ಸಾವಯವ ಕೃಷಿ ಎಂದರೇನು, ಗೊಂದಲವಿದೆಯೇ ?

0

ಸಾವಯವ ಕೃಷಿ ಪದ್ಧತಿಯಲ್ಲಿ ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಲಾಗುತ್ತದೆ.  ಆಹಾರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು ನೈಸರ್ಗಿಕ ಮತ್ತು ಸಮಗ್ರ ವಿಧಾನಗಳ ಅಳವಡಿಕೆ ಒತ್ತಿಹೇಳಲಾಗುತ್ತದೆ.

ಈ ರೀತಿಯ ಕೃಷಿಯು ಎಲ್ಲಾ ಸಾವಯವ ಪದ್ಧತಿಗಳನ್ನು ಬಳಸುತ್ತದೆ. ಸಾವಯವ ಕೃಷಿಕರು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು, ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಕೃಷಿ ಆರೋಗ್ಯವನ್ನು ಉತ್ತೇಜಿಸಲು ನೈಸರ್ಗಿಕ ಮತ್ತು ಪರಿಸರ ಸ್ನೇಹಿ ತಂತ್ರಗಳನ್ನು ಅವಲಂಬಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಸಾವಯವ ಆಹಾರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ಸಾವಯವ ಕೃಷಿಯ ಜನಪ್ರಿಯತೆಯ ಏರಿಕೆಗೆ ಕಾರಣವಾಗಿದೆ. ಸಾವಯವ ಆಹಾರ ಮಾರುಕಟ್ಟೆಯು 2022-2027 ರಿಂದ 25.25% ನಷ್ಟು ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ಉದ್ಯಮಿಗಳ ಗಮನವನ್ನು ಸೆಳೆದಿದೆ.

ಸಾವಯವ ಕೃಷಿಯ ಇತಿಹಾಸ

ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಬೆಳೆ ಸರದಿ, ಮಿಶ್ರಗೊಬ್ಬರ, ಮತ್ತು ಗೊಬ್ಬರವಾಗಿ ಪ್ರಾಣಿಗಳ ಗೊಬ್ಬರ ಸೇರಿದಂತೆ ನೈಸರ್ಗಿಕ ವಿಧಾನಗಳನ್ನು ಸಂಯೋಜಿಸುತ್ತವೆ. 1920 ಮತ್ತು 1930 ರ ದಶಕಗಳಲ್ಲಿ ಕೃಷಿವಿಜ್ಞಾನಿ ಸರ್ ಆಲ್ಬರ್ಟ್ ಹೊವಾರ್ಡ್ ಅವರು ಮಿಶ್ರಗೊಬ್ಬರ ಮತ್ತು ಮಣ್ಣಿನ ಆರೋಗ್ಯದ ಕುರಿತು ಮಾಡಿದ ಕಾರ್ಯಗಳು ಸಾವಯವ ಕೃಷಿಯ ಮೇಲೆ ಪ್ರಭಾವ ಬೀರಿದೆ.

20 ನೇ ಶತಮಾನದ ಮಧ್ಯಭಾಗದಲ್ಲಿ, ಸಾವಯವ ಕೃಷಿಯು ಗ್ರಾಮೀಣ ಹಂತದಲ್ಲಿ ಮತ್ತೆ ತನ್ನ ಅಸ್ತಿತ್ವದ ಅಗತ್ಯದ ಬಗ್ಗೆ ಗಮನ ಸೆಳೆಯತೊಡಗಿತು. ಇದರ ಸಲುವಾಗಿ ಆರಂಭವಾದ ಚಳುವಳಿಗಳ ಮೂಲಕ ಮರು ಜನಪ್ರಿಯತೆಯನ್ನು ಗಳಿಸಿತು. ಸಾವಯವ ಕೃಷಿ ತತ್ವಗಳು ಸುಸ್ಥಿರ ಮತ್ತು ಪುನರುತ್ಪಾದಕ ಕೃಷಿ ಪರಿಕಲ್ಪನೆಗಳನ್ನು ವಿಸ್ತರಿಸುತ್ತವೆ.  ಪರಿಸರ ಜವಾಬ್ದಾರಿಯನ್ನು ಕೇಂದ್ರೀಕರಿಸುತ್ತವೆ.

ಸಾವಯವ ಕೃಷಿಯ ಪ್ರಮುಖ ಅಂಶಗಳು

ಮಣ್ಣಿನ ಆರೋಗ್ಯ: ಸಾವಯವ ಕೃಷಿಯು ಉತ್ಪಾದಕತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸುಧಾರಿಸಲು ಗಮನ ನೀಡುತ್ತದೆ. ಈ ಪದ್ಧತಿ ಅನುಸರಿಸುವ ರೈತರು ಮಣ್ಣಿನ ಪೋಷಕಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಮಿಶ್ರಗೊಬ್ಬರ, ಬೆಳೆ ಸರದಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅವಲಂಬಿಸಿರುತ್ತಾರೆ

ನೈಸರ್ಗಿಕ ಕೀಟ ಮತ್ತು ರೋಗ ನಿಯಂತ್ರಣ: ಸಾವಯವ ಕೃಷಿಯ ಪ್ರಮುಖ ಅಂಶವೆಂದರೆ ನೈಸರ್ಗಿಕ ಕೀಟನಾಶಕಗಳು ಮತ್ತು ಸಾವಯವಗೊಬ್ಬರಗಳ ಬಳಕೆ. ರೈತರು ಪ್ರಯೋಜನಕಾರಿ ಕೀಟಗಳ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುತ್ತಾರೆ.   ಜೈವಿಕ ನಿಯಂತ್ರಣ ವಿಧಾನಗಳನ್ನು ಬಳಸುತ್ತಾರೆ.

ರಾಸಾಯನಿಕಗಳ ಬಳಕೆ ಇಲ್ಲ: ಸಾವಯವ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಮಣ್ಣಿನ ಪೋಷಕಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ಬೆಳೆ ವೈವಿಧ್ಯ: ಸಾವಯವ ಕೃಷಿಯ ಪ್ರಾಥಮಿಕ ಗಮನವು ಬೆಳೆ ವೈವಿಧ್ಯತೆಗೆ ಗಮನ ನೀಡುತ್ತದೆ. ಇದರಲ್ಲಿ ಬೆಳೆ ಸರದಿ ಮತ್ತು ಅಂತರ ಬೆಳೆ ಪದ್ಧತಿ ಸಾಮಾನ್ಯ ಪದ್ಧತಿಯಾಗಿದೆ. ರೈತರು ನೈಸರ್ಗಿಕವಾಗಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಸ್ಯಗಳಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸುತ್ತಾರೆ

ಜಾನುವಾರುಗಳು: ಕೆಲವು ಸಾವಯವ ಕೃಷಿ ವ್ಯವಸ್ಥೆಗಳಲ್ಲಿ ಕುರಿ, ಕೋಳಿ,  ಹಸುಗಳನ್ನು ಸಾಕಣೆ ಮಾಡಲಾಗುತ್ತದೆ.  ಇವುಗಳ ತ್ಯಾಜ್ಯವನ್ನು ಕಾಂಪೋಸ್ಟ್‌ ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳಿಗೆ ಪೂರೈಸಲಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ ಗುಣಮಟ್ಟದ ಫಸಲು ದೊರೆಯುತ್ತದೆ.

ಸಾವಯವ ಕೃಷಿಯ ಮೂಲ ಹಂತಗಳು

  1. ಮಣ್ಣಿನ ಫಲವತ್ತತೆ

ಸಾವಯವ ಕೃಷಿಯು ಮಣ್ಣಿನ ಫಲವತ್ತತೆ  ಪೋಷಣೆ ಮತ್ತು ಅಭಿವೃದ್ಧಿಯೊಂದಿಗೆ  ಪ್ರಾರಂಭವಾಗುತ್ತದೆ. ಇದಕ್ಕಾಗಿ, ರೈತರು ಬೆಳೆ ಸರದಿ ಮತ್ತು ಮಿಶ್ರಗೊಬ್ಬರದಂತಹ ನೈಸರ್ಗಿಕ ತಂತ್ರಗಳನ್ನು ಬಳಸುತ್ತಾರೆ. ಇದು ಮಣ್ಣಿನ ಪೋಷಕಾಂಶದ ಮಟ್ಟವನ್ನು ಸಂರಕ್ಷಿಸುತ್ತದೆ. ಸಾವಯವ ಕೃಷಿಯಲ್ಲಿ ಹಸಿರು ಗೊಬ್ಬರವನ್ನು ಬಳಸಲಾಗುತ್ತದೆ. ರೂಪಾಂತರಿ (GMO) ಬಿತ್ತನೆಬೀಜಗಳ ಬಳಕೆ ಮಾಡುವುದಿಲ್ಲ.

  1. ಬೆಳೆ ಪರಿವರ್ತನೆ

ಸಾವಯವ ಕೃಷಿಕರು ಅನುಸರಿಸುವ ಉತ್ತಮ ಅಭ್ಯಾಸಗಳಲ್ಲಿ ಬೆಳೆ ಸರದಿಯೂ ಸೇರಿದೆ. ಇದು ಮಣ್ಣಿನಫಲವತ್ತತೆ ಹಾಳಾಗುವುದನ್ನು ಮತ್ತು ಕೀಟಗಳ ಹಾವಳಿಯನ್ನು ತಡೆಯುತ್ತದೆ. ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಮತ್ತು ಕೀಟಗಳ ಜೀವನ ಚಕ್ರಗಳನ್ನು ಅಡ್ಡಿಪಡಿಸಲು ರೈತರು ಪ್ರತಿ ಋತುವಿನಲ್ಲಿ ಬೆಳೆ ಬದಲಾಯಿಸುತ್ತಾರೆ.

  1. ಕಾಂಪೋಸ್ಟಿಂಗ್

ಸಾವಯವ ರೈತರು ಸಾವಯವ ತ್ಯಾಜ್ಯಗಳು  ಮತ್ತು ಪೋಷಕಾಂಶಗಳೊಂದಿಗೆ ಮಣ್ಣನ್ನು ಉತ್ಕೃಷ್ಟಗೊಳಿಸಲು ಕಾಂಪೋಸ್ಟ್ ಗೊಬ್ಬರ ತಯಾರು ಮಾಡಿ, ಮಣ್ಣಿಗೆ ಪೂರೈಸುತ್ತಾರೆ.  ಅಡುಗೆಮನೆಯ ತ್ಯಾಜ್ಯ, ಬೆಳೆಗಳ ತ್ಯಾಜ್ಯಗಳು ಮತ್ತು ಪ್ರಾಣಿಗಳ ಗೊಬ್ಬರದಿಂದ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಸಾವಯವ ವಸ್ತುಗಳನ್ನು ಮರುಬಳಕೆ ಮಾಡಲು ಇದು ಗಮನಾರ್ಹ ಮಾರ್ಗವಾಗಿದೆ.

  1. ನೈಸರ್ಗಿಕವಾಗಿ ಕೀಟ ಮತ್ತು ರೋಗ ನಿಯಂತ್ರಣ

ರಾಸಾಯನಿಕ ಕೀಟನಾಶಕಗಳ ಬದಲಿಗೆ, ಸಾವಯವ ರೈತರು ನೈಸರ್ಗಿಕ ಕೀಟ ನಿಯಂತ್ರಣ ವಿಧಾನಗಳನ್ನು ಬಳಸುತ್ತಾರೆ. ಇದು ಪ್ರಯೋಜನಕಾರಿ ಕೀಟಗಳನ್ನು ಅಭಿವೃದ್ಧಿ,  ಜೈವಿಕ ಸಾಧನಗಳನ್ನು ಬಳಸುವುದು,  ಕೀಟ-ನಿರೋಧಕ ಬೆಳೆ ಪ್ರಭೇದಗಳನ್ನು ಆಯ್ಕೆ ಮಾಡುವುದು ಸೇರಿರುತ್ತದೆ

  1. ನೀರಿನ ನಿರ್ವಹಣೆ

ಸಾವಯವ ಕೃಷಿಯು ಜವಾಬ್ದಾರಿಯುತ ನೀರಿನ ಬಳಕೆಗೆ ಮಹತ್ವ ನೀಡುತ್ತದೆ. ಹನಿ ನೀರಾವರಿ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸಾಮಾನ್ಯವಾಗಿ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಲು ಬಳಸಲಾಗುತ್ತದೆ.

  1. ಕೊಯ್ಲು ಮತ್ತು ಸಂಗ್ರಹಣೆ

ಸಾವಯವ ಕೃಷಿಯ ಫಸಲು ಪರಿಪೂರ್ಣವಾಗಿ  ಪಕ್ವತೆ ಹೊಂದಿದಾಗ ಕೊಯ್ಲು ಮಾಡಲಾಗುತ್ತದೆ. ಫಸಲು ಹಾಳಾಗುವುದನ್ನು ತಡೆಗಟ್ಟಲು ಮತ್ತು ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಮರ್ಪಕ ಶೇಖರಣಾ ತಂತ್ರಗಳನ್ನು ಬಳಸಲಾಗುತ್ತದೆ.

  1. ಮಾರುಕಟ್ಟೆ

ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ಸಾವಯವ ಮಾರುಕಟ್ಟೆಗಳಲ್ಲಿ ಅಥವಾ ನೇರವಾಗಿ ಸಾವಯವ ಉತ್ಪನ್ನಗಳ ಬಗ್ಗೆ ಅರಿವಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಸರಿಯಾದ ಲೇಬಲಿಂಗ್ ಮತ್ತು ಪ್ರಮಾಣೀಕರಣವು ಸಾವಯವ ಉತ್ಪನ್ನಗಳನ್ನು ಗುರುತಿಸಲು ಗ್ರಾಹಕರಿಗೆ ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here