ದಾಖಲಾದ ಹವಾಮಾನ ವರದಿ:
ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಕರಾವಳಿಯಲ್ಲಿ ಒಂದೆರಡು ಕಡೆ ಹಗುರ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ. ಚಾಮರಾಜನಗರದಲ್ಲಿ ನಿನ್ನೆಹೆಚ್ಚು ಮಳೆ ಅಂದರೆ ಮೂರು ಸೆಂಟಿಮೀಟರಿನಷ್ಟು ಪ್ರಮಾಣದ ಮಳೆಯಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆಲವು ಕಡೆ ಒಂದರಿಂದ ಮೂರು ಮಿಲಿ ಮೀಟರ್ ಮಳೆಯಾಗಿದೆ.
ಈಶಾನ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು.
ನವೆಂಬರ್ 12, 2022ರ ರಾಜ್ಯದ ಹವಾಮಾನ:
ನಿನ್ನೆ ಗಮನಿಸಿರುವ, ಸ್ಪಷ್ಟವಾಗಿ ಗುರುತಿಸಲಾದ ವಾಯುಭಾರ ಕುಸಿತ ಪ್ರದೇಶ ಅಂದರೆ ಎಲ್ಮಾಕಡು ಲೋ ಪ್ರೆಶರ್ ಏರಿಯಾ ಇಂದು ವಾಯುಭಾರ ಕುಸಿತವಾಗಿ ದುರ್ಬಲವಾಗಿದೆ. ಅದು ಇಂದು ತಮಿಳುನಾಡು ಮತ್ತು ಪುದುಚೇರಿ ಪ್ರದೇಶದಲ್ಲಿದೆ. ಇಂದು ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಚಲಿಸಿ ನಾಳೆ ಸುಮಾರಿಗೆ ಈಶಾನ್ಯ ಅರೇಬಿಕ್ ಸಮುದ್ರದಲ್ಲಿ ವಾಯುಭಾರ ಕುಸಿತ ಅಥವಾ ಮೇಲ್ಮೇ ಸುಳಿಗಾಳಿಯಾಗಿ ದುರ್ಬಲವಾಗುವ ಸಾಧ್ಯತೆ ಇದೆ.
ಇಂದು ವಾಯುಭಾರ ಕುಸಿತ ಪ್ರದೇಶದಿಂದ ಒಂದು ಟ್ರಪ್ ಎನ್ನುವಂಥದ್ದು ಸಮುದ್ರಮಟ್ಟದಿಂದ 5.8 ಕಿಲೋಮೀಟರ್ ಎತ್ತರದವರೆಗೂ ಇದೆ. ಎರಡನೇಯದು 16ನೇ ತಾರೀಖು ಸುಮಾರಿಗೆ ಈಶಾನ್ಯ ಬಂಗಾಳಕೊಲ್ಲಿಯಲ್ಲಿ ನೂತನವಾಗಿ ಒಂದು ವಾಯುಭಾರ ಕುಸಿತ ಪ್ರದೇಶ ಉಂಟಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಮುಂದಿನ ಐದು ದಿನದಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಇಂದಿನಿಂದ ಕರಾವಳಿಯ ಒಂದೆರಡು ಕಡೆ ಒಟ್ಟು ಐದು ದಿನದವರೆಗೆ, ಉತ್ತರ ಒಳನಾಡಿನಲ್ಲಿ ಒಂದೆರಡು ಕಡೆ ಇಂದಿನಿಂದ ಒಟ್ಟು ಐದು ದಿನದವರೆಗೆ ಹಗುರು ಮಳೆಯಾಗುವ ಸಾಧ್ಯತೆ ಇರುತ್ತದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಕಡೆ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಹಲವೆಡೆ ಇಂದಿನಿಂದ ಒಟ್ಟು ಐದು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಭಾರಿಮಳೆ ಮುನ್ನೆಚ್ಚರಿಕೆ:
ಇಂದು ದಕ್ಷಿಣ ಒಳನಾಡಿನಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.