ಜಿರಳೆ ನಿಯಂತ್ರಣ ಮಾಡಲು ಪರಿಣಾಮಕಾರಿ ಮದ್ದು

0

ಜಿರಳೆ (cockroaches) ಇಲ್ಲದ ಜಾಗ ಯಾವುದು ? ಬಹುಶಃ ಯಾವುದೇ ಜಾಗವೂ ಇಲ್ಲ. ಕತ್ತಲು ಕವಿತೆಂದರೆ ಇವುಗಳದ್ದೇ ಸಾಮ್ರಾಜ್ಯ. ಅಡುಗೆ ಮನೆ, ಶೌಚಾಲಯಗಳಲ್ಲಂತೂ ಇವುಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲು.

ಜಿರಳೆಗಳಿಂದ (cockroaches) ಹರಡುವ ರೋಗಗಳ ಪಟ್ಟಿ ಮಾಡುತ್ತಾ ಹೋದರೆ ಅವುಗಳಿಗೆ ಕೊನೆಯಿಲ್ಲ. ಜಿರಳೆಗಳು (cockroaches) ರೋಗವಾಹಕಗಳು. ಚಲಿಸುವ ರೋಗ ಪ್ರಸಾರಣೆ ಜೀವಿಗಳು. ದಾಖಲೆಗಳು, ಪುಸ್ತಕಗಳ ಸಂಗ್ರಹಕ್ಕೂ ಲಗ್ಗೆಯಿಡುವ ಜಿರಳೆಗಳು (cockroaches) ಅವುಗಳನ್ನೂ ಆಹಾರವಾಗಿ ಮಾಡಿಕೊಂಡು ಹಾಳು ಮಾಡುತ್ತವೆ. ಇನ್ನು ಅಡುಗೆಮನೆಗಳಲ್ಲಿ ಆಹಾರದ ಸಣ್ಣ ತುಣುಕು ಬಿದ್ದಿದ್ದರೂ ಕತ್ತಲೆ ಆಯಿತೆಂದರೆ ಅಲ್ಲಿಗೆ ಲಗ್ಗೆ ಇಡುತ್ತವೆ. ಒಂದುವೇಳೆ ಆಹಾರ ಮುಚ್ಚಿಡದಿದ್ದರೆ ಇವುಗಳ ದಾಳಿಯಿಂದ ಮತ್ತೆ ಅದನ್ನು ಮುಟ್ಟಿ ನೋಡಲು ಆಗುವುದಿಲ್ಲ. ಕಷ್ಟಪಟ್ಟು ತಯಾರಿಸಿದ ಆಹಾರವೂ ಹಾಳಾಗುತ್ತದೆ.

ಜಿರಳೆಗಳು (cockroaches) ಬಾರದಂತೆ ತಡೆಯಲು ರಾಸಾಯನಿಕ ದ್ರವಗಳು, ಸೀಮೆಸುಣ್ಣದ ಮಾದರಿ ಕೀಟನಾಶಕಗಳು ಇವೆ. ಆದರೆ ಇವುಗಳ ಬಳಕೆ ಸೂಕ್ತವಲ್ಲ. ಕಾರಣವೇನೆಂದರೆ ಇವು ಗಾಳಿಯ ಮೂಲಕ ಮನೆಯಿಡೀ ಹರಡುತ್ತವೆ. ಇವುಗಳ ಕಣಗಳು ಆಹಾರದ ಮೇಲೂ ಪಸರಿಸುತ್ತವೆ. ಇದರಿಂದ ಇಂಥ ಆಹಾರ ಸೇವನೆಗೆ ಯೋಗ್ಯವಾಗುವುದಿಲ್ಲ.

ಜಿರಳೆ (cockroaches) ನಿಯಂತ್ರಿಸುವ ರಾಸಾಯನಿಕ ಮದ್ದುಗಳ ಸೂಕ್ಷ್ಮಕಣಗಳು ಮೇಲ್ನೋಟ್ಟಕ್ಕೆ ಗೋಚರಿಸುವುದಿಲ್ಲ. ಆಹಾರ, ನೀರಿನ ಮೇಲೆ ಬಿದ್ದರೂ ತಿಳಿಯುವುದಿಲ್ಲ. ಇಂಥ ಆಹಾರ, ನೀರು ಸೇವಿಸುವುದರಿಂದ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ನಿತ್ಯವೂ ಇಂಥ ಕಲುಷಿತ ಆಹಾರ ಸೇವನೆ ಮಾರಕ ದುಷ್ಪರಿಣಾಮಕ್ಕೂ ಕಾರಣವಾಗಬಹುದು.

ಅಲರ್ಇ ಉಂಟು ಮಾಡುತ್ತವೆ.

ಬಹಳಷ್ಟು ಮಂದಿಗೆ ರಾಸಾಯನಿಕ ಕೀಟನಾಶಕಗಳು ಅಲರ್ಜಿ ಉಂಟು  ಮಾಡುತ್ತವೆ. ಇವುಗಳ ಪ್ರಭಾವದಿಂದ ಸತತ ನೇಗಡಿ, ಕೆಮ್ಮು, ದಮ್ಮು, ಚರ್ಮದ ತುರಿಕೆ, ಚರ್ಮದ ಮೇಲೆ ಗುಳ್ಳೆಗಳು, ವಾಂತಿ ಬೇಧಿ ಇತ್ಯಾದಿ

ಜಿರಳೆಗಳನ್ನು (cockroaches) ದ್ರವ ರೂಪದ, ಘನರೂಪದ ರಾಸಾಯನಿಕ ಕೀಟನಾಶಕಗಳಿಲ್ಲದೇ ನಿಯಂತ್ರಿಸುವುದು ಹೇಗೆ ? ಇದರ ಬಗ್ಗೆ ಸಾವಿರಾರು ವರ್ಷಗಳಿಂದಲೂ ಸಂಶೋಧನೆಗಳು ನಡೆದಿವೆ. ಇವುಗಳಿಂದ ಹೊರಹೊಮ್ಮಿದ ಸಾಕಷ್ಟು ಮದ್ದುಗಳು ನಿಷ್ಪಲ್ಲವಾಗಿವೆ. ಅಂದರೆ ಕಾಲಕ್ರಮೇಣ ಪ್ರಯೋಜನಕ್ಕೆ ಬಾರದಂತೆ ಆಗಿವೆ.

ರಾಸಾಯನಿಕಗಳಿಗೂ ನಿರೋಧಕತೆ

ಜಿರಳೆಗಳು (cockroaches) ಎಂಥಾ ಜೀವುಗಳೆಂದರೆ ಎಂಥಾ ರಾಸಾಯನಿಕಗಳಿಗೂ ನಿಧಾನವಾಗಿ ನಿರೋಧಕತೆ ಬೆಳೆಸಿಕೊಂಡು ಬದುಕಬಲ್ಲ ಶಕ್ತಿ ಇರುವಂಥವು. ಇದರಿಂದಾಗಿ ಆರಂಭದಲ್ಲಿ ಜಿರಳೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಎಂದು ಕಾಣುವ ರಾಸಯನಿಕಗಳು ಕ್ರಮೇಣ ಪ್ರಯೋಜನಕ್ಕೆ ಬಾರದಂತಾಗುತ್ತವೆ.

ಹಾಗಿದ್ದರೆ ಮಾರಕ ಜಿರಳೆಗಳ ನಿಯಂತ್ರಣ ಹೇಗೆ ? ಇವುಗಳ ನಿಯಂತ್ರಣಕ್ಕೆ ಮದ್ದೇ ಇಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಇವುಗಳನ್ನು ಸಾವಯವ ರೂಪದಲ್ಲಿ ನಿಯಂತ್ರಿಸುವ ಮದ್ದುಗಳು ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಬಳಕೆಯಲ್ಲಿವೆ. ಇಂಥ ಮದ್ದುಗಳಲ್ಲಿ ಒಂದು ಬಿಯರ್ !

ಜಿರಳೆ (cockroaches) ನಿಯಂತ್ರಣಕ್ಕೆ ಬಿಯರ್ (Beer) ಮದ್ದು !

ಅರೇ ಜಿರಳೆ (cockroaches) ನಿಯಂತ್ರಣಕ್ಕೆ ಬಿಯರ್ (Beer)ಮದ್ದೇ ! ಎಂದು ಆಶ್ಚರ್ಯವಾಗಿರಬಹುದಲ್ಲವೇ ?  ಇದರ ಬಗ್ಗೆ ಮಾಹಿತಿ ತಿಳಿಯದೇ ಇದ್ದಾಗ ಆಶ್ಚರ್ಯವಾಗುವುದು ಸಹಜ. ಆದರೆ ರಾಸಾಯನಿಕವಲ್ಲದ ಬಿಯರ್ ಹೇಗೆ ಜಿರಳೆಗಳನ್ನು ನಿಯಂತ್ರಿಸುತ್ತದೆ ಎಂಬ ಪ್ರಶ್ನೆಯೂ ಮೂಡುತ್ತದೆ.

ಜಿರಳೆಗಳಿಗೆ (cockroaches) ವಾಸನೆ ಗ್ರಹಿಸುವ ಶಕ್ತಿ ಅಪಾರವಾಗಿರುತ್ತದೆ. ಇವು ಬಿಯರ್ (Beer)ಹೊರ ಹೊಮ್ಮಿಸುವ ವಿಶಿಷ್ಟ ವಾಸನೆಗೆ ಆಕರ್ಷಿತವಾಗುತ್ತವೆ. ಹಾಗಿದ್ದರೆ ಇತರ ಆಲ್ಕೋಹಾಲ್ ಗಳಾದ ವಿಸ್ಕಿ, ರಮ್ ಇತ್ಯಾದಿಗಳಿಗೆ ಆಕರ್ಷಿತವಾಗುವುದಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತದೆ.

ಬಿಯರ್ (Beer) ಹೊರ ಹೊಮ್ಮಿಸುವ ಪರಿಮಳಕ್ಕೆ ಆಕರ್ಷಿತವಾದ ಹಾಗೆ ಇವುಗಳು ಇತರ ಆಲ್ಕೋಹಾಲ್ ಗೆ ಆಕರ್ಷಿತವಾಗುವುದಿಲ್ಲ. ಹಾಗಿದ್ದರೆ ಜಿರಳೆಗಳನ್ನು ತನ್ನತ್ತ ಸೆಳೆಯುವಂಥ ಯಾವಯಾವ ಗುಣಗಳು ಬಿಯರ್ ನಲ್ಲಿವೆ ? ಎಂಬ ಪ್ರಶ್ನೆಯೂ ಮೂಡಬಹುದಲ್ಲವೇ ? ಏಕೆ ನಿರ್ದಿಷ್ಟವಾಗಿ ಬಿಯರ್ ನತ್ತಲೇ ಆಕರ್ಷಿತವಾಗುತ್ತವೆ ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ.

ಬಿಯರ್ (Beer)ಬಳಸಿ ನಿಯಂತ್ರಿಸುವುದು ಹೇಗೆ ?

ಬಿಯರ್ ಬಳಸಿ ನಿಯಂತ್ರಣ ಮಾಡುವುದು ಹೇಗೆ ಎಂಬ ಪ್ರಸ್ನೆ ನಿಮ್ಮ ಮನಸಿನಲ್ಲಿ ಖಂಡಿತ ಮೂಡಿರುತ್ತದೆ. ಜೊತೆಗೆ ಯಾವ ಬ್ರಾಂಡ್ ಬಿಯರ್ ಬಳಸಬೇಕು ಎಂಬ ಪ್ರಸ್ನೆಯೂ ಮೂಡುತ್ತದೆ. ಬ್ರಾಂಡ್ ನತ್ತ ಮನುಷ್ಯರು ಮಾತ್ರ ಆಕರ್ಷಿತವಾಗುತ್ತಾರೆಯೇ ಹೊರತು ಜಿರಳೆಗಳಲ್ಲ.(cockroaches) ಹೀಗೆ ಹೇಳಿದಾಗ ನಗು ಬರುವುದು ಸಹಜ !

ಅಂಚಿರುವ ಅಂದರೆ ಹಾಕಿದ ದ್ರವ ಹೊರಗೆ ಚೆಲ್ಲದ ರೀತಿ ಸುತ್ತಲೂ ಗೋಡೆ ಇರುವ ತಟ್ಟೆಗ ಅಲ್ಪ ಪ್ರಮಾಣದಲ್ಲಿ ಬಿಯರ್ ಸುರಿಯಬೇಕು. ಅಡುಗೆಮನೆ, ಶೌಚಾಲಯ ಮತ್ತು ಎಲ್ಲೆಲ್ಲಿ ಜಿರಳೆಗಳ ಕಾಟ ಜಾಸ್ತಿಯಿದೆಯೋ ಅಲ್ಲೆಲ್ಲ ಬಿಯರ್ ಇರುವ ತಟ್ಟೆಗಳನ್ನು ಇಡಬೇಕು.

ಕತ್ತಲು ಕವಿದ ನಂತರ ಮನುಷ್ಯರ ಭಯವಿಲ್ಲದೇ ಬಿಯರ್ ತುಂಬಿದ ಇರುವ ತಟ್ಟೆಗಳತ್ತ ಜಿರಳೆಗಳು(cockroaches) ಆಕರ್ಷಿತವಾಗಿ ಅತ್ತ ಧಾವಿಸುತ್ತವೆ. ತಟ್ಟೆಯೊಳಗೆ ಬಿದ್ದು ಬಿಯರ್ ಹೀರಿ ಹೊಟ್ಟೆ ಉಬ್ಬರಿಸಿಕೊಂಡು ಹೊರ ಬರಲಾಗದೇ ಅಲ್ಲೇ ಒದ್ದಾಡಿ ಸಾಯುತ್ತವೆ. ಹೀಗೆ ತಟ್ಟೆಯಲ್ಲಿ ಬಿದ್ದ ಜಿರಳೆಗಳನ್ನು ಸಂಗ್ರಹಿಸಿ ಹೊರಗೆ ಹಾಕಬಹುದು.

ಹೀಗೆ ಸಾವಯವ ವಿಧಾನದಲ್ಲಿ ಜಿರಳೆಗಳನ್ನು ನಿಯಂತ್ರಿಸುವುದರಿಂದ ಪರಿಸರದ ಆರೋಗ್ಯ, ಮನುಷ್ಯರು ಮತ್ತು ಇತರ ಪ್ರಾಣಿಗಳ ಆರೋಗ್ಯಕ್ಕೂ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಇಷ್ಟೆಲ್ಲ ಓದಿದ ನಂತರ ಬಿಯರ್ ಗೆ ಇಂಥ ಶಕ್ತಿ ಇರುವುದೇ ಎಂದು ಆಶ್ಚರ್ಯವಾಯಿತೇ ! ಹಾಗಿದ್ದರೆ ಇಂದೇ ಜಿರಳೆಗಳ (cockroaches) ಮೇಲೆ ಬಿಯರ್ (Beer) ತಂತ್ರ ಪ್ರಯೋಗಿಸಿ ನೋಡಿ

LEAVE A REPLY

Please enter your comment!
Please enter your name here