ರಾಷ್ಟ್ರದ ಶೇ 25 ಭಾಗ ಬರಪೀಡಿತ; ಆಗಸ್ಟ್ ನಲ್ಲಿ ಮುಂಗಾರು ದುರ್ಬಲ ಸಾಧ್ಯತೆ

0

ದೇಶದ ಹಲವಾರು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಹೊರತಾಗಿಯೂ, ಭಾರತದ ಕನಿಷ್ಠ 25.1 ಪ್ರತಿಶತ ಭೂ ಪ್ರದೇಶವು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಂಬರುವ ವಾರಗಳಲ್ಲಿ ದುರ್ಬಲ ಮುಂಗಾರು ಮುನ್ಸೂಚನೆಯ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

ಗಾಂಧಿನಗರದ ಐಐಟಿ-ಗಾಂಧಿನಗರ ನಿರ್ವಹಣೆ ಮಾಡುವ   ಬರ-ಮೇಲ್ವಿಚಾರಣಾ ವೇದಿಕೆಯಾದ ಡ್ರೈ ಅರ್ಲಿ ವಾರ್ನಿಂಗ್ ಸಿಸ್ಟಮ್ (DEWS) ದ ಅಂಕಿಅಂಶಗಳ ಪ್ರಕಾರ, 25.1 ಪ್ರತಿಶತದಷ್ಟು ಪ್ರದೇಶವು ವಿವಿಧ ಹಂತದ ಬರಗಾಲ ಸ್ಥಿತಿ ಎದುರಿಸುತ್ತಿದೆ.  ಇಲ್ಲಿನ ಶುಷ್ಕ ಪರಿಸ್ಥಿತಿ ಹೆಚ್ಚಾಗಬಹುದು ಎಂಬ ಆತಂಕವಿದೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರದ ಬರಗಾಲದ ಪ್ರದೇಶ ಹೆಚ್ಚಳವನ್ನು ಕಾಣುತ್ತಿದೆ – ಏಪ್ರಿಲ್ 27, 2023 ರಂದು ದಾಖಲಾದ ಶೇಕಡಾ 22.4 ರಿಂದ, ಜೂನ್ 26, 2023 ರಂದು 23.8 ಶೇಕಡಾ, ಜುಲೈ 19, 2023 ರಂದು 24.4 ಶೇಕಡಾ ಜುಲೈ 26, 2023 ರಂದು 25.1 ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಒಣ ಪ್ರದೇಶವು ಶೇಕಡಾ 7 ರಷ್ಟು ಹೆಚ್ಚಳವನ್ನು ಕಂಡಿದೆ (ಜುಲೈ 26, 2022 ರಂದು ಇದು ಶೇಕಡಾ 18.1 ರಷ್ಟಿತ್ತು).

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ ಪೂರ್ವ ರಾಜ್ಯಗಳು, ಪೂರ್ವ ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಾದ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ, ಲಡಾಖ್ ಮತ್ತು ಹಿಮಾಚಲ , ಮಹಾರಾಷ್ಟ್ರ,  ಕರ್ನಾಟಕದ  ಪ್ರದೇಶಗಳ  ಕೆಲವು ಭಾಗಗಳಲ್ಲಿ ಬರಗಾಲವು ಹೆಚ್ಚಾಗಿ ಆವರಿಸಿದೆ.

ಭಾರತದ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಪ್ರದೇಶಗಳಲ್ಲಿ  ಮಳೆ ಕೊರತೆ ದಾಖಲಾಗಿದೆ.  ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಜುಲೈ 31 ರವರೆಗೆ ಶೇ 48, 46 ಮತ್ತು 22 ರಷ್ಟು ಮಳೆ ಕೊರತೆಯಿದೆ.

ಒಟ್ಟಾರೆಯಾಗಿ, ಭಾರತದ 25.1 ಪ್ರತಿಶತದಲ್ಲಿ, 6.3 ಪ್ರತಿಶತ ಭೂಮಿ ‘ಅತ್ಯಂತ ಶುಷ್ಕ’ ಮತ್ತು ‘ಅಸಾಧಾರಣ ಶುಷ್ಕ’ ಪರಿಸ್ಥಿತಿಗಳಲ್ಲಿದೆ, 9.8 ಪ್ರತಿಶತವು ‘ತೀವ್ರ’ ಶುಷ್ಕ ಪರಿಸ್ಥಿತಿಗಳಲ್ಲಿದೆ. 19.1 ರಷ್ಟು ‘ಮಧ್ಯಮ’ ಶುಷ್ಕ ಪರಿಸ್ಥಿತಿಯಲ್ಲಿದೆ.

ಆಗಸ್ಟ್‌ನಲ್ಲಿ ಮುಂಗಾರು ದುರ್ಬಲ ಹಂತಕ್ಕೆ ಪ್ರವೇಶಿಸುವ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಭಾರತೀಯ ಹವಾಮಾನ ಇಲಾಖೆ ಜುಲೈ 31 ರಂದು  ತನ್ನ ಅಧಿಕೃತ ಹೇಳಿಕೆಯಲ್ಲಿ, 2023 ರ ನೈಋತ್ಯ ಮುಂಗಾರು ಹಂಗಾಮಿನ  ದ್ವಿತೀಯಾರ್ಧದಲ್ಲಿ (ಆಗಸ್ಟ್ನಿಂದ ಸೆಪ್ಟೆಂಬರ್ ಅವಧಿಯವರೆಗೆ) ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯವಾಗಿರುವ ಸಾಧ್ಯತೆಯಿದೆ, ಆದರೆ ಕೆಲವು ಭಾಗ ಕೊರತೆ ಎದುರಿಸಬಹುದು ಎಂದು ಊಹಿಸಲಾಗಿದೆ.

2023ರ ಆಗಸ್ಟ್‌ಗೆ ಸಂಬಂಧಿಸಿದಂತೆ  ಒಟ್ಟಾರೆಯಾಗಿ ದೇಶದಾದ್ಯಂತ ಮಾಸಿಕ ಮಳೆಯು ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ (ದೀರ್ಘ ಅವಧಿಯ ಸರಾಸರಿಯ 94 ಪ್ರತಿಶತ).

ಈ ಹಿಂದೆ, ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ ರಾಜೀವನ್ ಅವರು ಸುದೀರ್ಘ ಸಕ್ರಿಯ ಲೆಕ್ಕಾಚಾರದ ಪ್ರಕಾರ  ಮುಂದಿನ ಎರಡು-ಮೂರು ವಾರಗಳಲ್ಲಿ  ಮುಂಗಾರು ಹಂಗಾಮು  ವಿರಾಮ ಸ್ಥಿತಿ  ಪ್ರವೇಶಿಶಿಸುವ ಸಾಧ್ಯತೆಗಳಿವೆ.

ಇದರರ್ಥ ಭಾರತೀಯ ಮುಂಗಾರು ವ್ಯವಸ್ಥೆಗಳ ಮೇಲೆ ಎಲ್-ನಿನೊ ಪ್ರಭಾವ ಮತ್ತು  ಹಿಂದೂ ಮಹಾಸಾಗರದ ದ್ವಿಧ್ರುವಿ (ಐಒಡಿ) ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆಯ ವಿರಾಮವನ್ನು ಕಾಣಬಹುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here