ನಿನ್ನೆ ರಾಜ್ಯದಲ್ಲಿ ಒಣಹವೆ ಮುಂದುವರೆದಿತ್ತು. ರಾಜ್ಯದಲ್ಲಿಯೇ ಅತೀ ಕಡಿಮೆ ಉಷ್ಣಾಂಶ 12. 01 ಡಿಗ್ರಿ ಸೆಲ್ಸಿಯಸ್ ಬಳ್ಳಾರಿಯಲ್ಲಿ ದಾಖಲಾಗಿದೆ.
ಇವತ್ತಿನ ವಾತಾವರಣದ ಮುಖ್ಯ ವಿದ್ಯಮಾನಗಳು:
ಶ್ರೀಲಂಕಾ ಕರಾವಳಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತ ಅದೇ ತೀವ್ರತೆ ಉಳಿಸಿಕೊಂಡು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಉತ್ತರ ಅಕ್ಷಾಂಶ 6.08, ಪೂರ್ವ ಅಕ್ಷಾಂಶ 80. 08 ಡಿಗ್ರಿ ಈ ಪ್ರದೇಶದಲ್ಲಿ ಶ್ರೀಲಂಕಾದ ಭಟ್ಟಿಕಲೋವಾ ಸ್ಥಳದಿಂದ 140 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.
ಈ ವಾಯುಭಾರ ಕುಸಿತ ನೈರುತ್ಯ ದಿಕ್ಕಿನಲ್ಲಿ ಚಲಿಸಿ ಕನ್ಯಾಕುಮಾರಿ ಕರಾವಳಿ ಪ್ರದೇಶಕ್ಕೆ ಬರುವ ಸಾಧ್ಯತೆಗಳಿವೆ. ಇದೇ ಸಮಯದಲ್ಲಿ ಇಂದುಮಧ್ಯರಾತ್ರಿ ಅಥವಾ ನಾಳೆ ಮುಂಜಾನೆ ದುರ್ಬಲವಾಗಿ ಷ್ಪಷ್ಟವಾಗಿ ಗುರುತಿಸಲಾದ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಲೋ ಪ್ರೆಶರ್ ಏರಿಯಾ ಆಗಿ ದುರ್ಬಲವಾಗುತ್ತದೆ.
ಮುಂದಿನ ಐದು ದಿನದ ಮುನ್ಸೂಚನೆ:
ಮುಂದಿನ ಐದು ದಿನ ರಾಜ್ಯದಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆದರೆ ತೀವ್ರ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನ ಕೆಲವು ಕಡೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿ ಇಂದು ಆಕಾಶವೂ ಮೋಡವಾಗಿರುತ್ತದೆ. ತಾಪಮಾನ ಕುಸಿಯುವ ಸಾಧ್ಯತೆಗಳಿವೆ. ಒಂದೆರಡು ಕಡೆ ಗಾಳಿಯ ವೇಗ ಹೆಚ್ಚಾಗುವ ಕಾರಣ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗೆ ಮುನ್ಸೂಚನೆ :
ನಗರದಲ್ಲಿ ಇಂದು ಆಕಾಶವು ಮೋಡವಾಗಿರುತ್ತದೆ. ಗರಿಷ್ಠ ಉಷ್ಣಾಂಶ 27, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆ ಇರುತ್ತದೆ. ನಾಳೆ ಆಕಾಶವು ಭಾಗಶಃ ಮೋಡ ಕವಿದಂತೆ ಇರುತ್ತದೆ. ಮುಂಜಾನೆ ಮಂಜು ಕವಿಯುವ ಸಾಧ್ಯತೆ ಇರುತ್ತದೆ.