ತೋಟಗಾರಿಕೆಯಲ್ಲಿ ಹೆಚ್ಚು ಫಸಲು ಪಡೆಯಬೇಕೇ ? ಈ ವಿಧಾನ ಅನುಸರಿಸಿ

0
ಲೇಖಕರು: ಶಿವಾನಂದ ಕಳವೆ

ನೆಟ್ಟಗಿಡಗಳನ್ನ ಶಿವಾನಂದ ಕಳವೆ ನೆಟ್ಟಿಗೆ ಆಗಾಗ ಹಾಕ್ತಾರೆ. ನೆಟ್ಟಿಗರು ನೋಡಿದ್ದಾರೆ. ನಾನೂ ಮೊನ್ನೆ ಹೋಗಿದ್ದೆ. ಅವರು ನೆಟ್ಟಗಿಡ ನೆಟ್ಟಗಾಗುತ್ತಿವೆ…ನೆಟ್ಟಿಗರ ‘ಕೆಟ್ಟ ನೋಟ’ ಕಾರಣದಂತಿದೆ

ಇದೊಂದು ರೀತಿ ಆಫ್ರಿಕಾ ದೇಶದ ಅಪೌಷ್ಠಿಕತೆಯಲ್ಲಿ ನರಳುತ್ತಿರುವವರ ನೆನಪಿಸುವಷ್ಟು ಒಣಗುತ್ತಿವೆ. ನನ್ನ ಹಳೆಯ ದೋಸ್ತ ಶಿವಾನಂದ ತೋಟ ತೋರಿಸುತ್ತಿದ್ದಂತೆ ಅದನ್ನು ಕಂಡು ಏನ್ ಶಿವಾ….ನೆಟ್ಟಗಾಗುತ್ತಿವೆ. ಗಿಡಕ್ಕೆ ಜಲತಜ್ಞನಿಂದಲೇ ಜಲ ಇಲ್ಲ. ಏಕೆ ಹೀಗೆ ಎಂದೆಇದು ಅಕ್ಷರಶಃ ಸತ್ಯ. ಶಿವಾನಂದನ ಪರಿಸರದ ಕೈತೋಟಕ್ಕೆ ಹೋದಾಗ ಗಿಡಗಳು ಬಾಡಿ ಹೋಗಿದ್ದವು. ನೆಲ ಕಬ್ಬಿಣದ ಥರ ಗಟ್ಟಿ ಕಾಂಕ್ರೆಟ್ ಇದ್ದಂತಿತ್ತು.

ಶಿವ ತನ್ನ ಕೃಷಿ ಜ್ಞಾನ ಹರವಿದಂತೆ ಮನಸ್ಸಿನಲ್ಲಿ ಅಂದುಕೊಂಡಂತೆ ಇದು ರೋಗವಲ್ಲ.ಹಳೇಯ ವಿಧಾನವನ್ನ ಹೊಸ ಜನರೆಷನ್ ಕೈಗೆತ್ತಿಕೊಂಡ ವಿಧಾನ. ಚಳಿಗಾಲದ ಸಮಯದಲ್ಲಿ ಗಿಡಗಳನ್ನು ಹೀಗೆ ಮಾಡಬೇಕು. ಅವುಗಳನ್ನೂ ಉಪವಾಸ ಕೆಡವಬೇಕು. ಎಲೆಗಳೆಲ್ಲ ಒಂದು ಸಲ ಬಾಡಬೇಕು. ಆಗಲೆ ಅವು ಹೊಸತನವನ್ನ ಕಾಣುತ್ತವೆ.

ಈ ರೀತಿ ಗಿಡ ಒಣಗಿದ ನಂತರ ನೀರು ಕೊಡಬೇಕು. ಆಗ ಹೊಸ ಚಿಗುರುಗಳು ಬರುತ್ತವೆ. ಆ ಚಿಗುರು ಬಂದಾಗ ಅವಕ್ಜೆ ಯವ್ವನದ ಕಳೆ. ಗಿಡ ಚಿಗುರುವಾಗ ಹೂ ಬಿಡುತ್ತವೆ. ಕಾಯಿಗಳು ಚಿಗುರುತ್ತವೆ. ಬೆಜಾನ್ ಕಾಯಿಗಳು ಸಿಗುತ್ತವೆ. ಅದು ಗುಣಾತ್ಮಕವಾಗಿರುತ್ತವೆ. ಈ ರೀತಿ ಕೃಷಿ ಮಾಡಿದಾಗ ಮಾತ್ರ ಫಸಲು ಸಮೃದ್ಧವಾಗಿ ಬರುತ್ತವೆ.

ನಾವು ಗಿಡಗಳ ಅಧ್ಯಯನ ಮಾಡುತ್ತಿದ್ದಾಗ ಇವೆಲ್ಲ ಅರ್ಥವಾಗುತ್ತದೆ. ಗಿಡಗಳದ್ದೂ ನಮ್ಮಂತೆ ಜೀವನ ಕ್ರಮ ಇದೆ. ಅದನ್ನ ಸಂಬಂಧಿಸಿದ ತಳಿಗಳ ಆಧಾರದಲ್ಲಿ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಅಕಾಲಿಕವಾಗಿ ಕಾಯಿ, ಹೂ ಬಿಡುತ್ತವೆ. ಆದರೆ ಅವುಗಳು ಆರೋಗ್ಯಕರವಾದ ಫಸಲಲ್ಲ. ಅಷ್ಟೊಂದು ಪ್ರಯೋಜನಕ್ಕೆ ಬರುವುದೂ ಇಲ್ಲ ಎಂಬ ಕೃಷಿಯ ಅನುಭವವಾಣಿ ತೆರೆದಿಟ್ಟಾಗ ನಮಗೂ ಕೃಷಿ ಪ್ರಪಂಚಕ್ಕೆ ಹೊರಳುವುದಕ್ಕೆ ನೀಡುವ ಉದ್ಧಿಪನದ ಮಾತಂತಿತ್ತು…

ಬಿಳಿ ಪಪ್ಪಾಯಿ, ಪಾಕಿಸ್ತಾನದ ಬೆಳೆ, ಕ್ಯಾನ್ಸರ್ ಉಪಯೋಗಕ್ಕೆ ಬರುವ ಎಲೆಗಳು, ಪಾನಕದ ಎಲೆ, ನೀರಜಂಬೆ ಹೀಗೇ ಥರಾವರಿ ಮಾಹಿತಿಯನ್ನ ತಲೆಗೆ ತುಂಬಿಸಿಕೊಟ್ಟಾಗ ಅಪ್ಪನ ನೆನಪಾಯ್ತು…ಅಪ್ಪ ಬೆಳೆದ ಗಿಡಗಳ ವಿವರ ಹಂಚಿಕೊಂಡು ನಿಸರ್ಗದ ಮಡಿಲಲ್ಲಿ ನಾವಿದ್ದೂ ನಿಷ್ಪ್ರಯೋಜಕರಾಗಿದ್ದೇವೆ ಅನಿಸಿತು. ನಾಡು, ಮನುಷ್ಯನ ಜೀವನ ಕ್ರಮ ಬೇಗ ಅರಿಯಬಹುದು. ಆದರೆ ಕಾಡು, ಕಾಡುಗಿಡ, ಪ್ರಾಣಿ ಗಳ ಜೀವಗಾಥೆ ಅರಿಯುವುದು ಒಂದು ಸವಾಲೇ ಸರಿ ಎನಿಸಿತು.

LEAVE A REPLY

Please enter your comment!
Please enter your name here