ಕೆ ಆರ್ ಎಸ್ ಅಣೆಕಟ್ಟೆಗೆ ಒಳಹರಿವು ಹೆಚ್ಚಳ

0

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕನ್ನಂಬಾಡಿಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ (KRS) ನೀರಿನ ಮಟ್ಟ ಇಂದು ಬುಧವಾರ ೧೦೦ ಅಡಿಗೆ ತಲುಪಿದೆ. ಕೊಡಗು ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ನೀರಿನ ಒಳ ಹರಿವು ಉಂಟಾಗಿದೆ.

ಅಣೆಕಟ್ಟೆಯ ಗರಿಷ್ಠ ಮಟ್ಟ ೧೨೪.೮೦ ಅಡಿ.  ಅಕ್ಟೋಬರ್ 4 ರಂದು, ಅಣೆಕಟ್ಟಿಯಲ್ಲಿನ ನೀರಿನ ಮಟ್ಟ 100.36 ಅಡಿಗಳಷ್ಟಿತ್ತು ಗರಿಷ್ಠ ಒಳಹರಿವು 9,052 ಕ್ಯೂಸೆಕ್ ಮತ್ತು ಹೊರಹರಿವು 1,482 ಕ್ಯೂಸೆಕ್  ಇತ್ತು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ೩೦೦೦ (ಮೂರು ಸಾವಿರ) ಕ್ಯೂಸೆಕ್‌ ನೀರು ಬಿಡುವಂತೆ ನೀಡಿರುವ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಕಳೆದ ಒಂದು ತಿಂಗಳಿನಿಂದ ನೀರು ಬಿಡುತ್ತಿದೆ. ಇದನ್ನು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ವಿರೋಧಿಸಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ.ಅಣೆಕಟ್ಟೆಯಲ್ಲಿ ಅಗತ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಇಲ್ಲದಿರುವುದರಿಂದ  ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂಬ ಆತಂಕವೂ ಇದೆ.

ಕಳೆದ ಎರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿಲ್ಲ. ಈ ಕಾರಣದಿಂದ  ಕಾರಣ ಅಣೆಕಟ್ಟೆಗೆ ಒಳಹರಿವು ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here