ಬಿತ್ತನೆಬೀಜಕ್ಕೆ ಏಕರೂಪ ಬೆಲೆ ನಿಗದಿ

ಲಾಕ್ಡೌನ್ ಸಮಯದಲ್ಲಿ ಜನಪ್ರತಿನಿಧಿಗಳು ಇನ್ನಷ್ಟು ಸಮರ್ಪಕವಾಗಿ ಜನರಿಗಾಗಿ ದುಡಿಯಬೇಕು. ಕೊರೊನಾ ಜಗತ್ತಿಗೆ ಬಂದಂತಹ ಸಂಕಟ. ಈಗಿನ ಸಂದರ್ಭ, ಜೀವನದ ಪ್ರಶ್ನೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಚಟುವಟಿಕೆ ಸ್ಥಗಿತಗೊಂಡಿದ್ದರೂ ಕೃಷಿ ಚಟುವಟಿಕೆ ಸ್ಥಗಿತಗೊಂಡಿಲ್ಲ ರಾಜ್ಯದ ಯಾವುದೇ ಭಾಗದಲ್ಲಿಯೂ ಬಿತ್ತನೆಬೀ - ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಎಂದು ಅವರು ಸ್ಪಷ್ಟಪಡಿಸಿದರು.

0

ಕಾರವಾರ,ಮೇ. 4: ಮುಂದಿನ ವರ್ಷದಿಂದ ಅತ್ಯವಶ್ಯಕ ಬಿತ್ತನೆಬೀಜಗಳಿಗೆ ರಾಜ್ಯಸರ್ಕಾರವೇ ಬೆಲೆ ನಿಗದಿಪಡಿಸಲಿದೆ. ರಾಜ್ಯದ್ಯಂತ ಏಕರೂಪ ಬೆಲೆ ಜಾರಿಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕೋವಿಡ್-೧೯ ಸಾಂಕ್ರಾಮಿಕ ಲಾಕ್ಡೌನ್ ಹಿನ್ನಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ನಡೆಸಿದ ಕೃಷಿ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಫಸಲ್ ಭೀಮಾ ಯೋಜನೆಯದ್ದು ಸಮಸ್ಯೆಯಾಗಿದೆ. ಇದಕ್ಕಾಗಿ ಹೊಸ ತಂತ್ರಾಂಶ ಅಳವಡಿಕೆ ಜಾರಿಯಲ್ಲಿದೆ. ಕಂತು ಕಟ್ಟಿದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ವಿಮೆ ಬರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು. ಯಾವುದೇ ಕಂಪೆನಿಯ ಬಿತ್ತನೆಬೀಜವಾಗಲಿ ರಿಜಿಸ್ಟರ್ ಆಗಬೇಕು. ಐಸಿಸಿಎಯಲ್ಲಿ ರಿಜಿಸ್ಟರ್ ಆದ ಬಿತ್ತನೆಬೀಜ- ರಸಗೊಬ್ಬರವನ್ನು ಮಾತ್ರವೇ ಮಾರಾಟ ಮಾಡಬೇಕು. ಅಕ್ರಮ ಕಳಪೆ ಗುಣಮಟ್ಟ ರಹಿತ ಬೀಜ ಪತ್ತೆ ಮಾಡಿ ರೈತರಿಗೆ ಉಪಯೋಗಕಾರಿ ಕೆಲಸ ಮಾಡುವುದು ಕೃಷಿ ಇಲಾಖೆ ಕರ್ತವ್ಯ ಎಂದರು.
ಲಾಕ್ಡೌನ್ ಸಮಯದಲ್ಲಿ ಜನಪ್ರತಿನಿಧಿಗಳು ಇನ್ನಷ್ಟು ಸಮರ್ಪಕವಾಗಿ ಜನರಿಗಾಗಿ ದುಡಿಯಬೇಕು. ಕೊರೊನಾ ಜಗತ್ತಿಗೆ ಬಂದಂತಹ ಸಂಕಟ. ಈಗಿನ ಸಂದರ್ಭ, ಜೀವನದ ಪ್ರಶ್ನೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಚಟುವಟಿಕೆ ಸ್ಥಗಿತಗೊಂಡಿದ್ದರೂ ಕೃಷಿ ಚಟುವಟಿಕೆ ಸ್ಥಗಿತಗೊಂಡಿಲ್ಲ ರಾಜ್ಯದ ಯಾವುದೇ ಭಾಗದಲ್ಲಿಯೂ ಬಿತ್ತನೆಬೀ – ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಎಂದು ಅವರು ಸ್ಪಷ್ಟಪಡಿಸಿದರು.
ಕಾರವಾರ ಜಿಲ್ಲೆಯ ತೋಟಗಾರಿಕಾ, ಕೃಷಿ ಇಲಾಖೆಗಳ ಕಾರ್ಯವೈಖರಿ ಬಗ್ಗೆ ತಿಳಿಯಲು ಭೇಟಿ ನೀಡಿರುವುದಾಗಿ ತಿಳಿಸಿದ ಸಚಿವರು, ಚಿಕ್ಕವನಿದ್ದಾಗ ಅಡಿಕೆ ಮಾರಲು ಶಿರಸಿಗೆ ಬರುತ್ತಿದ್ದ ದಿನಗಳನ್ನು ಸ್ಮರಿಸಿದರು. ಅಡಿಕೆ ಮಾರುಕಟ್ಟೆ ಬಹಳ ದೊಡ್ಡದು. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಕ್ಷೇತ್ರವಿದು. ನಾವೆಲ್ಲ ಸರ್ಕಾರ ಉತ್ತಮವಾಗಿ ನಡೆಯಲು ದುಡಿಯುತ್ತಿದ್ದೇವೆ. ತಮ್ಮೊಂದಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಹ ಶ್ರಮಿಸುತ್ತಿದ್ದಾರೆ ಎಂದರು.

 

ಕೋವಿಡ್-೧೯ ಲಾಕ್ಡೌನ್ ಘೋಷಣೆ ಬಳಿಕ ಕೃಷಿ ಚಟುವಟಿಕೆ ನಿಂತುಹೋಗಿತ್ತು.ವಿಶೇಷವಾಗಿ ಹಣ್ಣುಹಂಪಲು,ತರಕಾರಿ ಕೊಳೆತು ಹೋಗುತ್ತಿತ್ತು.ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ರೈತರ ಚಟುವಟಿಕೆಗೆ ಹಸಿರು ನಿಶಾನೆ ತೋರಿದರು.ಏಪ್ರಿಲ್ 6ರಿಂದ ಜಿಲ್ಲಾ ಪ್ರವಾಸ ಆರಂಭಿಸಿದ್ದು, ಕಾರವಾರ 27ನೇ ಜಿಲ್ಲೆಯಾಗಿದೆ. ಕೃಷಿ ಜಂಟಿ ನಿರ್ದೇಶಕರು ಬಿತ್ತನೆ ಬೀಜ,ಗೊಬ್ಬರ, ಪೂರೈಕೆ ದಾಸ್ತಾನು ಬಗ್ಗೆ ಹಾಗೂ ಮುಂಗಾರು ಬಿತ್ತನೆಗೆ ಇಲಾಖೆ ಹೇಗೆ ಸಜ್ಜಾಗಿದೆ ಎಂದು ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಿದರು.
ಶಿವರಾಮ್ ಹೆಬ್ಬಾರ್ ಮಾತನಾಡಿ,ಮಂತ್ರಿಮಂಡಲದಲ್ಲಿ ಕೋವಿಡ್ ಸಮಯದಲ್ಲಿ ರಾಜ್ಯದ್ಯಂತ ಅತಿ ಹೆಚ್ಚು ಜಿಲ್ಲಾ ಪ್ರವಾಸ ಮಾಡಿದ ಸಚಿವರೆಂದರೆ ಅದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತ್ರ.ಇದಕ್ಕಾಗಿ ಕೃಷಿ ಸಚಿವರು ಶ್ಲಾಘನೆಗೆ ಅರ್ಹರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆ ಹಲವಾರು ಯೋಜನೆಗಳಿಗೆ ತ್ಯಾಗ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ. ಕೃಷಿಯಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.


ನಮ್ಮಲ್ಲಿರುವ ಸಮಸ್ಯೆ ಏನು ನಮಗೇನು ಬೇಕು ಎಂಬುದನ್ನು ಸಚಿವರ ಗಮನಕ್ಕೆ ತರಬೇಕು.ಯಾವುದು ಹಾನಿಯಾಗಿದೆ ಕೊರತೆಯೇನಿದೆ ಎನ್ನುವುದನ್ನು ವಿವರಿಸಬೇಕು.ಸರ್ಕಾರದ ಆದ್ಯತೆಗಳ ಬಗ್ಗೆ ಅಧಿಕಾರಿಗಳು ಆದ್ಯತೆ ಕೊಡಬೇಕು.ಉತ್ತರಕನ್ನಡ ಮಲೆನಾಡು, ಅರೆಮಲೆನಾಡು ಕರಾವಳಿ ಈ ಮೂರು ಭಿನ್ನ ಪ್ರದೇಶ ಹೊಂದಿರುವ ವಿಶಿಷ್ಟ ಜಿಲ್ಲೆ ಕಾರವಾರ.ಹಳಿಯಾಳ ಬನವಾಸಿ ಮುಂಡಗೋಡದಲ್ಲಿನ ಹಾನಿ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ಸರಿಯಾಗಿ ತಂದಲ್ಲಿ ಅವರು ಸರ್ಕಾರದ ಜೊತೆ ಚರ್ಚಿಸಲು ಸಹಾಯಕವಾಗುತ್ತದೆ ಎಂದು ಸೂಚಿಸಿದರು.
ಶಾಸಕರಾದ ರೂಪಾಲಿ ನಾಯಕ್, ಸುನೀಲ್ ನಾಯಕ್, ಆಶಿಸರಹೆಗಡೆ, ಜಿಲ್ಲಾಧಿಕಾರಿ ಹರೀಶ್ ಕುಮಾರ್, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ರೋಷನ್, ವಿವಿಧ ಇಲಾಖೆಗಳ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here