ಹವಾಮಾನ ವರದಿ; ಆಶಾಭಾವನೆ ಮೂಡಿಸಿರುವ ಹಿಂಗಾರು ಮಳೆ !

0

ಅಕ್ಟೋಬರ್‌ 1, 2023 ರಿಂದ ಹಿಂಗಾರು ಕಾಲ ಅಧಿಕೃತವಾಗಿ ಆರಂಭವಾಗಿದೆ ಎಂದು ಹೇಳಲಾಗಿದೆ. ಆದರೆ ಇನ್ನೂ ಭಾರತದಿಂದ  ಮುಂಗಾರು ಮಳೆ ಸಂಪೂರ್ಣವಾಗಿ ನಿರ್ಗಮಿತವಾಗಿಲ್ಲ. ಅಕ್ಟೋಬರ್‌ 3 ರ ವೇಳೆಗೆ ರಾಷ್ಟ್ರದ ವಾಯುವ್ಯ  ಭಾಗದಿಂದ ಮುಂಗಾರು ನಿರ್ಗಮಿತವಾಗಲು ಆರಂಭವಾಗಿದೆ. ರಾಜಸ್ತಾನ, ಗುಜರಾತಿನ ಹಲವು ಭಾಗಗಳಿಂದ , ಉತ್ತರ ಕಾಂಡ್‌, ಉತ್ತರ ಪ್ರದೇಶದ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಈ ರಾಜ್ಯಗಳ ಕೆಲವು ಭಾಗಗಳಿಂದ ಮುಂಗಾರು ಹಿಂದೆ ಸರಿಯುತ್ತಿದೆ. ಅಕ್ಟೋಬರ್‌ 5 ರ ವೇಳೆಗೆ ಇನ್ನೂ ಇನ್ನೂ ಹಲವು ಭಾಗಗಳಿಂದ  ನಿರ್ಗಮಿತವಾಗಲು ಹವಾಮಾನ ಅನುಕೂಲಕರವಾಗಿದೆ.

ದೀರ್ಘ ವ್ಯಾಪ್ತಿಯ ಮುನ್ಸೂಚನೆ ಪ್ರಕಾರ ಅಕ್ಟೋಬರ್‌, ನವೆಂಬರ್, ಡಿಸೆಂಬರ್‌ ಈ ಮೂರು ತಿಂಗಳುಗಳಲ್ಲಿ  ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕವಾಗಿ ನೋಡುವುದಾದರೆ  ಅನೇಕ ಜಿಲ್ಲೆಗಳಲ್ಲಿ  ಈ ಮೂರು ತಿಂಗಳು ಒಟ್ಟಿಗೆ ಸೇರಿಸಿ ವಾಡಿಕೆಗಿಂತ ಹಿಂಗಾರು ಮಳೆ ಹೆಚ್ಚಾಗಿರುತ್ತದೆ.  ಇದು ಸಾಮಾನ್ಯಕ್ಕಿಂತ 40 ರಿಂದ ಶೇಕಡ 50ರ ತನಕ ಹೆಚ್ಚಾಗಿರುವ ಸಾಧ್ಯತೆ ಇದೆ.

ಪ್ರತ್ಯೇಕವಾಗಿ ಅಕ್ಟೋಬರ್‌ ತಿಂಗಳನ್ನು ನೋಡುವುದಾದರೆ  ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಅಂದರೆ ಕೊಡಗು, ಹಾಸನ, ಮೈಸೂರು, ಮಂಡ್ಯ, ಈ ಜಿಲ್ಲೆಗಳಿಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.

ಉತ್ತರ ಒಳನಾಡಿನ ಬೀದರ್‌, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗುವ ಸಾಧ್ಯತೆ ಇದೆ.  ಉಳಿದ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ.

ಪ್ರಸ್ತುತ ಎಲ್‌ ನೀನೋ ತೀವ್ರವಾಗಿದೆ. ಮುಂದಿನ ವರ್ಷ ಅಂದರೆ 2024ರ ಫೆಬ್ರವರಿ ತನಕ ಮುಂದುವರಿಯುವ ಸಾಧ್ಯತೆ ಇದೆ.  ಇದರ ಪರಿಣಾಮವಾಗಿ 2023 ರ ಅಕ್ಟೋಬರ್‌ ತಿಂಗಳಿನಲ್ಲಿ ರಾಜ್ಯದ ಹಲವೆಡೆ ಕನಿಷ್ಟ ಮತ್ತು ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಹೆಚ್ಚಿರುವ ಸಾಧ್ಯತೆ ಇದೆ.

ಇನ್ನೂ ಮುಂದಿನ ಮೂರು ದಿನಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಇರುತ್ತದೆ.  ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.  ಕರ್ನಾಟಕ ಕರಾವಳಿಯಲ್ಲಿ ಇನ್ನೂ ಮೂರು ದಿನ ಹಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.  ಕೆಲವಡೆ  6 ಮತ್ತು 7ನೇ ದಿನ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಕೆಲವೆಡೆ ಇಂದಿನಿಂದ ಐದು ದಿನಗಳಿಗೆ ತುಂಬ ಹಗುರ ಮಳೆಯಾಗುವ ಸಾಧ್ಯತೆ ಇದೆ.  ದಕ್ಷಿಣ ಒಳನಾಡಿಗೆ ಇನ್ನೂ ಮೂರು ದಿನಕ್ಕೆ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.  8 ಮತ್ತು 9ನೇ ತಾರೀಖು ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.  ದಕ್ಷಿಣ ಒಳನಾಡಿಗೆ ಈ ಮಳೆ ಪ್ರಮಾಣ 10, 11, 12 ಮತ್ತು 13ನೇ, ತಾರೀಖುಗಳಂದು ಸ್ವಲ್ಪ ಹೆಚ್ಚಿರುವ ಸಾಧ್ಯತೆ ಇದೆ.

ಪ್ರತ್ಯೇಕವಾಗಿ ಬೆಂಗಳೂರಿಗೆ ಮುಂದಿನ ೨೪ ಗಂಟೆಗಳಲ್ಲಿ  ಸಂಜೆ ಅಥವಾ ರಾತ್ರಿಗೆ ಒಂದೆರಡು ಕಡೆ ಮಾತ್ರ ಹಗುರ ಮಳೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here