ನಿರ್ವಹಣೆ ಇಲ್ಲದೆಯೂ ಜಲಕ್ಷಾಮ

0
ಲೇಖಕರು: ಆಂಜನೇಯ ರೆಡ್ಡಿ

ಅವಿಭಜಿತ ಕೋಲಾರ ಜಿಲ್ಲೆ ಸುಮಾರು 8000 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಇಲ್ಲಿ  ಸುಮಾರು 4000 ಕೆರೆಕುಂಟೆಗಳಿವೆ, ಹಾಗಯೇ ಅವುಗಳನ್ನು ಸಂಪರ್ಕಿಸುವ ಕಾಲುವೆ ಮತ್ತು ರಾಜಕಾಲುವೆಗಳ ದೊಡ್ಡ ಸಂಪರ್ಕ ಜಾಲವಿದೆ.

ಕೊಳವೆ ಬಾವಿಗಳ ಮಾಯೆಗೆ ಬಿದ್ದು ಕೆರೆ ಕುಂಟೆಗಳ ನಿರ್ವಹಣೆ ಮತ್ತು ಕೆರೆ ಕಾಲುವೆಗಳ ನಿರ್ವಹಣೆಯಲ್ಲಿ ಅತ್ಯಂತ ಅಸಡ್ಡೆ ಮಾಡಲಾಗುತ್ತಿದೆ. ಮಳೆನೀರನ್ನು ಹರಿಸುವ ಆಯಾ ಕೆರೆಗಳ ಜಲಾನಯನ ಪ್ರದೇಶವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ,

ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಒತ್ತುವರಿ ತೆರೆವಾಗುತ್ತಿಲ್ಲ , ವೈಜ್ಞಾನಿಕವಾಗಿ ಹೂಳು ತೆಗೆಯಲಾಗುತ್ತಿಲ್ಲ, ಕೆರೆಗಳ ಮಾಲೀಕತ್ವವನ್ನು ಸಮುದಾಯದಿಂದ ಕಿತ್ತುಕೊಳ್ಳಲಾಗಿದೆ. ಮರುಪೂರಣ ವಿಧಾನಗಳೂ ವೈಜ್ಞಾನಿಕವಾಗಿ ನಡೆಯುತ್ತಿಲ್ಲ,

ರಾಸಾಯನಿಕ ಕೃಷಿಯಿಂದ ಮತ್ತು ಕ್ರಿಮಿ ನಾಶಕ , ಕೀಟ ನಾಶಕ , ಶಿಲಿಂದ್ರ ನಾಶಕ , ಕಳೆ ನಾಶಕಗಳ ಅತಿಯಾದ ಬಳಕೆಯಿಂದ ಫಲವತ್ತಾಗಿದ್ದ ಕೃಷಿಭೂಮಿಯು ಕಾಂಕ್ರೀಟ್ ನೆಲವಾಗಿ ಮಾರ್ಪಾಡಾಗಿದ್ದು ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದೆ,

ನಗರ ಅಥವಾ ಪಟ್ಟಣಗಳ ಅಥವಾ ಗ್ರಾಮಗಳ  ಕಲುಷಿತಗೊಂಡಿರುವ ಕೆರೆ ಕುಂಟೆಗಳು ಸೂಕ್ತವಾಗಿ ಶುದ್ದೀಕರಣ ಪ್ರಕ್ರಿಯೆಗೆ   ಗೆ ಒಳಪಡದ ಕಾರಣ  ನೈಸರ್ಗಿಕವಾಗಿ ನೀರನ್ನು ಇಂಗಿಸಿಕೊಳ್ಳುತ್ತಿಲ್ಲ. ಇನ್ನು ವಾಣಿಜ್ಯ ಕೃಷಿಗಾಗಿ 2022ನೇ ಇಸವಿಯ ಅಂಕಿ ಅಂಶಗಳ ಪ್ರಕಾರ  ವಿದ್ಯುತ್ ಸಂಪರ್ಕ ಪಡೆದಿರುವ ಸುಮಾರು 2 ಲಕ್ಷ ಕೊಳವೆ ಬಾವಿಗಳು ನಿರಂತರವಾಗಿ ಅಂತರ್ಜಲವನ್ನು ಖಾಲಿಮಾಡುತ್ತಿವೆ,

ಎರಡು ದಶಕಗಳಿಂದ ಅವೈಜ್ಞಾನಿಕ ನಡೆಯುತ್ತಿರುವ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಿಂದ ಯಾವುದೇ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸಮುದಾಯದ ಸಹಭಾಗಿತ್ವವಿಲ್ಲದ ಯಾವುದೇ ಕಾರ್ಯಕ್ರಮ ಗುರಿ ತಲುಪುವುದಿಲ್ಲ ಎಂಬುದು ನಮ್ಮ ನಂಬಿಕೆ. ರೈತರಲ್ಲಿ ಜಲ ಆಯವ್ಯಯ ಮಾಡುವಷ್ಟು ಅರಿವು ಬರಬೇಕು.

LEAVE A REPLY

Please enter your comment!
Please enter your name here