ಮೌಲ್ಯವರ್ಧಿತ ಸಿರಿಧಾನ್ಯಗಳ ತಂತ್ರಜ್ಞಾನ ಮಾರಾಟ ಒಪ್ಪಂದ

0
Enriched gluten free cookies

ಅಂತರಾಷ್ಟಿçÃಯ ಸಿರಿಧಾನ್ಯಗಳ ವರ್ಷಾಚರಣೆ -2023ರ ಅಂಗವಾಗಿ  ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿನ ತಜ್ಞರು ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿದ ವಿವಿಧ ಪದಾರ್ಥಗಳನ್ನು ವಾಣೀಜ್ಯೀಕರಣಕ್ಕಾಗಿ ಬಿಡುಗಡೆಗೊಳಿಸಲಾಗಿದೆ.

 ಇದರಲ್ಲಿ ಪುಷ್ಠೀಕರಿಸಿದ ಗ್ಲುಟಿನ್ ಮುಕ್ತ ಕುಕ್ಕೀಸ್ ಮತ್ತು ಕಡಿಮೆ ಕೊಬ್ಬಿನಾಂಶಯುಕ್ತ ಸಾಮೆ ಬಿಸ್ಕತ್ತುಗಳ ತಯಾರಿಕಾ ತಂತ್ರಜ್ಞಾನವನ್ನು ದಿನಾಂಕ:20-12-2022ರಂದು  ರಘು, ಕುಲಂಬಿ, ಹೊನ್ನಳ್ಳಿ ತಾಲ್ಲೂಕು, ದಾವಣೆಗೆರೆ ಜಿಲ್ಲೆ ಇವರೊಂದಿಗೆ ತಂತ್ರಜ್ಞಾನ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.

ಗ್ಲುಟಿನ್ ಮುಕ್ತ ಕುಕ್ಕೀಸ್‌ಗಳು ಗ್ಲುಟಿನ್ ಅಲರ್ಜಿ/ಅಸಹಿಷ್ಣುತೆ/ ಸೆಲಿಯಾಕ್ ಕಾಯಿಲೆಯವರಿಗೆ ಸೂಕ್ತ ಇದರಲ್ಲಿ ನಾರು ಹಾಗೂ ಪ್ರೋಟೀನಾಂಶ ಹೆಚ್ಚಾಗಿರುತ್ತದೆ. ಕಡಿಮೆ ಕೊಬ್ಬಿನಾಂಶಯುಕ್ತ ಸಾಮೆ ಬಿಸ್ಕತ್ತುಗಳು ಗ್ಲುಟಿನ್ ಮುಕ್ತವಾಗಿದ್ದು ಹೆಚ್ಚು ಪೋಷಕಾಂಶಯುಕ್ತವಾಗಿರುತ್ತವೆ.

ಈ ಸಂದರ್ಭದಲ್ಲಿ ಡಾ: ಎಸ್.ವಿ. ಸುರೇಶ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು  ಅವರು ಮಾತನಾಡಿದರು. “ ಸಿರಿಧಾನ್ಯಗಳಾದ ಹಾರಕ, ಸಾಮೆ, ಬರಗು, ಊದಲು ಕೊರಲೆ, ಸಜ್ಜೆ ಮತ್ತು ನವಣೆಗಳಲ್ಲಿ ಹೆಚ್ಚಿನ ಆವಿಷ್ಕಾರಗಳನ್ನು ಮತ್ತು ಮೌಲ್ಯವರ್ಧನೆ ಮಾಡುವ ಅವಶ್ಯಕತೆಯಿದೆ ಎಂದರು.

ನೂತನ ತಂತ್ರಜ್ಞಾನಗಳನ್ನು ರೈತರಿಗೆ ಶೀಘ್ರವಾಗಿ ತಲುಪಿಸಲು ವಿಸ್ತರಣಾ ಕಾರ್ಯಕರ್ತರು ಮತ್ತು ವಿಜ್ಞಾನಿಗಳು ಶ್ರಮಿಸಬೇಕು ಹಾಗೂ ವಾಣೀಜ್ಯೋದ್ಯಮಿಗಳಿಗೆ ನೂತನ ತಂತ್ರಜ್ಞಾನಗಳು ಸುಲಭವಾಗಿ ತಲುಪಬೇಕು ಎಂದು ಅಭಿಪ್ರಾಯಪಟ್ಟರು.

Low fat little millet biscuits

ಕಾರ್ಯಕ್ರಮದಲ್ಲಿ ಡಾ: ಬಸವೇಗೌಡ, ಸಂಶೋಧನಾ ನಿರ್ದೇಶಕರಾದ ಡಾ: ಕೆ.ಬಿ.ಉಮೇಶ್ ಹಾಗೂ ಪ್ರಾಯೋಜನಾ ಯೋಜನೆ ಮತ್ತು ಮೇಲುಸ್ತುವಾರಿ ಘಟಕದ ನೋಡಲ್ ಅಧಿಕಾರಿಯಾದ ಡಾ: ಸಿದ್ಧಯ್ಯ, ಡಾ: ಮಮತ ಹೆಚ್.ಎಸ್, ಸಹ ಪ್ರಾಧ್ಯಾಪಕರು ಹಾಗೂ ಪಿ.ಹೆಚ್.ಡಿ ವಿದ್ಯಾರ್ಥಿನಿಯಾದ ಸೌಮ್ಯ ಹಿರೇಗೌಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here