ಬೆಂಗಳೂರು: (ಜಿಕೆವಿಕೆ) ನವೆಂಬರ್ 20: ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ 17 ರಿಂದ ಕೃಷಿಮೇಳ ಚಾಲನೆಗೊಂಡಿತ್ತು. ನಾಡಿನ ಮೂಲೆಮೂಲೆಗಳಿಂದ ಕೃಷಿಕರು, ಆಸಕ್ತರು, ಕೃಷಿವಿಜ್ಞಾನಿಗಳು, ಉದ್ಯಮಿಗಳು ಬಂದು ಸಂಭ್ರಮದಿಂದ ಭಾಗವಹಿಸಿದ್ದರು. ಇಂದು ನವೆಂಬರ್ 20 ರ ಸಂಜೆ ಕೃಷಿಮೇಳ ಮುಕ್ತಾಯಗೊಂಡಿತು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿಮೇಳ – 2023ರ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (20-11-2023) ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಮತ್ತು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು ಹಾಗೂ ವಸ್ತು ಪ್ರದರ್ಶನದ ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಯಿತು
ಕಾರ್ಯಕ್ರಮದಲ್ಲಿ ಜ್ಯೋತಿಷಿ ಶ್ರೀ ಮಹರ್ಷಿ ಆನಂದ್ ಗುರೂಜಿ, ಡಾ: ಎಸ್.ವಿ. ಸುರೇಶ, ಕುಲಪತಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಆಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಿಂದ 15 ತಂಡಗಳಲ್ಲಿ 900 ದೇಸಿ ವಿದ್ಯಾರ್ಥಿಗಳು ಭಾಗವಹಿಸಿ ಸಮಾರೋಪ ಸಮಾರಂಭಕ್ಕೆ ಮೆರಗು ನೀಡಿದರು.
ಕೃಷಿಮೇಳ – 2023 ಕೊನೆಯ ದಿನ (20-11-2023) 3.78 ಲಕ್ಷ ರೈತರು / ಸಾರ್ವಜನಿಕರು ಭಾಗವಹಿಸಿದ್ದರು, 8,500 ಜನ ಕೃಷಿ ವಿಶ್ವವಿದ್ಯಾನಿಲಯದ ರಿಯಾಯಿತಿ ದರದ ಭೋಜನಾಲಯದಲ್ಲಿ ಮಧ್ಯಾಹ್ನದ ಊಟ ಮಾಡಿದರು ಹಾಗೂ 1.45 ಕೋಟಿಯ ವಹಿವಾಟಾಗಿದೆ.