣಾ ಉದ್ಯಮ, ರಾಜ್ಯ ಸರ್ಕಾರವು ಕರ್ನಾಟಕ ವೈನ್ ವಲಯಕ್ಕೆ ಸಂಬಂಧಿಸಿದ ವಾಣಿಜ್ಯ ನಿಯಂತ್ರಣ ರೂಪಿಸಲು ಮತ್ತು ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಸಹಯೋಗ ಮತ್ತು ಸಲಹೆ ನೀಡುವುದು,
4. ದ್ರಾಕ್ಷಿ ಕೃಷಿಯಲ್ಲಿ ಉತ್ತಮ ಅಭ್ಯಾಸಗಳು ಸೇರಿದಂತೆ ಉದ್ಯಮ ಮತ್ತು ಇತರ ಪಾಲುದಾರರ ಬಳಕೆಗಾಗಿ ಪರಿಣಾಮಕಾರಿ ಮಾರುಕಟ್ಟೆ ಅಂಕಿಅಂಶ ಸೇವೆ ಅಭಿವೃದ್ಧಿಪಡಿಸುವುದು ಜೊತೆಗೆ ಈ ಅಂಕಿಅಂಶ ಲಭ್ಯವಾಗುವಂತೆ ಮಾಡುವುದು
5. ಪಾಲುದಾರರೊಂದಿಗೆ ಸಂಶೋಧನಾ ಸಾಧನೆಗಳನ್ನು ಪರಿಣಾಮಕಾರಿಯಾಗಿ ಸಂಯೋಜಿಸಲು ಸಂಶೋಧನಾ ಉತ್ಪನ್ನಗಳನ್ನು ಪ್ರದರ್ಶಿಸುವುದು.
6. ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರಿಂದ ದ್ರಾಕ್ಷಿ ಸಂಸ್ಕರಣೆಯಲ್ಲಿ ಅತ್ಯಾಧುನಿಕ ಮೂಲಸೌಕರ್ಯದ ಮಾದರಿಗಳನ್ನು ಪ್ರದರ್ಶಿಸಲು ನಿಬಂಧನೆಗಳನ್ನು ರೂಪಿಸುವುದು.
7. ದ್ರಾಕ್ಷಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಾದ ಒಣದ್ರಾಕ್ಷಿ ಮತ್ತು ವೈನ್ ಅನ್ನು ಜನಪ್ರಿಯಗೊಳಿಸಲು ಉದ್ಯಮ ಪ್ರಚಾರ ಚಟುವಟಿಕೆಗಳನ್ನ ಆಯೋಜಿಸುವುದು, ವಿದೇಶಿ ವಿನಿಮಯವನ್ನು ಹೆಚ್ಚಿಸುವುದು.
8. ಯೋಜನೆಗಳು ಮತ್ತು ಸಂಬಂಧಿತ ಚಟುವಟಿಕೆಗಳನ್ನು ರೂಪಿಸಲು ಸಂಘಟಿಸಲು, ಕಾರ್ಯಗತಗೊಳಿಸಲು ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ಮಾಡುವುದು.
9. ತಂತ್ರಜ್ಞಾನದ ವರ್ಗಾವಣೆಗಾಗಿ ತರಬೇತಿಗಳನ್ನು ಆಯೋಜಿಸುವುದು, ಉತ್ಪಾದಕರು ಮಾರಾಟಗಾರರು. ಮತ್ತು ರಫ್ತುದಾರರಿಗೆ ಮಾರುಕಟ್ಟೆ ಮತ್ತು ವ್ಯಾಪಾರ ಮಾಹಿತಿಯನ್ನು ಒದಗಿಸುವುದು
10. ಉತ್ತಮ ಕೃಷಿ ಪದ್ಧತಿಗಳನ್ನು ಪ್ರದರ್ಶಿಸುವುದು.
11. ರೈತರನ್ನು ಸಂಘಟಿಸಲು ಮತ್ತು ರಾಜ್ಯ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು/ ಕಾರ್ಯಕ್ರಮಗಳು ಲಭ್ಯವಾಗುವಂತೆ ಮಾಡಲು ರಾಜ್ಯದ ಎಲ್ಲ ಪ್ರಮುಖ ದ್ರಾಕ್ಷಿ ಬೆಳೆಯುವ ಜಿಲ್ಲೆಗಳು, ತಾಲೂಕುಗಳಲ್ಲಿ ದ್ರಾಕ್ಷಿ ಬೆಳೆಗಾರರ ಸಂಘಗಳು, ಸಮಾಜಗಳು/ರೈತ ಉತ್ಪಾದಕರ ಸಂಸ್ಥೆಗಳಿಗೆ (FPO) .ಸಹಾಯ ಮಾಡುವುದು.
12. ದ್ರಾಕ್ಷಿ ಮತ್ತು ಎಲ್ಲ ಹಣ್ಣು ಆಧಾರಿತ ವೈನ್ಗಳಿಗೆ ಸಂಬಂಧಿಸಿದ ಪುದರ್ಶನಗಳು, ವ್ಯಾಪಾರ ಮೇಳಗಳು, ಸಮಿನಾರ್ಗಳು, ಶಿಕ್ಷಣ ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು ಇತ್ಯಾದಿ ಉದ್ಯಮ ಪ್ರಚಾರ ಚಟುವಟಿಕೆಗಳನ್ನು ಆಯೋಜಿಸುವುದು / ನಡೆಸುವುದು.
13. ಸರ್ಕಾರ, ಸರ್ಕಾರಿ ಸಂಸ್ಥೆಗಳು, ಹಣಕಾಸು ಸಂಖ್ಯೆಗಳು, ಸಂಶೋಧನಾ ಸಂಸ್ಥೆಗಳು, ರಾಜ್ಯ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳು, ಎನ್ಜಿಒಗಳು, ರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳು, ಕೆಎಚ್ ಎಫ್, ಜಿಲ್ಲಾ, ಹಾಪ್ಕಾಮ್ ಗಳಂತಹ ರಾಜ ಮಾರುಕಟ್ಟೆ ಸಂಸ್ಥೆಗಳು ಮತ್ತು ಸಮಾನವಾಗಿ ಸಂಘಟಿಸಲು ಮತ್ತು ಸಹಯೋಗಿಸಲು ರಾಜ್ಯದಲ್ಲಿ ದಾಕ್ಷಿ ಸಂಶೋಧನೆ, ಅಭಿವೃದ್ಧಿ ವಿಸ್ತರಣೆ ಮತ್ತು ಪ್ರಚಾರ ಮಾಡುವುದು.
14. ದ್ರಾಕ್ಷಿ ರೈತರು, ಉದ್ಯಮಿಗಳು ಮತ್ತು ಅಧಿಕಾರಿಗಳಿಗೆ ಮಾನ್ಯತೆ ಭೇಟಿಗಳು ಮತ್ತು ಅಧ್ಯಯನ ಪ್ರವಾಸಗಳನ್ನು ಆಯೋಜಿಸಲು, ಪ್ರೋತ್ಸಾಹಿಸುವಿಕೆ ಮತ್ತು ಬೆಂಬಲ.
15. ದ್ರಾಕ್ಷಿ, ವೈನ್ ಪ್ರವಾಸೋದ್ಯಮವನ್ನು ಉತ್ತೇಜಿಸುವುದು.
16. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹಣ್ಣು ಆಧಾರಿತ ವೈನ್ಗಳನ್ನು ಉತ್ತೇಜಿಸುವುದು.
17. ದ್ರಾಕ್ಷಿ / ವೈನ್ ಹೊಸ ಪ್ರಭೇದಗಳು ಮೂಲ ದಾಸ್ತಾನುಗಳು, ತದ್ರೂಪುಗಳನ್ನು ಪರಿಚಯಿಸುವುದು
18. ಮೈನ್ ನೀತಿ 2007 ರಲ್ಲಿ ವಿವರಿಸಿದ ಕ್ರಿಯಾ ಯೋಜನೆ ಮತ್ತು ಮಾರ್ಗಸೂಚಿಗಳನ್ನು ರೂಪಿಸುವಿಕೆ ಮತ್ತು ಕಾರ್ಯಗತಗೊಳಿಸುವಿಕೆ

ಕರ್ನಾಟಕದ ದ್ರಾಕ್ಷಿ ಗುಣಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗುವಂತೆ ಮಾಡುವುದು, ಇಲ್ಲಿಯ ಗುಣಮಟ್ಟದ ವೈನ್ ಗಳು ಎಲ್ಲೆಡೆ ಜನಪ್ರಿಯಗೊಳ್ಳುವಂತೆ ಮಾಡುವುದು ಸಹ ಮಂಡಳಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ. ಅವರು ರಾಜ್ಯದ ಹಲವೆಡೆ ಮೇಳಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ. 2020ರಿಂದ ಎರಡು ವರ್ಷಗಳ ಅವಧಿ ತನ್ನ ಕೆಟ್ಟ ಪರಿಣಾಮವನ್ನು ಬೀರಿದ ಕೊರೊನಾ ಕಾರಣದಿಂದ ಮಂಡಳಿ ಚಟುವಟಿಕೆಗಳಿಗೆ ಕೊಂಚ ಹಿನ್ನಡೆಯಾಗಿತ್ತು. ಈಗ ಮಂಡಳಿ ಮತ್ತೆ ಗರಿಗೆದರಿ ನಿಂತಿದೆ. ದ್ರಾಕ್ಷಿ ಬೆಳೆಗಾರರು, ವೈನ್ ಉದ್ಯಮಿಗಳಿಗೆ ಅಗತ್ಯವಿರುವ ನೆರವು ನೀಡಲು ಸಜ್ಜಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್
ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಮೀಪ
ಕಬ್ಬನ್ ಪಾರ್ಕ್, ಬೆಂಗಳೂರು

LEAVE A REPLY

Please enter your comment!
Please enter your name here