ಮಣ್ಣಿನ ಆರೋಗ್ಯ ಸೂಚಕ ಯಾವುದು ಗೊತ್ತೆ

0

ನಮ್ಮಲ್ಲಿನ ಮಣ್ಣುಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ಮಣ್ಣಿನ ಆರೋಗ್ಯ ಸೂಚಕವಾಗಿ ಗಮನಿಸುವ ಮೊದಲ ಅಂಶವೇ ಆ ಮಣ್ಣಲ್ಲಿ ಎರೆಹುಳುಗಳು ಇವೆಯೇ ಎಂಬುದು ! ಬಹಳ ಸುಲಭವಾಗಿ  ಎರೆಹುಳುಗಳನ್ನು ನಾವು ಗುರುತಿಸಬಹುದು.

ನಮ್ಮ ಮಣ್ಣಲ್ಲಿ ಎರೆಹುಳುಗಳು ಇವೆಯೆಂದಲ್ಲಿ, ಆ ಮಣ್ಣು ಎರೆಹುಳುಗಳು ವಾಸಿಸಲು ಪೂರಕವಾದ ವಾತಾವರಣವನ್ನು ಹೊಂದಿದೆ ಎಂದೇ ಅರ್ಥ. ಅಂದರೆ:

  • ಮಣ್ಣು ತಂಪಾಗಿದೆ
  • ಮಣ್ಣಲ್ಲಿ ಎರೆಹುಳುಗಳಿಗೆ ಆಹಾರವಾದ ಸಾವಯವ ವಸ್ತುಗಳಿವೆ
  • ಆ ಮಣ್ಣಿನ ಬಣ್ಣ ಸ್ವಲ್ಪ ದಟ್ಟವಾಗಿದೆ
  • ಆ ಮಣ್ಣಲ್ಲಿ ಸುವಾಸನೆಯಿದೆ
  • ಆ ಮಣ್ಣು ಹುಡಿಹುಡಿಯಾಗಿದೆ
  • ಆ ಮಣ್ಣಲ್ಲಿ ತೇವಾಂಶದ ಪ್ರಮಾಣವೂ ಇದೆ.
  • ಉತ್ತಮ ಮಣ್ಣಿನ ಗುಣಲಕ್ಷಣಗಳು ಆ ಮಣ್ಣಲ್ಲಿ ಕಂಡಿವೆಯೆಂದರೆ,
  • ಆ ಮಣ್ಣು ಜೀವಂತವಾಗಿದೆ
  • ಸಜೀವಿಯಾಗಿದೆ ಎಂದೇ ಭಾವಿಸಬಹುದು.

ಅಂತಹ ಮಣ್ಣನ್ನು ಇನ್ನಷ್ಟು ಸುಧಾರಿಸುವತ್ತ – ಇನ್ನಷ್ಟು ಮಣ್ಣಲ್ಲಿ ವಾಸಿಸುವ ವಿವಿಧ ಬಗೆಯ ಮಣ್ಣುಜೀವಿಗಳ ಸಂಖ್ಯೆ ಮತ್ತು ಪ್ರಮಾಣ ಹೆಚ್ಚಿಸುವತ್ತ ಗಮನಹರಿಸಬೇಕು.

LEAVE A REPLY

Please enter your comment!
Please enter your name here