ಸ್ಟಿಕ್ಕಿ ಟ್ರಾಫ್ಸ್ ಎಂದು ಸಾಮಾನ್ಯವಾಗಿ ಕರೆಯ;ಲ್ಪಡುವ ಅಂಟು-ಆಧಾರಿತ ಬಲೆಗಳು ಬೆಳೆಗಳನ್ನು ಬಾಧಿಸುವ ಕೀಟಗಳನ್ನು ಹಿಡಿಯಲು, ಒಂದು ಪ್ರದೇಶದಲ್ಲಿ ಬೆಳೆಗಳನ್ನು ಬಾಧಿಸುವ ಯಾವಯಾವ ಕೀಟಗಳು ಇವೆಯೆಂದು ತಿಳಿಯಲು ಬಳಸಲಾಗುತ್ತದೆ. ವಿಶಿಷ್ಟವಾಗಿ ಜಿಗುಟಾದ ಕಾರ್ಡ್‌ಗಳು ಅಂಟಿನ ಮೇಲ್ಮೈಯನ್ನು ರಕ್ಷಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಜಿಗುಟಾದ ಬಲೆಗಳು ಯಾವುದೇ ಕೀಟನಾಶಕಗಳನ್ನು ಹೊಂದಿರುವುದಿಲ್ಲ, ಬದಲಾಗಿ ಕೆಲವು ನಿರ್ದಿಷ್ಟ ಕೀಟಗಳಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಬಣ್ಣ, ಸುಗಂಧದಿಂದ ತುಂಬಿರುತ್ತವೆ.
ಜಿರಳೆಗಳು, ಜೇಡಗಳು,ಜೀರುಂಡೆಗಳು, ತೆವಳುವ ಕೀಟಗಳು, ಹುಳಗಳು ಮತ್ತು ಚೇಳುಗಳನ್ನು ನಿಯಂತ್ರಿಸಲು ಸಹ ಬಳಸಬಹುದು. ಕೀಟ ನಿಯಂತ್ರಣ ತಪಾಸಣೆಯ ಸಮಯದಲ್ಲಿ ಕೀಟಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸಲು ವೃತ್ತಿಪರರು ಬಳಸುತ್ತಾರೆ.
ಜಿಗುಟಾದ ಬಲೆಗಳನ್ನು ಎಲ್ಲಿ ಇಡಬೇಕು?
ಬೆಳೆ ಇರುವ ಹೊಲ ಗದ್ದೆಗ:;್;ಇ ಅಂಟುಬಲೆಗಳನ್ನು ಇಡಬೇಕು. ಒಂದು ಎಕರೆಯಲ್ಲಿ ಎಷ್ಟು ಬಲೆ ಇಡಬೇಕು ಎಂಬುದನ್ನು ತಜ್ಞರು ಆಯಾ ಬೆಳೆಗೆ ಅನುಗುಣವಾಗಿ ತಿಳಿಸುತ್ತಾರೆ. ಒಂದು ವೇಳೆ ನಿರ್ದಿಷ್ಟ ಕೀಟಗಳು ಹೆಚ್ಚಾಗಿದ್ದರೆ ಬಲೆಗಳ ಸಂಖ್ಯೆ ಹೆಚ್ಚಿಸಬಹುದು.
ಜಿಗುಟಾದ ಅಂಟು ಬಲೆಗಳನ್ನು ಎಲ್ಲಿ ಖರೀದಿಸಬಹುದು?
ಬೆಂಗಳೂರಿನಲ್ಲಿ ಸುಸಜ್ಜಿತ ಸಂಶೋಧನೆ, ಅಭಿವೃದ್ಧಿ ಘಟಕ ಹೊಂದಿರುವ ಬ್ಯಾರಿಕ್ಸ್ ಕೃಷಿ ವಿಜ್ಞಾನ ಸಂಸ್ಥೆಯು ಅಂಟು ಬಲೆಗಳನ್ನು ತಯಾರಿಸುತ್ತದೆ. ನೀಲಿ, ಬಿಳಿ ಮತ್ತು ಹಳದಿ ಬಣ್ಣದ ಬಲೆಗಳು ದೊರೆಯುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಬ್ಯಾರಿಕ್ಸ್ ಕಚೇರಿಯನ್ನು ಸಂಪರ್ಕಿಸಬಹುದು
ದೂರವಾಣಿ ಸಂಖ್ಯೆ:99008 00033