ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ “ಗಂಗಾ ಕಲ್ಯಾಣ ಯೋಜನೆ” ಅಡಿ ಉಚಿತವಾಗಿ ಕೊಳವೆಬಾವಿ ಸೌಲಭ್ಯ ನೀಡಲು ಅರ್ಹ ಕೃಷಿಕರಿಂದ ಅರ್ಜಿ ಆಹ್ವಾನಿಸಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ರಾಜ್ಯ ಸರ್ಕಾರದ ಈ ಯೋಜನೆ ಸಹಾಯವಾಗಲಿದೆ.
ಗಂಗಾ ಕಲ್ಯಾಣ ಯೋಜನೆ ಅಡಿ ಪ್ರಸ್ತುತ ಪರಿಶಿಷ್ಟ ಜಾತಿ/ ಪಂಗಡಗಳ ರೈತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ರೈತರ ಕೃಷಿಭೂಮಿಯಲ್ಲಿ ಕೊಳವೆ ಬಾವಿ ಕೊರೆಸುವುದರ ಜೊತೆಗೆ ಪಂಪ್ ಸೆಟ್ ಅಳವಡಿಸಿಲು ಸಹಾಯಧನವನ್ನೂ ನೀಡಲಾಗುತ್ತದೆ.
ಈ ಯೋಜನೆ ಅಡಿ ಒಂದೂವರೆ ಲಕ್ಷದಿಂದ ಮೂರುವರೆ ಲಕ್ಷ ರೂಪಾಯಿಗಳ ತನಕ ರಾಜ್ಯ ಸರ್ಕಾರದಿಂದ ಸಹಾಯ ಧನ ಪಡೆಯಬಹುದು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಇದರ ಸಹಾಯ ಲಭ್ಯವಾಗುತ್ತದೆ. ಒಂದೂವರೆ ಎಕರೆಯಿಂದ ಐದು ಎಕರೆ ತನಕ ಕೃಷಿಭೂಮಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಯೋಜನೆ ಅಡಿ ಅರ್ಜಿ ಸಲ್ಲಿಸಲು ನವೆಂಬರ್ ೨೯, ೨೦೨೩ ಕೊನೆ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಪೋರ್ಟಲಿಗೆ ಭೇಟಿ ನೀಡಬಹುದು. ಅಗತ್ಯವಿರುವ ದಾಖಲೆಗಳೆಂದರೆ ಪರಿಶಿಷ್ಟ ಜಾತಿ/ ಪಂಗಡ ಪ್ರಮಾಣ ಪತ್ರ, ಆದಾಯ ಮಿತಿ ಪ್ರಮಾಣಪತ್ರ ( ಗ್ರಾಮೀಣರಿಗೆ ವಾರ್ಷಿಕ ಒಂದೂವರೆ ಲಕ್ಷ, ನಗರ ವಾಸಿಗಳಿಗೆ ಎರಡು ಲಕ್ಷ ಮಿತಿ), ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ ೨೧ ವರ್ಷ, ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ, ಪಹಣಿ, ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್