ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಬೀಜೋದ್ಯಮ ಸಂಪರ್ಕ ಸಮಾವೇಶ

0

ಬೆಂಗಳೂರು : ಡಿಸೆಂಬರ್ 06: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಬೀಜೋದ್ಯಮ ಕ್ಷೇತ್ರದ ಉದ್ಯಮಿಗಳ ಸಮಾವೇಶ ಇಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ  ಡಾ. ಎಸ್.ವಿ.ಸುರೇಶ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಚಾಲ್ತಿಯಲ್ಲಿರುವ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಬೀಜೋದ್ಯಮದ ಸಂಪರ್ಕಜಾಲವನ್ನು ಮತ್ತಷ್ಟು ಬಲಪಡಿಸಲಾಗುವುದು. ವಿಶ್ವವಿದ್ಯಾನಿಲಯದ ತಂತ್ರಜ್ಞಾನಗಳು, ವಿಶೇಷವಾಗಿ ಸಸ್ಯತಳಿ ಮತ್ತು ಬೀಜ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾನಿಲಯವು ಬಹಳ ಮುಂಚೂಣಿಯಲ್ಲಿದೆ. ಈ ತಂತ್ರಜ್ಞಾನಗಳನ್ನು ವಿಶ್ವವಿದ್ಯಾನಿಲಯವು ಬೀಜೋದ್ಯಮದ ಜೊತೆ ಹಂಚಿಕೊಳ್ಳುವುದರ ಜೊತೆಗೆ  ಬೀಜೋದ್ಯಮದ ಅವಶ್ಯಕತೆಗಳನ್ನು  ಮುಕ್ತವಾಗಿ ಪರಿಗಣಿಸುತ್ತದೆ. ಇಂತಹ ಸಮಾವೇಶಗಳು ಕಾಲ ಕಾಲಕ್ಕೆ ನಡೆಯಬೇಕೆಂದು ಅಭಿಪ್ರಾಯ ಪಟ್ಟರು.

ಸಮಾವೇಶದಲ್ಲಿ 40 ಬೀಜೋದ್ಯಮದ ಪ್ರತಿನಿಗಳು ಭಾಗವಹಿಸಿ ವಿಶ್ವವಿದ್ಯಾನಿಲಯವು ಬೀಜೋತ್ಪದನೆ, ಬೀಜ ಕವಚ ಲೇಪನ ಮತ್ತು ಬೀಜ ಪೋಷಣೆ ಬಗ್ಗೆ ಸಂಶೋಧನೆ ಕೈಗೊಳ್ಳುವುದು ಅವಶ್ಯಕವೆಂದು ತಿಳಿಸಿದರು.

ಮನವಿಗೆ ಸ್ವಂದಿಸಿದ ಕುಲಪತಿ ಬೀಜೋದ್ಯಮದ ಸಂಶೋಧನೆಯ ಸಮಸ್ಯೆಗಳನ್ನು ಕೃ.ವಿ.ವಿ.ಯ ಸ್ನಾತಕ / ಸಂಶೋಧನಾ ವಿದ್ಯಾರ್ಥಿಗಳ ಮೂಲಕ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿ ಪಡಿಸಿದ ನೂತನ ಸಸ್ಯ ತಳಿಗಳ ಬಹು ಕ್ಷೇತ್ರಿಯ ಪ್ರಯೋಗಗಳನ್ನು ಕೈಗೊಳ್ಳಲು ಸಾಕಷ್ಟು ಪ್ರಮಾಣದ ಬೀಜವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರ್ಯಕ್ರಮದಲ್ಲಿ ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ. ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಡಾ. ಕೆ.ಬಿ. ಉಮೇಶ್, ಸಂಶೋಧನಾ ನಿರ್ದೇಶಕರು ಮತ್ತು ಡಾ: ಬಸವೇಗೌಡ, ಕುಲಸಚಿವರು, ಕೃವಿವಿ, ಜಿಕೆವಿಕೆ, ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here